newsfirstkannada.com

ಕಾಂಗ್ರೆಸ್​​ಗೆ ಕಗ್ಗಂಟಾದ ಚಿನ್ನದ ಕೋಟೆ; ಟಿಕೆಟ್​ ಪೆಂಡಿಂಗ್ ಇಟ್ಟ ‘ಕೈ’ ಪಡೆ; ಇಂದು ಸಂಜೆ ಎಲ್ಲಾ ಸಮಸ್ಯೆಗೆ ಮುಕ್ತಿ ಪಕ್ಕಾ?

Share :

Published March 28, 2024 at 6:48am

Update March 28, 2024 at 6:49am

    ಕೋಲಾರ ಟಿಕೆಟ್​​ ಪೆಂಡಿಂಗ್​ ಇಟ್ಟ ಕೈಪಡೆ​​​ ಹೈಕಮಾಂಡ್​​!

    ಚಿಕ್ಕಬಳ್ಳಾಪುರ ಕ್ಷೇತ್ರದಲ್ಲೂ ಕಂಡ ಅಸಮಾಧಾನ ಸ್ಫೋಟ

    ಇಂದು ಸಂಜೆ ಹೊತ್ತಿಗೆ ಕಗ್ಗಂಟು ಬಗೆಹರಿಯುವ ಸಾಧ್ಯತೆ

ದಿನಗಳೆದಂತೆ ಕೋಲಾರ ಬಿಕ್ಕಟ್ಟು ಮತ್ತಷ್ಟು ಕಗ್ಗಂಟಾಗ್ತಿದೆ. ಎರಡು ಬಣಗಳ ನಡುವೆ ನಡೆಯುತ್ತಿರುವ ಟಿಕೆಟ್​ ಕಿತ್ತಾಟಕ್ಕೆ ಇಡೀ ಕಾಂಗ್ರೆಸ್​ ಹೈಕಮಾಂಡ್​​ ಒಂದು ಕ್ಷಣ ದಂಗಾಗಿದೆ. ರಾಜೀನಾಮೆ ಪ್ರಹಸನಕ್ಕೆ ತಲುಪಿ ಬಂದ ಘಟನೆಯಿಂದ ಟಿಕೆಟ್​ ಪೆಂಡಿಂಗ್​ ಇಡಲಾಗಿದೆ. ಮತ್ತೊಂದು ಸುತ್ತಿನ ಸಂಧಾನ ಸಭೆ ಆಯೋಜನೆಗೆ ಸಿಎಂ, ಡಿಸಿಎಂ ಮುಂದಾಗಿದ್ದಾರೆ.

ಕಾಂಗ್ರೆಸ್​​ ಸೋಲಿಗೆ ಕಾಂಗ್ರೆಸ್ಸೇ ಕಾರಣ. ಇದು ರಾಜಕೀಯದ ಗಾದೆ ಮಾತು. ಒಬ್ಬರನ್ನೊಬ್ಬರು ತುಳಿಯಲು ನಡೆಯುವ ಈ ಕಪ್ಪೆ ಆಟ, ಪಕ್ಷವನ್ನೇ ಅದೆಷ್ಟೋ ಬಾರಿ ಅಧಿಕಾರದಿಂದ ದೂರಿಟ್ಟಿದ್ದಿದೆ. ಒಗ್ಗಟ್ಟಿನ ಎಲೆಕ್ಷನ್​​ ಗೆದ್ದಿದ್ದು ಕಮ್ಮಿ. ಸೋತಿದ್ದೆ ಹೆಚ್ಚು. ಆದ್ರೂ ಕೈಪಡೆ ಬುದ್ದಿ ಕಲ್ತಿಲ್ಲ. ಕಲೆಯೋ ಲಕ್ಷಣಗಳು ಇಲ್ಲ. 2019ಕ್ಕೆ ಹಿಮ್ಮುಖ ಹೆಜ್ಜೆ ಇಟ್ಟಲ್ಲಿ ಕೋಲಾರ ಕದನದಲ್ಲಿ ಕೈಸೋತು ಸುಣ್ಣವಾದ ಕಥೆ ಕಣ್ಮುಂದೆ ಇದೆ. ಈಗ ಮತ್ತದೇ ಪುನರಾವರ್ತನೆ ಆಗುವ ಸುಳಿವು ದಟ್ಟವಾಗಿ ಕಾಣಿಸ್ತಿದೆ.

ಕಾಂಗ್ರೆಸ್​​​ನಲ್ಲಿ ಯಾರಿಗೆ ಸಿಗುತ್ತೇ ಚಿನ್ನದ ಕೋಟೆ?

ಕೋಲಾರ ಬಣ ರಾಜಕಾರಣ ಹೊಸ ಸಂಗ್ರಾಮಕ್ಕೆ ನಾಂದಿ ಹಾಡಿದೆ. ಚಿನ್ನದ ಬೇಟೆಗೆ ಇಟ್ಟ ಗುರಿ ತಪ್ಪುವ ಲಕ್ಷಣಗಳು ಕಾಣಿಸ್ತಿವೆ. ಸಚಿವ ಕೆ.ಹೆಚ್. ಮುನಿಯಪ್ಪ ಅಳಿಯ ಚಿಕ್ಕಪೆದ್ದಣ್ಣಗೆ ಕಾಂಗ್ರೆಸ್​​​ ಟಿಕೆಟ್​​ ಫೈನಲ್​​​ ಎಂಬ ವದಂತಿ ಹಬ್ಬಿದ್ದೆ ತಡ, ಎದ್ದ ಬಂಡಾಯಕ್ಕೆ ಕಾಂಗ್ರೆಸ್​​ ಪತರಗುಟ್ಟಿದೆ. ಸಚಿವ ಎಂಸಿ ಸುಧಾಕರ್, ಎಂಎಲ್​ಸಿ ನಜೀರ್ ಅಹ್ಮದ್​, ಅನಿಲ್​​​ಕುಮಾರ್, ಶಾಸಕ ನಂಜೇಗೌಡ, ಕೊತ್ತೂರು ಮಂಜುನಾಥ ರಾಜೀನಾಮೆಗೆ ಮುಂದಾಗ್ತಿದ್ದಂತೆ ಕಾಂಗ್ರೆಸ್​ ಹೈಕಮಾಂಡ್​​​ ಎಂಟ್ರಿ ಕೊಟ್ಟಿದೆ. ಟಿಕೆಟ್​ ಘೋಷಣೆಯನ್ನ ಮತ್ತೆ ತಡೆ ಹಿಡಿದಿದೆ.

ಇವತ್ತು ಕೋಲಾರ ಜಿಲ್ಲಾ ಮುಖಂಡರ ಜೊತೆ ಮಧ್ಯಾಹ್ನ ಮತ್ತೊಂದು ಸುತ್ತಿನ ಸಭೆ ಕರೆಯಲಾಗಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ನೇತೃತ್ವದಲ್ಲಿ ಚರ್ಚೆ ಆಗಲಿದೆ. ಈ ಸಭೆ ಬಳಿಕ ಕೋಲಾರದ ಚಿನ್ನದ ಬೇಟೆಯ ಕಾಂಗ್ರೆಸ್​​​ ಸರದಾರ ಯಾರು ಅನ್ನೋದು ಬಹಿರಂಗ ಆಗ್ಲಿದೆ. ಈ ಎಲ್ಲಾ ಟಿಕೆಟ್​​ ಗೊಂದಲ, ರಾಜೀನಾಮೆಯ ಪ್ರಹಸನ ನಡೆಯುತ್ತಿದ್ದಂತೆ ಸಚಿವ ಮುನಿಯಪ್ಪ ನೇರವಾಗಿ ಎಐಸಿಸಿ ಅಧ್ಯಕ್ಷ ಖರ್ಗೆಗೆ ಕರೆ ಮಾಡಿ ಅವರ ಗಮನಕ್ಕೆ ತಂದಿದ್ದಾರೆ.

ಇನ್ನು, ಬೆಂಗಳೂರಲ್ಲಿ ಮಾತ್ನಾಡಿದ ಸಚಿವ ‌ಕೆ.ಹೆಚ್.ಮುನಿಯಪ್ಪ, ಹೈಕಮಾಂಡ್​​ ತೀರ್ಮಾನಕ್ಕೆ ಬದ್ದ ಎಂದಿದ್ದಾರೆ. ನನ್ನಿಂದ ಯಾರಿಗೂ ಕೆಟ್ಟದಾಗಿಲ್ಲ. ಅಲ್ಲದೆ, ಮುನಿಯಪ್ಪ ಕುಟುಂಬವನ್ನ ರಾಜಕೀಯವಾಗಿ ಮುಗಿಸಲು ಯಾರಿಗೂ ಸಾಧ್ಯವಿಲ್ಲ ಅಂತ ಗುಡುಗಿದ್ದಾರೆ.

ರಕ್ಷಾ ರಾಮಯ್ಯ ವಿರುದ್ಧ ಡಿಸಿಎಂಗೆ ಸುಬ್ಬಾರೆಡ್ಡಿ ಪತ್ರ

ಇನ್ನು, ಕೋಲಾರದ ಗಾಳಿ, ಚಿಕ್ಕಬಳ್ಳಾಪುರಕ್ಕೂ ಸುತ್ತಿದೆ. ರಕ್ಷಾ ರಾಮಯ್ಯಗೆ ಟಿಕೆಟ್​​​ ಬಹುತೇಕ ಫೈನಲ್​​​ ಆಗಿದ್ದು, ಈ ಬೆನ್ನಲ್ಲೆ ಬಂಡಾಯದ ಬಾವುಟ ಹಾರಿದೆ. ಡಿಸಿಎಂ ಡಿಕೆಶಿ​ಗೆ ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ ಪತ್ರ ಬರೆದಿದ್ದಾರೆ. ಜಿಲ್ಲೆಯ ಶಾಸಕರು, ಮಾಜಿ ಶಾಸಕರು ಶಿಫಾರಸು ಮಾಡಿದ್ದೇ ಬೇರೆ.. ಆದ್ರೆ, ರಕ್ಷಾ ರಾಮಯ್ಯ ಹೆಸರು ಹೆಸರನ್ನ ಯಾರು ಶಿಫಾರಸ್ಸು ಮಾಡಿಲ್ಲ. ವೀರಪ್ಪ ಮೊಯ್ಲಿ, ಶಿವಶಂಕರ ರೆಡ್ಡಿ ಇಬ್ಬರಲ್ಲಿ ಒಬ್ಬರ ಹೆಸರನ್ನ ಘೋಷಿಸಿ ಅಂತ ಆಗ್ರಹಿಸಿದ್ದಾರೆ.

ಇದನ್ನೂಓದಿ: ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದ ಕಾಮುಕ; ಆಕ್ರೋಶಗೊಂಡ ಗ್ರಾಮಸ್ಥರು ಮಾಡಿದ್ದೇನು?

ಒಟ್ಟಾರೆ, ನಾಲ್ಕು ಕ್ಷೇತ್ರಗಳನ್ನ ಪೆಂಡಿಂಗ್​ ಇಟ್ಟಿರುವ ಕಾಂಗ್ರೆಸ್​ಗೆ ಕೋಲಾರ, ಚಿಕ್ಕಬಳ್ಳಾಪುರ ಕ್ಷೇತ್ರದ್ದೆ ದೊಡ್ಡ ತಲೆಬಿಸಿ ತಂದಿದೆ.. ಇವತ್ತು ಸಂಜೆ ಹೊತ್ತಿಗೆ ಕಗ್ಗಂಟು ಬಗೆಹರಿಯುವ ಸಾಧ್ಯತೆ ಇದೆ. ಅಷ್ಟಕ್ಕೂ ಯಾರಿಗೆ ಟಿಕೆಟ್​ ಸಿಗಲಿದೆ ಅನ್ನೋದು ಮಾತ್ರ ಸಸ್ಪೆನ್ಸ್​​..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾಂಗ್ರೆಸ್​​ಗೆ ಕಗ್ಗಂಟಾದ ಚಿನ್ನದ ಕೋಟೆ; ಟಿಕೆಟ್​ ಪೆಂಡಿಂಗ್ ಇಟ್ಟ ‘ಕೈ’ ಪಡೆ; ಇಂದು ಸಂಜೆ ಎಲ್ಲಾ ಸಮಸ್ಯೆಗೆ ಮುಕ್ತಿ ಪಕ್ಕಾ?

https://newsfirstlive.com/wp-content/uploads/2024/03/Muniyappa.jpg

Load More