/newsfirstlive-kannada/media/post_attachments/wp-content/uploads/2024/11/VENKATESH_IYER.jpg)
2025ರ ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯುತ್ತಿದೆ. ರಿಷಬ್ ಪಂತ್ 27 ಕೋಟಿ ರೂಪಾಯಿಗೆ ಲಕ್ನೋ ಟೀಮ್ ಪಾಲಾಗಿದ್ದಾರೆ. ಶ್ರೇಯಸ್ ಅಯ್ಯರ್ ಅವರು ಪಂಜಾಬ್ ಟೀಮ್ಗೆ 26.75 ಕೋಟಿ ರೂಪಾಯಿಗೆ ಸೇಲ್ ಆಗಿದ್ದಾರೆ. ಐಪಿಎಲ್ ಹರಾಜು ಪ್ರಕ್ರಿಯೆ ಈಗಲೂ ನಡೆಯುತ್ತಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ತಮ್ಮದೇ ಆಟಗಾರನ ಮೇಲೆ ಭಾರೀ ಹಣ ಸುರಿದು ಖರೀದಿ ಮಾಡಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯು ತಮ್ಮದೇ ತಂಡದ ಆಟಗಾರ ಆಗಿರುವ ವೆಂಕಟೇಶ್ ಅಯ್ಯರ್ ಮೇಲೆ ಒಟ್ಟು 23.75 ಕೋಟಿ ಬಿಡ್ ಮಾಡಿದೆ. ವೆಂಕಟೇಶ್ ಅಯ್ಯರ್ ಹೆಸರು ಹರಾಜಿಗೆ ಕರೆದಾಗ ಆರ್ಸಿಬಿ ಫ್ರಾಂಚೈಸಿಯು ಸಖತ್ ಪೈಪೋಟಿ ನೀಡಿತು. ಬರೋಬ್ಬರಿ 23.50 ಕೋಟಿ ರೂಪಾಯಿಗಳವರೆಗೆ ಆರ್ಸಿಬಿ ಹರಾಜು ಕರೆದಿತ್ತು. ಈ ಹರಾಜಿನಲ್ಲಿ ಆರ್ಸಿಬಿ ಹಾಗೂ ಕೋಲ್ಕತ್ತಾ ನಡುವೆ ಭಾರೀ ಬಿಡ್ ನಡೆದಿತ್ತು. ಆದರೆ ಕೊನೆಗೆ ಈ ಬಿಡ್ನಲ್ಲಿ ಕೋಲ್ಕತ್ತಾವೇ ಗೆಲುವು ಪಡೆಯಿತು ಎನ್ನಬಹುದು.
ಇದನ್ನೂ ಓದಿ:IPL Auction; ತವರಿಗೆ ಮರಳಿದ R ಅಶ್ವಿನ್.. ಎಷ್ಟು ಕೋಟಿ ಕೊಟ್ಟು ಚೆನ್ನೈ ಖರೀದಿಸಿತು?
ಏಕೆಂದರೆ ವೆಂಕಟೇಶ್ ಅಯ್ಯರ್ ಅವರನ್ನು ಖರೀದಿ ಮಾಡಲು ಆರ್ಸಿಬಿ ಫ್ರಾಂಚೈಸಿಯು ಒಟ್ಟು 23.50 ಕೋಟಿ ರೂಪಾಯಿಗೆ ಕರೆದಿತ್ತು. ಇದರ ಮೇಲೆ ಕೆಕೆಆರ್ ಇನ್ನು 25 ಲಕ್ಷ ಹೆಚ್ಚು ಮಾಡಿ ಹರಾಜು ಕರೆಯಿತು. ಆದರೆ ಆರ್ಸಿಬಿ ಇದರಿಂದ ಹಿಂದೆ ಸರಿದ ಕಾರಣ ವೆಂಕಟೇಶ್ ಅಯ್ಯರ್ಗೆ ಒಟ್ಟು 23.75 ಕೋಟಿ ರೂಪಾಯಿಗಳನ್ನು ನೀಡಿ ಕೋಲ್ಕತ್ತಾ ಖರೀದಿ ಮಾಡಿತು. ಇದರಿಂದ ವೆಂಕಟೇಶ್ ಅಯ್ಯರ್ ಮತ್ತೆ ತಮ್ಮ ತಂಡವನ್ನೇ ತಬ್ಬಿಕೊಂಡಿದ್ದಾರೆ ಎಂದು ಹೇಳಬಹುದು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ