/newsfirstlive-kannada/media/post_attachments/wp-content/uploads/2025/03/RCB-1-2.jpg)
ಐಪಿಎಲ್​​ ಸೀಸನ್​ 18ರ ಮೊದಲ ಪಂದ್ಯವೇ ಅಭಿಮಾನಿಗಳನ್ನ ತುದಿಗಾಲಲ್ಲಿ ನಿಲ್ಲುವಂತೆ ಮಾಡಿದೆ. ಇಡೀ ಕ್ರಿಕೆಟ್​​ ಲೋಕ ಕಣ್ಣು ಕೆಕೆಆರ್​​​-ಆರ್​​ಸಿಬಿ ಮುಖಾಮುಖಿಯ ಮೇಲಿದೆ. ಈ ಹಿಂದಿನ ರಣರೋಚಕ ಕದನಗಳು, ಹೈವೋಲ್ಟೆಜ್​ ಫೈಟ್​​ಗಳು ಇಂದಿನ ಪಂದ್ಯದ ನಿರೀಕ್ಷೆ ಹೆಚ್ಚಿಸಿದೆ. ಐಪಿಎಲ್​​ ಇತಿಹಾಸದಲ್ಲಿ ಕೆಕೆಆರ್​​ vs ಆರ್​​ಸಿಬಿ ಜಿದ್ದಾಜಿದ್ದಿನ ಕತೆ ಇಲ್ಲಿದೆ.
ಇಂಡಿಯನ್​​​ ಪ್ರೀಮಿಯರ್​​ ಲೀಗ್​ನ ಕಾವು ಕ್ರಿಕೆಟ್​​ ಲೋಕವನ್ನ ಆವರಿಸಿದೆ. ಕ್ರಿಕೆಟ್​​ ಮಹಾಜಾತ್ರೆಗೆ ಇಂದು ಕಿಕ್​ ಸ್ಟಾರ್ಟ್​ ಸಿಗಲಿದ್ದು ಮೊದಲ ಪಂದ್ಯದಲ್ಲಿ ಆರ್​​ಸಿಬಿ-ಕೆಕೆಆರ್​ ಫೈಟ್​ ನಡೆಸಲು ಸಜ್ಜಾಗಿವೆ. ಐಪಿಎಲ್​ ಲೋಕದ ಈ ಮದಗಜಗಳ ಕಾಳಗ ಇಡೀ ಕ್ರಿಕೆಟ್​​ ಜಗತ್ತಿನ ಕುತೂಹಲವನ್ನ ಡಬಲ್​​ ಮಾಡಿದೆ. ಫ್ಯಾನ್ಸ್​ ಹೈವೋಲ್ಟೆಜ್​ ಕದನದ ನಿರೀಕ್ಷೆಯಲ್ಲಿದ್ದಾರೆ. ​ಕೆಕೆಆರ್​​ vs ಆರ್​​ಸಿಬಿ ಮುಖಾಮುಖಿಯ ರಣರೋಚಕ ಇತಿಹಾಸ ಈ ನಿರೀಕ್ಷೆ ಹಿಂದಿನ ರೀಸನ್​.
ಇದನ್ನೂ ಓದಿ: ಒಂದು ಟ್ರೋಫಿ, 10 ಟೀಂ; ಉದ್ಘಾಟನಾ ಪಂದ್ಯದಲ್ಲಿ ಆರ್​ಸಿಬಿ..!
/newsfirstlive-kannada/media/post_attachments/wp-content/uploads/2025/03/RCB-2-1.jpg)
ವರ್ಷ: 2008 ಮ್ಯಾಚ್​ ನಂ.1
ಇಂಡಿಯನ್​ ಪ್ರೀಮಿಯರ್​ ಲೀಗ್​ಗೆ ಮುನ್ನುಡಿ ಬರೆದಿದ್ದೇ ಆರ್​​ಸಿಬಿ-ಕೆಕೆಆರ್​​ ಕದನ. 17 ವರ್ಷಗಳ ಹಿಂದೆ 2008ರಲ್ಲಿ ಆರಂಭವಾದ IPL ಟೂರ್ನಿಯ ಮೊದಲ ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ವು. ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ರನ್​ ಮಳೆ ಸುರಿಸಿದ ಬ್ರೆಂಡನ್​ ಮೆಕಲಮ್​ ಶತಕ ಸಿಡಿಸಿ ಮಿಂಚಿದ್ರು. 223 ರನ್​ಗಳ ಟಾರ್ಗೆಟ್​ ಬೆನ್ನತ್ತಿದ ಆರ್​​ಸಿಬಿ 82ಕ್ಕೆ ಆಲೌಟ್​ ಆಗಿತ್ತು.
ವರ್ಷ: 2013, ಮ್ಯಾಚ್​ ನಂ.12
ಈ ಪಂದ್ಯವನ್ನ ಐಪಿಎಲ್​ ಪ್ರೇಮಿಗಳು ಮರೆಯೋಕೆ ಸಾಧ್ಯವಿಲ್ಲ. 2013ರಲ್ಲಿ ನಡೆದ ಬೆಂಗಳೂರು ಪಂದ್ಯದಲ್ಲಿ ಡೆಲ್ಲಿ ಬಾಯ್ಸ್​​​ ಗೌತಮ್​ ಗಂಭೀರ್-ವಿರಾಟ್​ ಕೊಹ್ಲಿ ಆನ್​​ಫೀಲ್ಡ್​ನಲ್ಲಿ ಫೈಟ್​ ನಡೆಸಿದ್ರು. ಮಾತಿನ ಚಕಮಕಿ ತಾರಕಕ್ಕೇರಿ ಕೈಕೈ ಮಿಲಾಯಿಸೋ ಹಂತಕ್ಕೆ ಜಗಳ ಹೋಗಿತ್ತು. ಕ್ರಿಸ್​ ಗೇಲ್​​​ 85 ರನ್​ ಚಚ್ಚಿ ಈ ಪಂದ್ಯದಲ್ಲಿ ಆರ್​​ಸಿಬಿ ಗೆಲ್ಲಿಸಿದ್ರು. ಹೈಲೆಟ್​ ಆಗಿದ್ದು ಮಾತ್ರ ಕೊಹ್ಲಿ-ಗಂಭೀರ್​ ಜಗಳ.
ವರ್ಷ: 2017, ಮ್ಯಾಚ್​ ನಂ.27
ಆರ್​​ಸಿಬಿ ಅಭಿಮಾನಿಗಳನ್ನ ಇಂದಿಗೂ ಕಾಡ್ತಿರೋ ಪಂದ್ಯ ಇದು. ಈಡನ್​ ಗಾರ್ಡನ್​​ನಲ್ಲಿ ಅಂದು ಅರ್​​ಸಿಬಿ ಬ್ಯಾಟರ್​​ಗಳು ಪೆವಿಲಿಯನ್​​ ಪರೇಡ್​ ನಡೆಸಿದ್ರು. ಕೇವಲ 132 ರನ್​ಗಳ ಟಾರ್ಗೆಟ್​ ಬೆನ್ನತ್ತಿದ ಆರ್​​​​ಸಿಬಿ, ಕೆಕೆಆರ್​​ ಬೌಲಿಂಗ್​ ಎದುರು ಕಕ್ಕಾಬಿಕ್ಕಿಯಾಯ್ತು. ಒಬ್ಬೇ ಒಬ್ಬ ಬ್ಯಾಟರ್ ಕೂಡ ಸಿಂಗಲ್​ ಡಿಜಿಟ್​​ ಕ್ರಾಸ್​​ ದಾಟಲಿಲ್ಲ. ಪರಿಣಾಮ ಕೇವಲ 49 ರನ್​ಗಳಿಗೆ ಆರ್​​ಸಿಬಿ ಆಲೌಟ್​ ಆಯ್ತು. ಐಪಿಎಲ್​ ಇತಿಹಾಸದ ಹೀನಾಯ ದಾಖಲೆಯಿದು.
ಇದನ್ನೂ ಓದಿ: ಮೊದಲ ಪಂದ್ಯಕ್ಕೂ ಮುನ್ನ ಅಣ್ಣಾವ್ರ ನೆನಪಿಸಿದ RCB; ಕ್ಯಾಪ್ಟನ್ ರಜತ್ ಅಭಿಮಾನಿಗಳಿಗೆ ಹೇಳಿದ್ದೇನು?
/newsfirstlive-kannada/media/post_attachments/wp-content/uploads/2025/03/RCB-5.jpg)
ವರ್ಷ: 2019, ಮ್ಯಾಚ್​ ನಂ.17
2019ರ ಸೀಸನ್​​ನ ಈ ಪಂದ್ಯದಲ್ಲಿ ಆರ್​​ಸಿಬಿ ಸುಲಭಕ್ಕೆ ಗೆದ್ದು ಬೀಳೋ ಆತ್ಮವಿಶ್ವಾಸದ ಅಲೆಯಲ್ಲಿ ತೇಲಾಡ್ತಿತ್ತು. ಮೊದಲು ಬ್ಯಾಟಿಂಗ್​ ನಡೆಸಿ 205 ರನ್​ಗಳ ಬಿಗ್​ ಸ್ಕೋರ್​​​​ ಕಲೆ ಹಾಕಿತ್ತು. ಈ ಟಾರ್ಗೆಟ್​ ಬೆನ್ನತ್ತಿದ ಕೆಕೆಆರ್​​ ಇನ್ನಿಂಗ್ಸ್​ನ ಅಂತಿಮ ಹಂತವರೆಗೂ ಪಂದ್ಯ ಆರ್​​ಸಿಬಿ ಬಿಗಿ ಹಿಡಿತದಲ್ಲೇ ಇತ್ತು. ಆ್ಯಂಡ್ರೆ ರಸೆಲ್​ ಕಣಕ್ಕಿಳಿದ ಬಳಿಕ ಪಂದ್ಯದ ಗತಿಯೇ ಬದಲಾಯ್ತು. 13 ಎಸೆತಗಳಲ್ಲಿ 48 ರನ್​​ ಚಚ್ಚಿದ ಆ್ಯಂಡ್ರೆ ರಸೆಲ್​ ಆರ್​​ಸಿಬಿ ಸೋಲಿಗೆ ಕಾರಣವಾದ್ರು.
ವರ್ಷ: 2024, ಮ್ಯಾಚ್​ ನಂ.36
ಕಳೆದ ಸೀಸನ್​ನ ಕೆಕೆಆರ್​ ವಿರುದ್ಧದ 2ನೇ ಮುಖಾಮುಖಿಯಲ್ಲಿ ಆರ್​​ಸಿಬಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿತ್ತು. ಪಂದ್ಯ ಕೊನೆಯ ಓವರ್​​ನಲ್ಲಿ ಆರ್​​ಸಿಬಿ ಗೆಲುವುಗೆ 20 ರನ್​ಗಳು ಬೇಕಿದ್ವು. ಮಿಚೆಲ್​ ಸ್ಟಾರ್ಕ್​​ ಬೌಲಿಂಗ್​ನಲ್ಲಿ ಕೊನೆಯ ಓವರ್​ನ ಮೊದಲ 4 ಎಸೆತಗಳಲ್ಲಿ 3 ಸಿಕ್ಸರ್​ ಚಚ್ಚಿದ ಕರಣ್​ ಶರ್ಮಾ ಆರ್​​​ಸಿಬಿ ಪಾಳಯದಲ್ಲಿ ಗೆಲುವಿನ ಆಸೆ ಹುಟ್ಟಿ ಹಾಕಿದ್ರು. 5 ಎಸೆತದಲ್ಲಿ ಕರಣ್​ ಔಟ್​​​ ಆದ್ರು. ಕೊನೆಯ ಬೌಲ್​​ನಲ್ಲಿ ಲಾಕಿ ಫರ್ಗ್ಯುಸನ್​ ರನೌಟ್​​ ಆದ್ರು. ಪಂದ್ಯದಲ್ಲಿ ಆರ್​​ಸಿಬಿ 2 ರನ್​ನಿಂದ ಸೋಲ್ತು. ಆರ್​​ಸಿಬಿಯ ಹೋರಾಟ ಅಭಿಮಾನಿಗಳ ಮನಗೆಲ್ತು.
ಐಪಿಎಲ್​ ಇತಿಹಾಸದ ಮುಖಾಮುಖಿಯಲ್ಲಿ ಕೆಕೆಆರ್​ ಮೇಲುಗೈ ಸಾಧಿಸಿದ್ರೆ ಆರ್​​ಸಿಬಿ ಹಿನ್ನಡೆ ಅನುಭವಿಸಿರೋದೆ ಹೆಚ್ಚು. ಇದೇ ಕಾರಣಕ್ಕೆ ಕೆಕೆಆರ್​ ವಿರುದ್ಧ ಪಂದ್ಯ ಆರ್​​ಸಿಬಿ ಪಾಲಿಗೆ ಪ್ರತಿಷ್ಟೆಯ ಸಮರವಾಗಿ ಮಾರ್ಪಡುತ್ತೆ. ಇಂದಿನ ಪಂದ್ಯಕ್ಕೂ ಮುನ್ನ ಕೂಡ ಆರ್​​ಸಿಬಿ ಕ್ಯಾಂಪ್​​ನಲ್ಲಿ ಸೇಡಿನ ರೋಷಾಗ್ನಿ ಹೊತ್ತಿ ಉರೀತಿದೆ.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us