newsfirstkannada.com

ನೀಲಿ ಚಿತ್ರಗಳನ್ನು ನೋಡೋ ಚಟ.. ವೈದ್ಯ ರೇಪ್ & ಮರ್ಡರ್‌ ಭಯಾನಕ ಸತ್ಯ ಬಹಿರಂಗ; ಆಗಿದ್ದೇನು?

Share :

Published August 11, 2024 at 7:29pm

Update August 11, 2024 at 7:30pm

    ನೀಲಿ ಚಿತ್ರ ನೋಡಿ ಉತ್ತೇಜನಗೊಂಡು ಅತ್ಯಾಚಾರ ಮಾಡಿದ್ನಾ ನೀಚ

    ಬಂಧಿತ ಆರೋಪಿ ಸಂಜಯ್ ರಾಯ್​ ಮೊಬೈಲ್​​ನಲ್ಲಿ ಸಿಕ್ಕಿದ್ದೇನು?

    ಬ್ಲ್ಯೂಟೂಥ್​, ಸಿಸಿಟಿವಿ ಫೂಟೇಜ್​ ಒದಗಿಸಿದ ಅಸಲಿ ಸಾಕ್ಷಿಗಳೇನು?

ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ನಡೆದ ವೈದ್ಯೆ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಕೊಲೆಗಾರ ನಿರಂತರ ವಿಚಾರಣೆ ಹಲವು ಸತ್ಯಗಳನ್ನು ಬಯಲಿಗೆ ಎಳೆಯುತ್ತಿವೆ. ಈಗ ಪೊಲೀಸ್ ಮೂಲಗಳು ತಿಳಿಸಿರುವ ಮಾಹಿತಿಯ ಪ್ರಕಾರ ಆರೋಪಿ ಸಂಜಯ್ ರಾಯ್​ಗೆ ನೀಲಿ ಚಿತ್ರಗಳನ್ನು ನೋಡುವ ಗೀಳು ಇತ್ತು. ಅಂದು ಅತ್ಯಾಚಾರ ಮಾಡುವ ಮೊದಲು ಕೂಡ ಅವನು ನೀಲಿ ಚಿತ್ರಗಳನ್ನು ನೋಡಿಕೊಂಡು ಬಂದಿದ್ದ. ಪೋರ್ನ್​​ ಚಿತ್ರಗಳನ್ನು ನೋಡಿ, ಉತ್ತೇಜಿತನಾಗಿದ್ದ ಪರಮಪಾಪಿ ಏಕಾಂಗಿಯಾಗಿ ಸಿಕ್ಕ ವೈದ್ಯೆಯನ್ನು ಭೀಕರವಾಗಿ ಅತ್ಯಾಚಾರಗೈದು ಹತ್ಯೆ ಮಾಡಿದ್ದಾನೆ ಎಂಬುದು ತಿಳಿದು ಬಂದಿದೆ.

ಇದನ್ನೂ ಓದಿ: ವೈದ್ಯೆ ರೇಪ್ & ಮರ್ಡರ್‌ ಕೇಸ್‌ಗೆ ಹೊಸ ಟ್ವಿಸ್ಟ್‌.. ಹಂತಕನ ಹಿಡಿದುಕೊಟ್ಟಿದ್ದೇ ಆ ವಸ್ತು! ಕೊಲೆ ರಹಸ್ಯ ಬಯಲು

ಮೂಲತಃ ಸ್ವಯಂಸೇವಕನಾಗಿ ಗುರುತಿಸಿಕೊಂಡಿದ್ದ ಸಂಜಯ್​ ರಾಯ್​ಗೆ ಅತ್ಯಾಚಾರ ನಡೆದ ಆ ಆಸ್ಪತ್ರೆಯಲ್ಲಿ ಫ್ರೀ ಎಕ್ಸಿಟ್ ಮತ್ತು ಫ್ರೀ ಎಂಟ್ರಿಯಿತ್ತು. ಮೊದಲಿಂದಲೂ ಆಸ್ಪತ್ರೆಯೊಂದಿಗೆ ಗುರುತಿಸಿಕೊಂಡಿದ್ದ ಸಂಜಯ್​ನನ್ನು ಅಲ್ಲಿ ಯಾರು ಪ್ರಶ್ನಿಸುತ್ತಿರಲಿಲ್ಲ. ಇದರಿಂದಾಗಿಯೇ ಅಂದು ಬೆಳಗ್ಗೆ 4ರ ಸುಮಾರಿಗೆ ಆಸ್ಪತ್ರೆಯ ಒಳಕ್ಕೆ ಹೋಗಿದ್ದ ಸಂಜಯ್ ಸಿಸಿಟಿವಿ ಫೂಟೇಜ್​ನಲ್ಲಿ ಕಾಣಿಸಿಕೊಂಡಿದ್ದ.

ಅವನ ಮೇಲೆ ಮೊದಲ ಸಂಶಯ ಮೂಡಿಸಿದ್ದೇ ಆ ಒಂದು ಫೂಟೇಜ್​, ಆಸ್ಪತ್ರೆಯ ಒಳಗೆ ಹೋಗುವಾಗ ಅವನ ಕಿವಿಯಲ್ಲಿದ್ದ ಬ್ಲ್ಯೂಟೂಥ್, ವಾಪಸ್ ಬರುವಾಗ ಕಾಣಿಸಿರಲಿಲ್ಲ. ಅದು ಅಲ್ಲದೇ, ಕೊಲೆಯಾಗಿ ಬಿದ್ದಿದ್ದ ವೈದ್ಯೆಯ ಪಕ್ಕದಲ್ಲಿಯೂ ಕೂಡ ಬ್ಲ್ಯೂಟೂಥ್​​ ಒಂದು ಸಿಕ್ಕಿತ್ತು. ಈ ಎಲ್ಲಾ ಸಾಕ್ಷಿಗಳನ್ನು ತಾಳೆ ಹಾಕಿ ನೋಡಿದಾಗ ಈ ನೀಚ ಕೆಲಸ ಮಾಡಿದ್ದು ಸಂಜಯ್ ರಾಯ್​ನೇ ಎಂದು ಪೊಲೀಸರಿಗೆ ದೃಢವಾಗಿದೆ. ಕೂಡಲೇ ಅವನನ್ನು ವಶಕ್ಕೆ ಪಡೆದ ಪೊಲೀಸರು ಅವನ ಮೊಬೈಲ್ ಚೆಕ್ ಮಾಡಿದಾಗ ಅಲ್ಲಿಯೂ ಕೂಡ ನೀಲಿ ಚಿತ್ರಗಳು ಗ್ಯಾಲರಿಯಲ್ಲಿದ್ದದ್ದು ಕಂಡು ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನೀಲಿ ಚಿತ್ರಗಳನ್ನು ನೋಡೋ ಚಟ.. ವೈದ್ಯ ರೇಪ್ & ಮರ್ಡರ್‌ ಭಯಾನಕ ಸತ್ಯ ಬಹಿರಂಗ; ಆಗಿದ್ದೇನು?

https://newsfirstlive.com/wp-content/uploads/2024/08/kolkata-rape-and-murder-2.jpg

Load More