RCB ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಡೆಲ್ಲಿಗೆ ಮುಖಭಂಗ.. ಕೋಲ್ಕತ್ತ ಪ್ಲೇ ಆಫ್​ ಕನಸಿಗೆ ಜೀವ ತುಂಬಿದ ನರೈನ್..!

author-image
Ganesh
Updated On
RCB ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಡೆಲ್ಲಿಗೆ ಮುಖಭಂಗ.. ಕೋಲ್ಕತ್ತ ಪ್ಲೇ ಆಫ್​ ಕನಸಿಗೆ ಜೀವ ತುಂಬಿದ ನರೈನ್..!
Advertisment
  • ಹೋಮ್​​ಗ್ರೌಂಡ್​ನಲ್ಲಿ ಡೆಲ್ಲಿಗೆ ಮತ್ತೊಂದು ಮುಖಭಂಗ
  • 14 ರನ್​ಗಳ ಜಯ ಸಾಧಿಸಿದ ಕೋಲ್ಕತ್ತ ನೈಟ್ ರೈಡರ್ಸ್
  • ಕೊಲ್ಕತ್ತಾ ಪ್ಲೇ ಆಫ್​ ಕನಸು ಜೀವಂತ, ನರೈನ್​ ಮ್ಯಾಜಿಕ್

ಡೆಲ್ಲಿಯ ಹೋಮ್​​ಗ್ರೌಂಡ್​ನಲ್ಲಿ ನಿನ್ನೆ ಕೆಕೆಆರ್​​ ಅಬ್ಬರ ಜೋರಾಗಿತ್ತು. ಆಲ್​​ರೌಂಡ್​ ಆಟದ ಮೂಲಕ ಮಿಂಚಿದ ಕೆಕೆಆರ್​ ತಂಡ ಅರುಣ್​ ಜೇಟ್ಲಿ ಸ್ಟೇಡಿಯಂನಲ್ಲಿ ಗೆಲುವಿನ ಕೇಕೆ ಹಾಕಿತು. ಸೋಲುಂಡ ಡೆಲ್ಲಿ ತವರಿನಲ್ಲಿ ಮುಖಭಂಗ ಅನುಭವಿಸಿತು. ಆ ಮೂಲಕ ಪಾಯಿಂಟ್ಸ್ ಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೆ ಏರಬೇಕು ಎಂಬ ಡೆಲ್ಲಿ ಕನಸಿಗೆ ಕೊಕ್ಕೆ ಬಿದ್ದಿದೆ. ಆರ್​ಸಿಬಿ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನ ಲೀಡ್ ಮಾಡ್ತಿದೆ.

ಇದನ್ನೂ ಓದಿ: ಕೋಲ್ಕತ್ತ ಹೋಟೆಲ್​​ನಲ್ಲಿ ಭೀಕರ ಬೆಂಕಿ ಅವಘಡ.. 14 ಮಂದಿ ಸಜೀವ ದಹನ

publive-image

ಅರುಣ್​ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ನಿನ್ನೆಯ ಪಂದ್ಯದಲ್ಲಿ ಟಾಸ್​ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್​ ನಾಯಕ ಅಕ್ಷರ್​ ಪಟೇಕ್​ ಕೆಕೆಆರ್​ ತಂಡವನ್ನ ಮೊದಲು ಬ್ಯಾಟಿಂಗ್​ಗೆ ಆಹ್ವಾನಿಸಿದ್ರು. ಕೆಕೆಆರ್​​ ಪರ ಆರಂಭಿಕರಾಗಿ ಕಣಕ್ಕಿಳಿದ ರೆಹಮಾನುಲ್ಲಾ ಗುರ್ಬಾರ್​, ಸುನಿಲ್​ ನರೈನ್​ ಅಬ್ಬರದ ಆರಂಭ ನೀಡಿದ್ರು. 3 ಓವರ್​​ ತಂಡ 48 ರನ್​ಗಳಿಸಿತು.

ಗುಡ್​ ಸ್ಟಾರ್ಟ್​ ಪಡೆದ ಕೊಲ್ಕತ್ತಾಗೆ ಮಿಚೆಲ್​ ಸ್ಟಾರ್ಕ್​ ಡಿಚ್ಚಿ ನೀಡಿದ್ರು. 5 ಬೌಂಡರಿ, 1 ಸಿಕ್ಸರ್​ ಬಾರಿಸಿದ್ದ ಗುರ್ಬಾಜ್​​ಗೆ ಪೆವಿಲಿಯನ್​ ದಾರಿ ತೋರಿಸಿದ್ರು. 16 ಎಸೆತಗಳಲ್ಲಿ 27 ರನ್​ಗಳಿಸಿದ್ದ ಸುನಿಲ್​ ನರೈನ್​, ವಿಪ್ರಜ್​ ನಿಗಮ್​ ಸ್ಪಿನ್​ ಮೋಡಿಗೆ ಬಲಿಯಾದ್ರು. ಒಂದೊಳ್ಳೆ ಇನ್ನಿಂಗ್ಸ್​ ಕಟ್ಟಿದ ಅಜಿಂಕ್ಯಾ ರಹಾನೆ 14 ಎಸೆತಗಳಲ್ಲಿ 26 ರನ್​ಗಳಿಸಿ ನಿರ್ಗಮಿಸಿದ್ರು.

ಇದನ್ನೂ ಓದಿ: 35 ಬಾಲ್​ನಲ್ಲಿ 100 ರನ್​​.. ವೈಭವ್ ಸೂರ್ಯವಂಶಿಗೆ ಕೊಹ್ಲಿ ಕಿವಿ.. ಏನಂದ್ರು ಗೊತ್ತಾ..?

ವೆಂಕಟೇಶ್​ ಅಯ್ಯರ್​ ಫ್ಲಾಪ್​ ಶೋ ನೀಡಿದ್ರೆ, ಅಂಗ್​​ಕ್ರಿಷ್​ ರಘುವಂಶಿ ಮಿಂಚಿದ್ರು. 3 ಬೌಂಡರಿ, 2 ಸಿಕ್ಸರ್​ ಸಹಿತ 44 ರನ್​ಗಳ ಸಾಲಿಡ್​​ ಇನ್ನಿಂಗ್ಸ್​​ ಕಟ್ಟಿದ್ರು. ರಿಂಕು ಸಿಂಗ್​ 36 ರನ್​ಗಳ ಕಾಣಿಕೆ ನೀಡಿದ್ರು. ಕೊನೆಯ ಓವರ್​ನಲ್ಲಿ ಬ್ಯೂಟಿಫುಲ್​ ಬೌಲಿಂಗ್​ ಮಾಡಿದ ಮಿಚೆಲ್​ ಸ್ಟಾರ್ಕ್​​ 2 ವಿಕೆಟ್​ ಉರುಳಿಸಿದ್ರು. ರೊವ್​ಮನ್​ ಪೊವೆಲ್​ ಎಲ್​ಬಿ ಬಲೆಗೆ ಬಿದ್ರೆ ಅಂಕುಲ್​ ರಾಯ್​ ಚಮೀರಾ ಹಿಡಿದ ಫೆಂಟಾಸ್ಟಿಕ್​ ಕ್ಯಾಚ್​ಗೆ ಬಲಿಯಾದ್ರು.

ಮರು ಎಸೆತದಲ್ಲೇ 17 ರನ್​ಗಳಿಸಿದ್ದ ಆ್ಯಂಡ್ರೆ ರಸೆಲ್​ ರನೌಟ್​ ಆದರು. ಅಂತಿಮವಾಗಿ 20 ಓವರ್​ ಅಂತ್ಯಕ್ಕೆ 9 ವಿಕೆಟ್​ ಕಳೆದುಕೊಂಡ ಕೆಕೆಆರ್​​ 204 ರನ್​ಗಳ ಬಿಗ್​ ಸ್ಕೋರ್​ ಕಲೆಹಾಕಿತು. 205 ರನ್​ಗಳ ಚೇಸಿಂಗ್​ಗಿಳಿದ ಡೆಲ್ಲಿ ಕ್ಯಾಪಿಟಲ್ಸ್​​ ಆಘಾತದ ಮೇಲೆ ಆಘಾತ ಎದುರಿಸಿತು. ಅಭಿಶೇಕ್​ ಪೊರೆಲ್​​, ಕರುಣ್​ ನಾಯರ್​ ಅಲ್ಪ ಮೊತ್ತಕ್ಕೆ ಔಟಾದ್ರು. ಕೆ.ಎಲ್​ ರಾಹುಲ್​ ರನೌಟ್​ ಆದ್ರು.

ಇದನ್ನೂ ಓದಿ: ಅಪ್ಪನ ಕನಸು ನನಸು.. ಸೆಂಚುರಿ ಬಾರಿಸಿದ ವೈಭವ್ ಸೂರ್ಯವಂಶಿ ಮೊದಲು ಕರೆ ಮಾಡಿದ್ದು ಯಾರಿಗೆ?

ಒಂದೆಡೆ ವಿಕೆಟ್​ ಉರುಳಿದ್ರೆ ಇನ್ನೊಂದು ತುದಿಯಲ್ಲಿದ್ದ ಫಾಫ್​ ಡುಪ್ಲೆಸಿ ಫೆಂಟಾಸ್ಟಿಕ್​ ಆಟವಾಡಿದ್ರು. ಡುಪ್ಲೆಸಿಗೆ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದ ಅಕ್ಷರ್​ ಪಟೇಲ್​ ಸಾಥ್​ ನೀಡಿದ್ರು. 7 ಬೌಂಡರಿ, 2 ಸಿಕ್ಸರ್​ ಸಿಡಿಸಿದ ಡುಪ್ಲೆಸಿ ಹಾಫ್​ ಸೆಂಚುರಿಯ ಇನ್ನಿಂಗ್ಸ್​ ಕಟ್ಟಿದ್ರು. ಕೈ ಇಂಜುರಿಯ ನೋವಿನ ನಡುವೆಯೂ ಹೋರಾಡಿದ ಅಕ್ಷರ್​​ 43 ರನ್​ಗಳ ಅಬ್ಬರದ ಆಟವಾಡಿ ನಿರ್ಗಮಿಸಿದ್ರು. ಬಳಿಕ ಬಂದ ಟ್ರಿಸ್ಟನ್​ ಸ್ಟಬ್ಸ್​ ಬಂದಷ್ಟೇ ವೇಗವಾಗಿ ನಿರ್ಗಮಿಸಿದ್ರು. 62 ರನ್​ಗಳಿಸಿ ಫಾಫ್​ ಡುಪ್ಲೆಸಿ ಔಟಾದ್ರು. ಈ ಮೂರು ವಿಕೆಟ್​ಗಳನ್ನ ಕಬಳಿಸಿದ ಸುನಿಲ್​​ ನರೈನ್​ ಪಂದ್ಯದ ಗತಿ ಬದಲಿಸಿದ್ರು.

ಅಶುತೋಷ್​ ಶರ್ಮಾ, ಮಿಚೆಲ್​ ಸ್ಟಾರ್ಕ್​ ವರುಣ್​ ಚಕ್ರವರ್ತಿಯ ಸ್ಪಿನ್ ಮುಂದೆ ಶರಣಾದ್ರು. ವಿಪ್ರಜ್ ನಿಗಮ್​​​​ ಕೊನೆಯವರೆಗೂ ಹೋರಾಡಿದ್ರು. ತಂಡವನ್ನ ಗೆಲುವಿನ ದಡ ಸೇರಿಸುವಲ್ಲಿ ವಿಫಲರಾದರು. ಅಂತಿಮವಾಗಿ 9 ವಿಕೆಟ್​​ ಕಳೆದುಕೊಂಡ ಡೆಲ್ಲಿ 20 ಓವರ್​ ಅಂತ್ಯಕ್ಕೆ 190 ರನ್​ಗಳಿಸುವಷ್ಟರಲ್ಲಿ ಸುಸ್ತಾಯ್ತು. ಡೆಲ್ಲಿಯನ್ನ ಕಟ್ಟಿ ಹಾಕಿದ ಕೆಕೆಆರ್​ 14 ರನ್​ಗಳ ಜಯ ಸಾಧಿಸಿತು. ಪ್ಲೇ ಆಫ್​ ಪ್ರವೇಶದ ಕನಸನ್ನೂ ಜೀವಂತವಾಗಿರಿಸಿಕೊಳ್ತು.

ಇದನ್ನೂ ಓದಿ: 35 ಬಾಲ್​ನಲ್ಲಿ 100 ರನ್​​.. ವೈಭವ್ ಸೂರ್ಯವಂಶಿಗೆ ಕೊಹ್ಲಿ ಕಿವಿ.. ಏನಂದ್ರು ಗೊತ್ತಾ..?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment