Advertisment

ಅಪ್ಪನಿಂದ ಡ್ರಾಪ್​ ತೆಗೆದುಕೊಂಡಿದ್ದ ಮಗಳು ಇನ್ನಿಲ್ಲ.. ಆದರೂ 12 ಜನರಿಗೆ ಬೆಳಕಾದ ಸಂಧ್ಯಾ

author-image
Bheemappa
Updated On
ಅಪ್ಪನಿಂದ ಡ್ರಾಪ್​ ತೆಗೆದುಕೊಂಡಿದ್ದ ಮಗಳು ಇನ್ನಿಲ್ಲ.. ಆದರೂ 12 ಜನರಿಗೆ ಬೆಳಕಾದ ಸಂಧ್ಯಾ
Advertisment
  • ಇಡೀ ದೇಹವನ್ನು ದಾನ‌ಮಾಡಲು ಮುಂದಾಗಿದ್ದ ಕುಟುಂಬಸ್ಥರು
  • ಮಗಳು ಇನ್ನಿಲ್ಲವಾದರು ಕುಟುಂಬದಿಂದ ಸಾರ್ಥಕತೆಯ ಕೆಲಸ
  • ಹೆಲ್ಮೆಟ್ ಧರಿಸಿ ಹೋಗಿದ್ದರೇ ಸಂಧ್ಯಾ ಅವರು ಬದುಕಿರುತ್ತಿದ್ದರು

ಕೋಲಾರ: ಸರ್ಕಾರ ಹಾಗೂ ಟ್ರಾಫಿಕ್ ಪೊಲೀಸರು ಹೆಲ್ಮೆಟ್ ಧರಿಸಿ ಬೈಕ್​ನಲ್ಲಿ ಹೋಗಿ ಎಂದು ಎಷ್ಟು ಹೇಳಿದರೂ ಜನ ಕೇಳಲ್ಲ. ಈ ರೀತಿ ಅವರ ಮಾತು ಕೇಳದಿದ್ದರೇ ಯಾವ ತರ ಘಟನೆಗಳು ನಡೆದು ಹೋಗುತ್ತವೆ ಎನ್ನುವುದಕ್ಕೆ ಕೋಲಾರದ ಡಾ.ಸಂಧ್ಯಾ ಅವರ ಜೀವವೇ ಇಲ್ಲಿ ಸಾಕ್ಷಿ. ಡಾ.ಸಂಧ್ಯಾ ಇನ್ನಿಲ್ಲವಾದರೂ ಅವರು ಇಂದು 12 ಜನರಿಗೆ ಬೆಳಕಾಗಿದ್ದಾರೆ.

Advertisment

publive-image

ಡಾ.ಸಂಧ್ಯಾ ಅವರು ಎಂದಿನಂತೆ ಮನೆಯಿಂದ ಕೆಲಸಕ್ಕೆ ಹೋಗುತ್ತಿದ್ದರು. ದುರದೃಷ್ಟ ಅನಿಸುತ್ತೆ ಡಿಸೆಂಬರ್ 6 ರಂದು ಅವರಿಗೆ ಬಸ್ ಮಿಸ್ ಆಗಿ ಬಿಡುತ್ತದೆ. ಹೀಗಾಗಿ ತಂದೆಯ ಬೈಕ್​ನಲ್ಲಿ ಡ್ರಾಪ್ ತೆಗೆದುಕೊಂಡಿರುತ್ತಾರೆ. ಬೈಕ್​ನಲ್ಲಿ ಹೋಗುವಾಗ ಹೆಲ್ಮೆಟ್ ಧರಿಸಿದೇ ಹಿಂದೆ ಕುಳಿತುಕೊಂಡಾಗ ಕೋಲಾರದ ಕೆಜಿಎಫ್​ನಲ್ಲಿ ಬಳಿ ಆಕಸ್ಮಿಕವಾಗಿ ಕೆಳಕ್ಕೆ ಬೀಳುತ್ತಾರೆ. ಸ್ಥಳೀಯರ ಸಹಾಯದಿಂದ ತಕ್ಷಣ ಅವರನ್ನು ಕೋಲಾರದ ಜಾಲಪ್ಪ ಆಸ್ಪತ್ರೆಗೆ ದಾಖಲು ಮಾಡಲಾಗುತ್ತದೆ. ಬೈಕ್​ನಲ್ಲಿ ಇರುವಾಗ ಹೆಲ್ಮೆಟ್ ಧರಿಸದೇ ಇದ್ದಿದ್ದಕ್ಕೆ ಸಂಧ್ಯಾ ತಲೆಗೆ ಬಲವಾದ ಗಾಯಗಳು ಆಗಿ ಬ್ರೈನ್ ಪ್ರಾಬ್ಲಂ ಆಗಿರುತ್ತದೆ. ಹೀಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿರುತ್ತದೆ.

ಆದರೆ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಂಧ್ಯಾ ಕೊನೆಯುಸಿರೆಳೆಯುತ್ತಾರೆ. ಮಗಳ ದೇಹವನ್ನು ಮಣ್ಣಿಗೆ ಹಾಕಲು ಇಷ್ಟ ಇಲ್ಲದೆ ಇಡೀ ದೇಹವನ್ನು ದಾನ ಮಾಡಲು ಪೋಷಕರು ಮುಂದಾಗಿದ್ದರು. ಹೀಗಾಗಿಯೇ ಬಿಜಿಎಸ್​, ಜಾಲಪ್ಪ ಆಸ್ಪತ್ರೆ ಅಧಿಕಾರಿಗಳ ಜೊತೆ ಈ ಕುರಿತು ಮಾತನಾಡಿದ್ದರು.

ಇದನ್ನೂ ಓದಿಚೆನ್ನೈ-ಬೆಂಗಳೂರು ಹೈವೇಯಲ್ಲಿ ಭಯಾನಕ ಅಪಘಾತ.. ಬಸ್​ಗೆ ಭೀಕರವಾಗಿ ಡಿಕ್ಕಿ ಹೊಡೆದ ಕಂಟೈನರ್

Advertisment

publive-image

ಹೀಗಾಗಿ ಆಸ್ಪತ್ರೆಗೆ ಮಗಳ 12 ಅಂಗಾಂಗ ದಾನ ಮಾಡಿ ಮಣ್ಣು ಮಾಡಿದೇವು. ಇಂದು ನನ್ನ ಮಗಳಿಂದ 12 ಕುಟುಂಬಸ್ಥರು ಖುಷಿಯಾಗಿದ್ದಾರೆ. ಇದರಿಂದ ನನಗೂ, ನನ್ನ ಇನ್ನೊಬ್ಬಳು ಮಗಳಿಗೆ ಒಳ್ಳೆದಾಗುತ್ತದೆ ಎಂದು ಭಾವಿಸಿದ್ದೇವೆ ಎಂದು ಸಂಧ್ಯಾ ತಾಯಿ ಹೇಳಿದ್ದಾರೆ. ಒಂದು ವೇಳೆ ಹೆಲ್ಮೆಟ್ ಹಾಕಿದ್ದರೇ ಮಗಳು ಬದುಕುಳಿತ್ತಿದ್ದಳು. ಹೀಗಾಗಿ ಹೊರಗಡೆ ಬೈಕ್​ನಲ್ಲಿ ಹೋಗುವಾಗ ದಯವಿಟ್ಟು ಎಲ್ಲರೂ ಹೆಲ್ಮೆಟ್ ಹಾಕಿ ಎಂದು ಮೃತಳ ತಾಯಿ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment