ಟವಲ್​ ಕಟ್ಟಿಕೊಂಡು ಇಂಡಿಯಾ ಗೇಟ್ ಬಳಿ ಡ್ಯಾನ್ಸ್ ಮಾಡಿದ ಮಾಡೆಲ್​! ವಿಡಿಯೋ ನೋಡಿ ನೆಟ್ಟಿಗರು ಏನಂದ್ರು?

author-image
Gopal Kulkarni
Updated On
ಟವಲ್​ ಕಟ್ಟಿಕೊಂಡು ಇಂಡಿಯಾ ಗೇಟ್ ಬಳಿ ಡ್ಯಾನ್ಸ್ ಮಾಡಿದ ಮಾಡೆಲ್​! ವಿಡಿಯೋ ನೋಡಿ ನೆಟ್ಟಿಗರು ಏನಂದ್ರು?
Advertisment
  • ಇಂಡಿಯಾ ಗೇಟ್​ ಎದುರು ಕೇವಲ ಟವಲ್ ಸುತ್ತಿಕೊಂಡು ಡ್ಯಾನ್ಸ್
  • ಡ್ಯಾನ್ಸ್ ಮಾಡಿದ ಸನ್ನತಿ ಮಿತ್ರಾಗೆ ನೆಟ್ಟಿಗರಿಂದ ಹಿಗ್ಗಾಮುಗ್ಗಾ ತರಾಟೆ
  • ಈ ಹಿಂದೆ ದುರ್ಗಾದೇವಿ ದರ್ಶನದ ವೇಳೆ ವಿವಾದ ಮಾಡಿಕೊಂಡಿದ್ದ ಸನ್ನತಿ

ಸನ್ನತಿ ಮಿತ್ರ, ಕೊಲ್ಕತ್ತಾ ಮೂಲದ ಮಾಡೆಲ್​ ಹಾಗೂ ಇನ್​ಫ್ಲೂಯೆನ್ಸರ್, 2017ರಲ್ಲಿ ಮಿಸ್ ಕೊಲ್ಕತ್ತಾ ಕಿರೀಟವನ್ನು ಕೂಡ ಧರಿಸಿದವರು. ಹೀಗೆ ಹಲವು ರೀತಿಯಲ್ಲಿ ಹೆಸರು ಮಾಡಿದ ಸನ್ನತಿ ಮಿತ್ರ ಈಗ ವಿಡಿಯೋವೊಂದರ ವಿಚಾರವಾಗಿ ಭಾರೀ ವಿವಾದ ಸೃಷ್ಟಿಸಿದ್ದಾರೆ ದೆಹಲಿಯ ಇಂಡಿಯಾ ಗೇಟ್​ ಬಳಿ ಕೇವಲ ಒಂದು ಟವಲ್​ನ್ನು ಮೈಗೆ ಸುತ್ತಿಕೊಂಡು ಶಾರುಖ್ ಹಾಗೂ ಕಜೋಲ್ ಅಭಿನಯದ ದಿಲ್ವಾಲೆ ದುಲ್ಹನಿಯಾ ಲೇ ಜಾಯೆಂಗೆ ಸಿನಿಮಾದ ಮೇರೆ ಕ್ವಾಬೋ ಮೇ ಜೋ ಆಯೆ ಹಾಡಿಗೆ ನೃತ್ಯ ಮಾಡುವ ಮೂಲಕ ಹೊಸ ವಿವಾದಕ್ಕೆ ಕಾರಣವಾಗಿದ್ದಾರೆ.

ಇದನ್ನೂ ಓದಿ:ಕಾಲ್ತುಳಿತ ದುರಂತಕ್ಕೆ ಮರುಗಿದ ಪುಷ್ಪರಾಜ್; ಜೀವ ಕಳೆದುಕೊಂಡ ಕುಟುಂಬಕ್ಕೆ ಎಷ್ಟು ಹಣ ಕೊಟ್ರು?

ಇವರು ಡ್ಯಾನ್ಸ್​ ಮಾಡುವ ವೇಳೆಯಲ್ಲಿ ಇಂಡಿಯಾ ಗೇಟ್​ ಬಳಿ ಬಹಳ ಜನರು ನೆರೆದಿದ್ದರು. ಮಕ್ಕಳೊಂದಿಗೆ ಕುಟುಂಬದವರು ಕೂಡ ಇಂಡಿಯಾ ಗೇಟ್​ ಬಳಿ ಇರುವುದು ವಿಡಿಯೋದಲ್ಲಿ ಕಾಣಿಸಿಕೊಂಡಿದೆ. ಇವರೆಲ್ಲರ ನಡುವೆಯೂ ಕೂಡ ಈ ಯುವತಿ ಕೇವಲ ಒಂದು ಟವಲ್ ಕಟ್ಟಿಕೊಂಡು ವಿಡಿಯೋಗೆ ಪೋಸ್ ಕೊಟ್ಟು ಡ್ಯಾನ್ಸ್ ಮಾಡಿದ್ದಾಳೆ. ಈ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದು ಸುಮಾರು 4.8 ಲಕ್ಷದಷ್ಟು ವೀವ್ಸ್​ಗಳನ್ನು ಪಡೆದಿದೆ. ವಿಡಿಯೋ ಅಪ್​ಲೋಡ್ ಮಾಡಿರುವ ಸನ್ನತಿ ಅದಕ್ಕೆ ಹ್ಯಾಪಿ ಇಂಟರ್​ನ್ಯಾಷನಲ್ ಮೆನ್ಸ್​ ಡೇ ಎಂದು ಕ್ಯಾಪ್ಷನ್ ಕೊಟ್ಟಿದ್ದಾಳೆ. ಸದ್ಯ ಈ ಒಂದು ವಿಡಿಯೋ ಪರ ವಿರೋಧದ ಪ್ರತಿಕ್ರಿಯೆಗಳಿಗೆ ಸಾಕ್ಷಿಐಯಾಗಿದೆ. ಹಲವರು ಇದು ಸಭ್ಯತೆಯ ಎಲ್ಲ ಸೀಮೆಯನ್ನು ದಾಟಿರುವ ವಿಡಿಯೋ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಪುಷ್ಪ 2 ಎರಡು ದಿನಗಳ ಕಲೆಕ್ಷನ್ ಭರ್ಜರಿ.. ಬ್ಲಾಕ್​ಬಸ್ಟರ್​ ಚಿತ್ರಗಳ ಎಲ್ಲಾ ದಾಖಲೆಗಳು ಉಡೀಸ್..!

ಈ ಒಂದು ವಿಡಿಯೋ ಪೋಸ್ಟ್ ಮಾಡಿದ ಎರಡೇ ಗಂಟೆಯಲ್ಲಿ 2 ಲಕ್ಷಕ್ಕೂ ಅಧಿಕ ವೀವ್ಸ್ ಪಡೆದಿದೆ.ಅದೇ ಅಧಿಕ ಜನರು ಸನ್ನತಿ ಮಿತ್ರಾರ ಈ ಪೋಸ್ಟ್​ಗೆ ವಿರೋಧಿಸಿ ಕಮೆಂಟ್ ಹಾಕಿದ್ದಾರೆ. ಇದೊಂದು ಜನಪ್ರಿಯತೆಗಾಗಿ ಮಾಡುವ ಚೀಪ್ ಪಬ್ಲಿಕ್ ಸ್ಟಂಟ್ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅನೇಕರು ಇದು ಅಶ್ಲೀಲತೆಯ ಪರಮಾವಧಿ ಎಂದು ಕೂಡ ಕಮೆಂಟ್ ಮಾಡಿದ್ದು, ಕೂಡಲೇ ಸನ್ನತಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೂಡ ಆಗ್ರಹಿಸಿದ್ದಾರೆ.

ಸನ್ನತಿ ಮಿತ್ರ ಇದೇ ಮೊದಲ ಬಾರಿ ವಿವಾದಕ್ಕೆ ಕಾರಣವಾಗಿಲ್ಲ. ದಸಾರ ವೇಳೆ ದುರ್ಗಾ ಪೆಂಡಾಲ್​ಗೆ ಅರೆನಗ್ನ ಬಟ್ಟೆ ಹಾಕಿಕೊಂಡು ಹೈಹೀಲ್ಸ್​ ಧರಿಸಿಕೊಂಡು ದೇವರೆದರು ನಿಂತು ಫೋಟೋ ತೆಗೆದುಕೊಂಡಾಗಲು ಕೂಡ ಸನ್ನತಿ ಮಿತ್ರಾ ವಿವಾದಕ್ಕೆ ಕಾರಣರಾಗಿದ್ದರು. ಸದ್ಯ ಈಗ ಇಂಡಿಯಾ ಗೇಟ್ ಬಳಿ ಟವಲ್ ಸುತ್ತಿಕೊಂಡು ಡ್ಯಾನ್ಸ್ ಮಾಡುವ ಮೂಲಕ ಮತ್ತೊಂದು ವಿವಾದವನ್ನು, ಆಕ್ರೋಶವನ್ನು, ವಿರೋಧವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment