/newsfirstlive-kannada/media/post_attachments/wp-content/uploads/2023/07/Tomato-4.jpg)
ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರದಿಂದ ಕರ್ನಾಟಕಕ್ಕೂ ಎಫೆಕ್ಟ್​ ಬಿದ್ದಿದೆ. ಟೊಮೆಟೊ ಬೆಳೆಗಾರರು ಮತ್ತು ಮಾರಾಟಗಾರರಿಗೆ ಇದರ ಬಿಸಿ ತಟ್ಟಿದೆ. ಏಷ್ಯಾದ ಎರಡನೇ ಅತಿದೊಡ್ಡ ಮಾರುಕಟ್ಟೆ ಎಂದು ಕರೆಯಲ್ಪಡುವ ಕೋಲಾರದಲ್ಲಿ ಟೊಮೆಟೊ ಬೆಲೆಯಿಂದ ರೈತರು ಕಂಗಾಲಾಗಿದ್ದಾರೆ.
ಬೆಂಗಳೂರಿನಿಂದ 90 ಕಿಲೋ ಮೀಟರ್​ದಲ್ಲಿ ಕೋಲಾರವಿದೆ. ಕರ್ನಾಟಕದಲ್ಲಿ ಬೆಳೆಯುವ ಟೊಮೊಟೊಗಳಿಗೆ ವಿಶೇಷ ಬೇಡಿಕೆ ಇದೆ. ಬಾಂಗ್ಲಾದೇಶ ಮಾತ್ರವಲ್ಲದೆ, ಇಂಡೋನೇಷ್ಯಾ ಮತ್ತು ವಿವಿಧ ಭಾರತೀಯ ಮಾರುಕಟ್ಟೆಗಳಿಗೆ ಇಲ್ಲಿಂದ ರಫ್ತಾಗುತ್ತದೆ. ಆದರೀಗ ಬಾಂಗ್ಲಾದೇಶದ ಬಿಕ್ಕಟ್ಟಿನಿಂದ ಫಸ್ಟ್​ ಕ್ವಾಲಿಟಿ ಟೊಮೊಟೊ ಬೆಲೆ ಶೇ.60 ರಷ್ಟು ಕುಸಿತ ಕಂಡಿದೆ.
ನೆರೆಯ ಬಾಂಗ್ಲಾದೇಶದಲ್ಲಿ ಅಶಾಂತಿ ಉಂಟಾಗಿದೆ. ಉದ್ಯೋಗ ಕೋಟಾದ ಮೇಲೆ ಅಶಾಂತಿ ನಿರ್ಮಾಣವಾಗಿದೆ. ಇದರಿಂದಾಗಿ ಮಾಜಿ ಪ್ರಧಾನಿ ಶೇಖ್​ ಹಸೀನಾ ರಾಜೀನಾಮೆ ನೀಡಿದ್ದಲ್ಲದೆ ಪಾಲಾಯನಗೈದಿದ್ದಾರೆ. ಆದರೂ ಸಹ ಮಧ್ಯಂತರ ಸರ್ಕಾರ ಅಸ್ತಿತ್ವದಲ್ಲಿದ್ದರು ಹಿಂಸಾಚಾರ ಮುಂದುವರೆದಿದೆ.
/newsfirstlive-kannada/media/post_attachments/wp-content/uploads/2023/07/Tomatoe.jpg-1.jpg)
ಇದನ್ನೂ ಓದಿ: ಧೋನಿ ಅಭಿಮಾನಿಗಳಿಗೆ ಗುಡ್​ನ್ಯೂಸ್ ಕೊಟ್ಟ BCCI: ಹಳೆಯ ನಿಯಮ ಮತ್ತೆ ಜಾರಿಗೆ, ಏನದು?
ಕೋಲಾರದ ಟೊಮೊಟೊ ವ್ಯಾಪಾರಿಗಳು ಹೇಳುವಂತೆ ಬಾಂಗ್ಲಾದೇಶದಲ್ಲಿ ಉದ್ಭವವಾದ ಸಮಸ್ಯೆಯಿಂದ ಫಸ್ಟ್​ ಕ್ವಾಲಿಟಿ ಟೊಮೊಟೊ ಬೆಲೆ ಸುಮಾರು 60 ಪ್ರತಿಶತದಷ್ಟು ಕುಸಿದಿದೆ. 15ರಿಂದ 20 ಕೆಜಿ ತೂಕದ ಟೊಮೆಟೊ ಬಾಕ್ಸ್​ 1,100ರಿಂದ 1200 ರೂಪಾಯಿಗೆ ಮಾರಾಟವಾಗುತ್ತದೆ. ಬಾಂಗ್ಲಾದೇಶಕ್ಕೆ ಹೋಗುವ ಸ್ಥಳೀಯ ಮಾರುಕಟ್ಟೆಯಲ್ಲಿ ಪ್ರತಿ ಬಾಕ್ಸ್​ 450ರಿಂದ 500 ರೂಪಾಯಿಗೆ ಮಾರಾಟವಾಗುತ್ತದೆ.
ಕೋಲಾರದಿಂದ ಬಾಂಗ್ಲಾದೇಶಕ್ಕೆ ಪ್ರತಿದಿನ ಟೊಮೊಟೊ ರಫ್ತಾಗುತ್ತದೆ. ಪ್ರತಿದಿನ 40 ಟ್ರಕ್​​ ಲೋಡ್​​ ಟೊಮೊಟೊ ಹೋಗುತ್ತದೆ. ಪ್ರತಿ ಟ್ರಕ್​ 900 ಬಾಕ್ಸ್ ಟೊಮೆಟೊ ಹೊತ್ತೊಯ್ಯುತ್ತದೆ. ಆದರೀಗ ಬಾಂಗ್ಲಾದಲ್ಲಿ ರಾಜಕೀಯ ಉದ್ವಿಗ್ನತೆ ಶುರುವಾಗಿನಿಂದ 20 ಟ್ರಕ್​ಗೆ ಇಳಿದಿದೆ. ಕಳೆದ ವಾರದಿಂದ ಎಲ್ಲಾ ಸಾಗಣೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಕೋಲಾರದ ರೈತ ಸದ್ದಾಂ ಹುಸೇನ್​ ಹೇಳಿದ್ದಾರೆ.
/newsfirstlive-kannada/media/post_attachments/wp-content/uploads/2023/07/Andhra_Farmer_Tomatoes.jpg)
ಒಂದು ಎಕ್ರೆ ಜಮೀನಿನಲ್ಲಿ ಟೊಮೆಟೊ ಬೆಳೆಯಲು ರೈತರಿಗೆ 1-2 ಲಕ್ಷ ಬಂಡವಾಳ ಹೂಡಬೇಕಾಗುತ್ತದೆ. ಬೆಳೆ ಚೆನ್ನಾಗಿದ್ದರೆ ಅಂದಾಜು 250 ಬಾಕ್ಸ್​ ಇಳುವರಿ ನಿರೀಕ್ಷಿಸುತ್ತಾರೆ. ಬಾಂಗ್ಲಾದೇಶದಂತ ಮಾರುಕಟ್ಟೆ ಕುಸಿದಾಗ ಟೊಮೆಟೊ ಬೆಲೆಗಳು ಕುಸಿಯುತ್ತವೆ. ಇದರಿಂದ ರೈತರು ಸಂಕಷ್ಟ ಅನುಭವಿಸುತ್ತಾರೆ.
ಇತ್ತೀಚೆಗೆ ಕೋಲಾರದಲ್ಲಿ ಟೊಮೆಟೊ ಬೆಳೆಗೆ ಬಿಳಿನೊಣ ಹಾವಳಿ ಎದುರಾಗಿತ್ತು. ಇದರಿಂದ ಎಲೆ ಸುರುಳಿ ರೋಗ ಹರಡಿತ್ತು. ಇದು ಟೊಮೆಟೊ ಕೃಷಿಗೆ ವ್ಯಾಪಕ ಹಾನಿಯುಂಟುಮಾಡಿತ್ತು. ಮಹಾರಾಷ್ಟ್ರ, ಛತ್ತೀಸ್​ಗಢ, ಉತ್ತರಪ್ರದೇಶ, ಪಶ್ಚಿಮ ಬಂಗಾಳ, ಬಾಂಗ್ಲಾದೇಶ ಮತ್ತು ಇಂಡೋನೇಷ್ಯಾ ಮಾರುಕಟ್ಟೆಗೆ ಸಾಗಿಸುವ ಟೊಮೊಟೊಗಳ ಮೇಲೆ ಪರಿಣಾಮ ಬೀರಿತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us