/newsfirstlive-kannada/media/post_attachments/wp-content/uploads/2024/05/KKR-VS-SRH-2.jpg)
ಚಿನ್ನಸ್ವಾಮಿಯಲ್ಲಿ ನಡೆಯಬೇಕಿದ್ದ ಐಪಿಎಲ್ ಪಂದ್ಯವು ಮಳೆಯಿಂದಾಗಿ ರದ್ದುಗೊಂಡಿದೆ. ಆ ಮೂಲಕ ಹಾಲಿ ಚಾಂಪಿಯನ್, ಅಜಿಂಕ್ಯ ರಹಾನೆ ನೇತೃತ್ವದ ಕೋಲ್ಕತ್ತ ನೈಟ್ ರೈಡರ್ಸ್, ಈ ಬಾರಿಯ ಐಪಿಎಲ್ ಜರ್ನಿ ಮುಗಿಸಿದೆ.
ಪಾಯಿಂಟ್ಸ್ ಟೇಬಲ್ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ 12 ಪಂದ್ಯಗಳಲ್ಲಿ 5 ಗೆಲುವುಗಳೊಂದಿಗೆ 11 ಅಂಕಗಳೊಂದಿಗೆ ಆರನೇ ಸ್ಥಾನದಲ್ಲಿತ್ತು. ಒಂದು ವೇಳೆ ಇವತ್ತು ಬೆಂಗಳೂರು ವಿರುದ್ಧ ಗೆದ್ದಿದ್ದರೆ ಪ್ಲೇ-ಆಫ್ ಪ್ರವೇಶಕ್ಕೆ ಸಣ್ಣ ಅವಕಾಶ ಇತ್ತು. ಇಂದಿನ ಪಂದ್ಯ ಮಳೆಯಿಂದ ರದ್ದುಗೊಂಡ ಹಿನ್ನೆಲೆಯಲ್ಲಿ ಆ ಅವಕಾಶ ಕೂಡ ಮುಚ್ಚಿದೆ. ಪಂದ್ಯ ಮಳೆಯಿಂದ ರದ್ದಾದ ಹಿನ್ನೆಲೆಯಲ್ಲಿ ಒಂದು ಅಂಕ ಪಡೆದು, ಒಟ್ಟು 12 ಪಾಯಿಂಟ್ಸ್ ಗಳಿಸಿ 6ನೇ ಸ್ಥಾನದಲ್ಲಿಯೇ ಉಳಿದಿದೆ.
ಇದನ್ನೂ ಓದಿ: RCB ಮ್ಯಾಚ್ಗೂ ಅಡ್ಡಿ.. ಬೆಂಗಳೂರಲ್ಲಿ 20ಕ್ಕೂ ಅಧಿಕ ಮನೆಗಳಿಗೆ ನುಗ್ಗಿದ ನೀರು.. ಎಲ್ಲೆಲ್ಲಿ ಏನೇನು ಆಯ್ತು..?
ಟೂರ್ನಿಯಿಂದ ಹೊರಬಿದ್ದ 4 ತಂಡಗಳು..
IPL 2025 ರ ಕುತೂಹಲಕಾರಿ ವಿಷಯವೆಂದರೆ ಇಲ್ಲಿಯವರೆಗಿನ 3 ತಂಡಗಳು ಪ್ಲೇಆಫ್ ರೇಸ್‌ನಿಂದ ಹೊರ ಬಿದ್ದಿದ್ದವು. ಚೆನ್ನೈ ಸೂಪರ್ ಕಿಂಗ್ಸ್, ರಾಜಸ್ಥಾನ್ ರಾಯಲ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಹೊರಬಿದ್ದಿವು. ಇದೀಗ ಅವುಗಳ ಸಾಲಿಗೆ ಕೋಲ್ಕತ್ತ ನೈಟ್ ರೈಡರ್ಸ್ ಕೂಡ ಸೇರಿದೆ.
ಇದನ್ನೂ ಓದಿ: RCB ಅಭಿಮಾನಿಗಳಿಗೆ ನಿರಾಸೆ.. ಪ್ಲೇ-ಆಫ್ಗೆ ಹೋಗುತ್ತಾ ಬೆಂಗಳೂರು..?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್