newsfirstkannada.com

ಸುನಿಲ್ ನರೈನ್ ಮಿಂಚಿನ ಬ್ಯಾಟಿಂಗ್​.. ಕನ್ನಡಿಗ ಕೆಎಲ್ ರಾಹುಲ್​ ನೇತೃತ್ವದ ತಂಡಕ್ಕೆ ಬಿಗ್ ಟಾರ್ಗೆಟ್​ ಕೊಟ್ಟ KKR

Share :

Published May 5, 2024 at 9:39pm

    ಕೆಕೆಆರ್ ಪರ ಓಪನರ್​ ಪಿಲಿಫ್ ಸಾಲ್ಟ್​, ನರೈನ್​ ಅದ್ಭುತ ಬ್ಯಾಟಿಂಗ್

    ಬಿಗ್ ಟಾರ್ಗೆಟ್ ಅನ್ನು ಚೇಜ್ ಮಾಡಿ ರಾಹುಲ್ ಪಡೆ ಗೆಲ್ಲಬೇಕಾಗಿದೆ

    6 ಬೌಂಡರಿ, 7 ಸಿಕ್ಸ್ ಸಮೇತ 81 ರನ್​ಗಳು ಸಿಡಿಸಿದ ಸುನೀಲ್ ನರೈನ್

ಲಕ್ನೋದ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್​ ಪಂದ್ಯದಲ್ಲಿ ಲಕ್ನೋ ಸೂಪರ್ ಜೆಂಟ್ಸ್​​ಗೆ ಕೋಲ್ಕತ್ತಾ ನೈಟ್​ ರೈಡರ್ಸ್ 6 ವಿಕೆಟ್​​ ಕಳೆದುಕೊಂಡು 235 ರನ್​ಗಳ ಬಿಗ್ ಟಾರ್ಗೆಟ್ ಅನ್ನು ನೀಡಿದೆ.

ಪಂದ್ಯದ ಆರಂಭಕ್ಕೂ ಮೊದಲು ಟಾಸ್ ಗೆದ್ದುಕೊಂಡ ಲಕ್ನೋ ಸೂಪರ್ ಜೆಂಟ್ಸ್ ತಂಡದ ನಾಯಕ ಕೆ.ಎಲ್ ರಾಹುಲ್ ಅವರು ಬೌಲಿಂಗ್ ಆಯ್ದುಕೊಂಡರು. ಎದುರಾಳಿ ಕೆಕೆಆರ್​ ಅನ್ನು ಬ್ಯಾಟಿಂಗ್​ಗೆ ಆಹ್ವಾನಿಸಿದರು. ರಾಹುಲ್ ಅವರ ಈ ನಿರ್ಧಾರ ತಪ್ಪು ಎಂದು ಕೆಲವೇ ಕ್ಷಣದಲ್ಲಿ ಗೊತ್ತಾಯಿತು. ಕೆಕೆಆರ್ ಪರ ಓಪನರ್ಸ್ ಆಗಿ ಮೈದಾನಕ್ಕೆ ಬಂದ ಪಿಲಿಫ್ ಸಾಲ್ಟ್​ ಮತ್ತು ಸುನಿಲ್ ನರೈನ್ ಭರ್ಜರಿ ಓಪನಿಂಗ್ ಪಡೆದುಕೊಂಡರು. 32 ರನ್​ ಗಳಿಸಿ ಆಡುವಾಗ ಸಾಲ್ಟ್,​ ನವೀನ್ ಬೌಲಿಂಗ್​ನಲ್ಲಿ ಔಟ್ ಆದರು.

ಆದರೆ ಕ್ರೀಸ್ ಕಾಯ್ದುಕೊಂಡ ಸುನೀಲ್ ನರೈನ್ ಅವರು ಅಮೋಘ ಬ್ಯಾಟಿಂಗ್ ಮುಂದುವರೆಸಿ 6 ಬೌಂಡರಿ, 7 ಸಿಕ್ಸ್ ಸಮೇತ 81 ರನ್​ ಬಿಷ್ಣೋಯಿ ಸ್ಪೆಲ್​ಗೆ ಬಲೆಗೆ ಬಿದ್ದರು. ಆಂಗ್ಕ್ರಿಶ್ ರಘುವಂಶಿ ಕೂಡ ಒಳ್ಳೆಯ ಬ್ಯಾಟಿಂಗ್ ಮಾಡಿ 32 ರನ್​ಗಳ ಗಳಿಸಿದರು. ಆಂಡ್ರೆ ರಸೆಲ್ 12, ರಿಂಕು 16, ಕ್ಯಾಪ್ಟನ್ ಅಯ್ಯರ್ 23, ರಮಣದೀಪ್ ಸಿಂಗ್ ವೆಂಕಟೇಶ್ ಅಯ್ಯರ್ ರನ್ ಗಳಿಸಿದರು.

ಈ ಮೂಲಕ ನಿಗದಿತ 20 ಓವರ್​​ಗಳಲ್ಲಿ 6 ವಿಕೆಟ್​​ಗೆ 235 ರನ್​ಗಳ ಬೃಹತ್ ಟಾರ್ಗೆಟ್​ ಅನ್ನು ಕೆಕೆಆರ್ ನೀಡಿದೆ. ಲಕ್ನೋ ಸೂಪರ್ ಜೆಂಟ್ಸ್​​ ಪರ ನವೀನ್ ಉಲ್ ಹಕ್ ಪ್ರಮುಖವಾದ 3 ವಿಕೆಟ್​ಗಳನ್ನು ಪಡೆದುಕೊಂಡರು. ಯಶ್ ಠಾಕೂರ್, ಬಿಷ್ಣೋಯಿ ಹಾಗೂ ಚರಾಕ್ ತಲಾ ಒಂದೊಂದು ವಿಕೆಟ್​ ಪಡೆದುಕೊಂಡು ತಂಡಕ್ಕೆ ನೆರವಾದರು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಸುನಿಲ್ ನರೈನ್ ಮಿಂಚಿನ ಬ್ಯಾಟಿಂಗ್​.. ಕನ್ನಡಿಗ ಕೆಎಲ್ ರಾಹುಲ್​ ನೇತೃತ್ವದ ತಂಡಕ್ಕೆ ಬಿಗ್ ಟಾರ್ಗೆಟ್​ ಕೊಟ್ಟ KKR

https://newsfirstlive.com/wp-content/uploads/2024/05/KKR_LSG.jpg

Load More