/newsfirstlive-kannada/media/post_attachments/wp-content/uploads/2025/04/KL-RAHUL-1.jpg)
ಸೀಸನ್-18ರ ಐಪಿಎಲ್ ಮುಗೀದು ಒಂದೂವರೆ ತಿಂಗಳಾಗ್ತಿದೆ. ಸೀಸನ್-19ರ ಐಪಿಎಲ್ ಚರ್ಚೆಗಳು ಮುನ್ನಲೆಗೆ ಬಂದಿವೆ. ಒಂದ್ಕಡೆ ಚೆನ್ನೈ ಸೂಪರ್ ಕಿಂಗ್ಸ್, ರಾಜಸ್ಥಾನ್ ರಾಯಲ್ಸ್ ತಂಡಗಳ ಟ್ರೇಡಿಂಗ್ ಮಾತುಕತೆಯ ವರದಿಗಳಾಗ್ತಿದ್ರೆ, ಮತ್ತೊಂದ್ಕಡೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಸುದ್ದಿ ಮುನ್ನಲೆಗೆ ಬಂದಿದೆ. ಇದಕ್ಕೆ ಕಾರಣ ಸೀಸನ್-18ರ ಐಪಿಎಲ್ ಪ್ರದರ್ಶನ.
ಸೀಸನ್-18ರಲ್ಲಿ ನಿರೀಕ್ಷೆ ತಕ್ಕ ಪ್ರದರ್ಶನ ನೀಡದ ಕೊಲ್ಕತ್ತಾ ನೈಟ್ ರೈಡರ್ಸ್, ಮುಂದಿನ ಸೀಸನ್ಗೆ ಬಲಿಷ್ಠ ತಂಡ ಕಟ್ಟುವತ್ತ ದೃಷ್ಟಿ ಹರಿಸಿದೆ. ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಿರುವ ಕೊಲ್ಕತ್ತಾ ನೈಟ್ ರೈಡರ್ಸ್, ಬಿಗ್ ವಿಕೆಟ್ ಕೀಪರ್ ಆ್ಯಂಡ್ ಬ್ಯಾಟ್ಸ್ಮನ್ ಮೇಲೆ ಕಣ್ಣಿಟ್ಟಿದೆ.
ಇದನ್ನೂ ಓದಿ: ಆಧಾರ್ ಕಾರ್ಡ್ನಲ್ಲಿ ಎಷ್ಟು ವರ್ಷಗಳ ನಂತರ ಮಕ್ಕಳ ಬಯೋಮೆಟ್ರಿಕ್ ಅಪ್ಡೇಟ್ ಮಾಡಿಸಬೇಕು?
ವಿಕೆಟ್ ಕೀಪರ್ ಆ್ಯಂಡ್ ಓಪನರ್ ಆಗಿ ಫೇಲ್ಯೂರ್ ಆಗಿದ್ದ ಕ್ವಿಂಟನ್ ಡಿಕಾಕ್, ರಹಮಾನುಲ್ಲಾ ಗುರ್ಬಾಜ್, ಟೂರ್ನಿಯುದ್ದಕ್ಕೂ ಗುಡ್ ಸ್ಟಾರ್ಟ್ ನೀಡಲೇ ಇಲ್ಲ. ಹೀಗಾಗಿ ಇಂಡಿಯನ್ ವಿಕೆಟ್ ಕೀಪರ್ಗಳಾದ ಕೆ.ಎಲ್.ರಾಹುಲ್, ಸಂಜು ಸ್ಯಾಮ್ಸನ್, ಧ್ರುವ್ ಜುರೇಲ್, ಇಶಾನ್ ಕಿಶನ್, ಜಿತೇಶ್ ಶರ್ಮಾ ಮೇಲೆ ಕಣ್ಣಾಕಿದೆ. ಈ ಐವರಲ್ಲಿ ಒಬ್ಬರನ್ನ ತಂಡಕ್ಕೆ ಕರೆತರುವ ಯತ್ನದಲ್ಲಿದೆ.
ಕನ್ನಡಿಗ ಕೆ.ಎಲ್.ರಾಹುಲ್ ಮೇಲೆ ಕೊಲ್ಕತ್ತಾ ಕಣ್ಣು
ಕೊಲ್ಕತ್ತಾದ ಮೇನ್ ಟಾರ್ಗೆಟ್ ಕನ್ನಡಿಗ ಕೆ.ಎಲ್.ರಾಹುಲ್. ವಿಕೆಟ್ ಮುಂದೆ ನಿಂತು ಮ್ಯಾಚ್ ವಿನ್ನಿಂಗ್ ನಾಕ್ಸ್ ಆಡ್ತಾರೆ. ಎಲ್ಲಾ ಕಂಡೀಷನ್ಸ್ಗೂ ಸಲ್ಲುವ ಕನ್ನಡಿಗ ಟಾಪ್ ಆರ್ಡರ್ ಟು ಲೋವರ್ ಆರ್ಡರ್ ತನಕ ಬ್ಯಾಟ್ ಬೀಸಬಲ್ಲ ತಾಕತ್ತಿದೆ.
ಇದನ್ನೂ ಓದಿ: ರೌಡಿಶೀಟರ್ ಬಿಕ್ಲು ಶಿವನ ಕೇಸ್ನಲ್ಲಿ ಬೈರತಿ ಬಸವರಾಜ್ಗೆ ಮತ್ತಷ್ಟು ಸಂಕಷ್ಟ..!
ಕೆ.ಎಲ್.ರಾಹುಲ್ ಮೇಲೆ ಒಲವು ಯಾಕೆ..?
- ನಾಯಕ ಅಜಿಂಕ್ಯಾ ರಹಾನೆ ಮೇಲೆ ಕೆಕೆಆರ್ಗೆ ಇಲ್ಲ ವಿಶ್ವಾಸ
- ಟಿ20 ಫಾರ್ಮೆಟ್ಗೆ ರಹಾನೆ ಸೂಕ್ತವಲ್ಲ ಎಂಬ ಅಭಿಪ್ರಾಯ
- ಪರ್ಯಾಯ ನಾಯಕ, ಲಾಂಗ್ ಟರ್ಮ್ ಕ್ಯಾಪ್ಟನ್ ತಂಡದಲ್ಲಿಲ್ಲ
- ಕ್ಯಾಪ್ಟನ್ ಮೆಟಿರಿಯಲ್ ಕಾರಣಕ್ಕೆ ರಾಹುಲ್ ಮೇಲೆ ಕಣ್ಣು!
- ಪಂಜಾಬ್, ಲಕ್ನೋ ತಂಡದ ನಾಯಕನಾಗಿ ರಾಹುಲ್ಗೆ ಅನುಭವ
- ಕನ್ಸಿಸ್ಟೆನ್ಸಿ ಜೊತೆಗೆ ತಂಡವನ್ನು ಯಶಸ್ವಿಯಾಗಿ ನಿಭಾಯಿಸ್ತಾರೆ
ಒಂದೇ ಕಲ್ಲಲ್ಲಿ ಮೂರು ಹಕ್ಕಿ ಹೊಡೆಯೋ ಪ್ಲಾನ್..!
ವಿಕೆಟ್ ಕೀಪರ್ಸ್ ಹಲವರಿದ್ದಾರೆ. ಕೆ.ಎಲ್.ರಾಹುಲ್ ಯಾಕೆ ಎಂಬ ಪ್ರಶ್ನೆಗೆ ಉತ್ತರ. ಒಂದೇ ಕಲ್ಲಲ್ಲಿ ಮೂರು ಹಕ್ಕಿ ಹೊಡೆಯೋ ಉತ್ತರ. ಯಾಕಂದ್ರೆ, ಇತರೆ ವಿಕೆಟ್ ಕೀಪರ್ಸ್ಗೆ ಹೋಲಿಸಿದ್ರೆ, ಕೆ.ಎಲ್.ರಾಹುಲ್ಗೆ ನಾಯಕನಾಗಿ ತಂಡವನ್ನು ಮುನ್ನಡೆಸಿದ ಅನುಭವ ಇದೆ. ಬ್ಯಾಟಿಂಗ್ ಕನ್ಸಿಸ್ಟೆನ್ಸಿಯ ಜೊತೆಗೆ ವಿಕೆಟ್ ಕೀಪರ್ ಆಗಿ ತಂಡಕ್ಕೆ ನೆರವಾಗ್ತಾರೆ. ಇದಲ್ಲಕ್ಕಿಂತ ಕೆ.ಎಲ್.ರಾಹುಲ್ ಅನುಭವ ಹಾಗೂ ಇತರೆ ಆಟಗಾರರ ಜೊತೆ ಹೊಂದಿಕೊಳ್ಳುತ್ತಾರೆ. ಪ್ರತಿಯೊಬ್ಬರ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ಕೆ.ಎಲ್.ರಾಹುಲ್, ತಂಡಕ್ಕೆ ಆಗಮಿಸಿದ್ರೆ, ಭಾರೀ ಲಾಭವೇ ಆಗುತ್ತೆ ಅನ್ನೋದು ಮ್ಯಾನೇಜ್ಮೆಂಟ್ ಲೆಕ್ಕಾಚಾರ.
ಇದನ್ನೂ ಓದಿ: ‘ಇಲ್ಲ, ಇಲ್ಲ ಇನ್ನೂ ಉಸಿರು ಇದೆ..’ ಪ್ರಿಯಕರ ಬಾವನಿಗೆ ಚಾಟ್ ಮಾಡುತ್ತಲೇ ಪತಿಯನ್ನ ಮುಗಿಸಿದ ಪತ್ನಿ..!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ