newsfirstkannada.com

ಯುವಕ ರಾಕೇಶ್​​​ ಅನುಮಾನಾಸ್ಪದ ಸಾವು; ಉಳಿದ ಆರೋಪಿಗಳನ್ನು ಅರೆಸ್ಟ್​ ಮಾಡಿ ಎಂದು ಒತ್ತಾಯ

Share :

Published July 31, 2023 at 6:44pm

    ಯುವಕ ರಾಕೇಶ್​​​ ಅನುಮಾನಾಸ್ಪದ ಸಾವು

    ಪೈಶಾಚಿಕ ಕೃತ್ಯ ಖಂಡಿಸಿ ಭಾರೀ ಆಕ್ರೋಶ..!

    ಆರೋಪಿಗಳ ಬಂಧನಕ್ಕೆ ಸ್ಥಳೀಯರ ಒತ್ತಾಯ

ಕೋಲಾರ: ಯುವಕ ರಾಕೇಶ್​​​ ಅನುಮಾನಾಸ್ಪದ ಸಾವು ಪ್ರಕರಣ ಸಂಬಂಧ ತಪ್ಪಿತಸ್ಥರನ್ನು ಶಿಕ್ಷಿಸಿ ಎಂದು ಖಂಡಿಸಿ ಸ್ಥಳೀಯ ಸಂಘಟನೆಗಳು ಕಾಲ್ನಡಿಗೆ ಜಾಥ ಆಯೋಜಿಸಿದ್ದವು. ಇಂದು ಚಲ್ದಿಗಾನಹಳ್ಳಿಯಿಂದ ಶ್ರೀನಿವಾಸಪುರ ತಾಲೂಕು ಕಚೇರಿವರೆಗೆ ಹಮ್ಮಿಕೊಂಡಿದ್ದ ಕಾಲ್ನಡಿಗೆ ಜಾಥದಲ್ಲಿ ದಲಿತ ಹೋರಾಟಗಾರರು, ಸಾಹಿತಿಗಳು, ಪ್ರಗತಿಪರ ಸಂಘಟನೆಗಳ ಮುಖಂಡರು ಭಾಗಿಯಾಗಿದ್ದರು. ರಾಜ್ಯ ಸರ್ಕಾರಕ್ಕೆ ಕೂಡಲೇ ಉಳಿದ ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.

ಚಲ್ದಿಗಾನಹಳ್ಳಿ ಗ್ರಾಮದ ರಾಕೇಶ್ (17) ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದನು. ಯುವಕ ಚಿಂತಾಮಣಿಯ ಕಾಲೇಜ್​ವೊಂದರಲ್ಲಿ ಡಿಪ್ಲೋಮಾ ವ್ಯಾಸಂಗ ಮಾಡುತ್ತಿದ್ದ. ಜುಲೈ 18 ರಂದು ಕೃಷಿ ಹೊಂಡದಲ್ಲಿ ರಾಕೇಶ್ ಶವ ಪತ್ತೆಯಾಗಿತ್ತು. ಮಗನನ್ನು ಕೊಲೆ ಮಾಡಲಾಗಿದೆ ಎಂದು ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ಪೊಲೀಸರು ಈಗಾಗಲೇ ಮೂವರು ಆರೋಪಿಗಳನ್ನ ಅರೆಸ್ಟ್​ ಮಾಡಿದ್ದಾರೆ.

ಮೃತ ರಾಕೇಶ್ ಬ್ಯಾನರ್​ ಹಾಕಿಕೊಂಡು ಕಾಲ್ನಡಿಗೆ ಜಾಥಾ

ಆದರೆ ಇನ್ನುಳಿದ ಆರೋಪಿಗಳನ್ನು ಬಂಧಿಸಿ, ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಕಾಲ್ನಡಿಗೆ ಜಾಥಾ ಆಯೋಜನೆ ಮಾಡಲಾಗಿತ್ತು. ಜಾಥಾದಲ್ಲಿ ವಿವಿಧ ದಲಿತ, ಪ್ರಗತಿಪರ ಹಾಗೂ ವಿದ್ಯಾರ್ಥಿ ಸಂಘಟನೆಗಳು ಭಾಗಿ ಆಕ್ರೋಶ ಹೊರ ಹಾಕಿದವು. ಈ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ‌ ಕ್ರಮವಾಗಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಯುವಕ ರಾಕೇಶ್​​​ ಅನುಮಾನಾಸ್ಪದ ಸಾವು; ಉಳಿದ ಆರೋಪಿಗಳನ್ನು ಅರೆಸ್ಟ್​ ಮಾಡಿ ಎಂದು ಒತ್ತಾಯ

https://newsfirstlive.com/wp-content/uploads/2023/07/KLR_PROTEST.jpg

Load More