6, 6, 6, 6, 6, 6.. ಕೋಲ್ಕತ್ತಾದಲ್ಲಿ ಆಂಡ್ರೆ ರಸೆಲ್ ಸಿಕ್ಸರ್‌ ಸುರಿಮಳೆ; ರಾಜಸ್ಥಾನಕ್ಕೆ ಬಿಗ್ ಶಾಕ್‌!

author-image
admin
Updated On
6, 6, 6, 6, 6, 6.. ಕೋಲ್ಕತ್ತಾದಲ್ಲಿ ಆಂಡ್ರೆ ರಸೆಲ್ ಸಿಕ್ಸರ್‌ ಸುರಿಮಳೆ; ರಾಜಸ್ಥಾನಕ್ಕೆ ಬಿಗ್ ಶಾಕ್‌!
Advertisment
  • ಕೋಲ್ಕತ್ತಾ ಈಡನ್ ಗಾರ್ಡನ್ ಮೈದಾನದಲ್ಲಿ ಆಂಡ್ರೆ ರಸೆಲ್ ಆರ್ಭಟ
  • ಪ್ರಮುಖ 3 ವಿಕೆಟ್ ಕಳೆದುಕೊಂಡು KKR ಸಂಕಷ್ಟದಲ್ಲಿದ್ದ ಕೋಲ್ಕತ್ತಾ ತಂಡ
  • KKR ನಾಯಕ ಅಜಿಂಕ್ಯಾ ರಹಾನೆ ಕೇವಲ 30 ರನ್‌ಗಳಿಗೆ ಔಟ್‌!

KKRvRR: ಐಪಿಎಲ್ ಸೀಸನ್ 18ರ 53ನೇ ಪಂದ್ಯ ಕೋಲ್ಕತ್ತಾ ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯುತ್ತಿದೆ. ರಾಜಸ್ಥಾನ ಬೌಲರ್‌ಗಳನ್ನು ಬೆಂಡತ್ತಿದ್ದ ಆಂಡ್ರೆ ರಸೆಲ್ ಕೋಲ್ಕತ್ತಾ ತಂಡಕ್ಕೆ ಆಸರೆಯಾಗಿದ್ದಾರೆ. ಆಂಡ್ರೆ ರಸೆಲ್ ಬಾರಿಸಿದ 6 ಸಿಕ್ಸರ್‌ಗಳಿಂದ ಕೋಲ್ಕತ್ತಾಗೆ ಇವತ್ತಿನ ಪಂದ್ಯದಲ್ಲಿ ಗೆಲುವಿನ ಆಸೆ ಚಿಗುರಿದೆ.


">May 4, 2025

ಈಡನ್ ಗಾರ್ಡನ್ ಮೈದಾನದಲ್ಲಿ ಟಾಸ್ ಗೆದ್ದ KKR ನಾಯಕ ಅಜಿಂಕ್ಯಾ ರಹಾನೆ ಮೊದಲು ಬ್ಯಾಟಿಂಗ್ ಅನ್ನೇ ಆಯ್ಕೆ ಮಾಡಿಕೊಂಡರು. ಆರಂಭದಲ್ಲೇ 11 ರನ್‌ಗಳಿಗೆ ಸುನೀಲ್ ನರಾನೆ ಔಟ್ ಆಗೋ ಮೂಲಕ ನಿರಾಸೆ ಮೂಡಿಸಿದರು. ಆದರೆ ನಾಯಕ ರಹಾನೆ ಹಾಗೂ ರಹಮಾನುಲ್ಲಾ ಗುರ್ಬಾಜ್ ಜೊತೆಯಾಟ ತಂಡಕ್ಕೆ ಚೇತರಿಕೆಯನ್ನ ತಂದು ಕೊಟ್ಟಿತು.

69 ರನ್‌ಗೆ 2 ವಿಕೆಟ್ ಕಳೆದುಕೊಂಡ KKR ಸಂಕಷ್ಟಕ್ಕೆ ಸಿಲುಕಿತ್ತು. ನಾಯಕ ಅಜಿಂಕ್ಯಾ ರಹಾನೆ ಕೂಡ 30 ರನ್‌ಗಳ ಕಾಣಿಕೆ ಕೊಟ್ಟು ಪೆವಿಲಿಯನ್ ಕಡೆ ಮುಖ ಮಾಡಿದ್ರು. ಆಗ ಅಂಗ್‌ಕ್ರಿಶ್ ರಘುವಂಶಿ 5 ಬೌಂಡರಿಗಳನ್ನ ಬಾರಿಸಿ ಮತ್ತೆ ರಾಜಸ್ಥಾನ ತಂಡಕ್ಕೆ ತಲೆ ನೋವಾದರು.

ಇದನ್ನೂ ಓದಿ: ಚೆನ್ನೈ ಬೌಲರ್​​ಗೆ ವಾರ್ನ್ ಮಾಡಿದ್ರಾ ಕಿಂಗ್ ಕೊಹ್ಲಿ..? ಬಾಲ್​ ಎಸೆದಿದ್ದಕ್ಕೆ ಕೋಪಿಸಿಕೊಂಡ ವಿರಾಟ್ 

3 ವಿಕೆಟ್ ಕಳೆದುಕೊಂಡು KKR ಸಂಕಷ್ಟದಲ್ಲಿರುವಾಗ ಆಂಡ್ರೆ ರಸೆಲ್ ಸ್ಕೋರ್ ಬೋರ್ಡ್‌ಗೆ ಹೊಸ ಕಳೆ ತಂದರು. ಕೊನೆಯ 3 ಓವರ್‌ಗಳಲ್ಲಿ 6 ಸಿಕ್ಸ್, 4 ಬೌಂಡರಿಗಳನ್ನ ಹೊಡೆದು ಆಕರ್ಷಕ ಅರ್ಧ ಶತಕ ಪೂರೈಸಿದರು. ಆಂಡ್ರೆ ರಸೆಲ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನದಿಂದ KKR, ರಾಜಸ್ಥಾನದ ವಿರುದ್ಧ 4 ವಿಕೆಟ್ ನಷ್ಟಕ್ಕೆ 206 ರನ್ ಗಳಿಸಿದೆ. ಕೋಲ್ಕತ್ತಾದಲ್ಲಿ ರಾಜಸ್ಥಾನ ರಾಯಲ್ಸ್‌ ತಂಡಕ್ಕೆ 207 ರನ್‌ಗಳ ಬಿಗ್ ಟಾರ್ಗೆಟ್ ನೀಡಲಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment