RCB ಪ್ಲೇಯಿಂಗ್-11; ರಜತ್ ಪ್ರಕಟಿಸುವ ಬಲಿಷ್ಠ ತಂಡಕ್ಕೆ ಆಯ್ಕೆ ಆಗುವ ಸ್ಟಾರ್​​ಗಳ ಲಿಸ್ಟ್..!

author-image
Ganesh
Updated On
RCB ಕಪ್ ಗೆಲ್ಲಬೇಕಾ?; ಈ ಪ್ಲೇಯರ್ಸ್​ ರೋಲ್ ಇಂಪಾರ್ಟೆಂಟ್​.. ಇವರು ಏನೇನು ಮಾಡಬೇಕು?
Advertisment
  • ಕೆಕೆಆರ್​ ಮತ್ತು ಆರ್​ಸಿಬಿ ನಡುವೆ ಉದ್ಘಾಟನಾ ಪಂದ್ಯ
  • ಕೋಲ್ಕತ್ತಾದ ಈಡನ್ ಗಾರ್ಡನ್ಸ್​ನಲ್ಲಿ ಮೊದಲ ಪಂದ್ಯ
  • ಆರ್​ಸಿಬಿ ಪ್ಲೇಯಿಂಗ್-11ನಲ್ಲಿ ಯಾರಿಗೆಲ್ಲ ಅವಕಾಶ?

IPLನ 18ನೇ ಆವೃತ್ತಿ ಮೊದಲ ಪಂದ್ಯದಲ್ಲಿ ಆರ್​ಸಿಬಿ ಮತ್ತು ಕೋಲ್ಕತ್ತ ನೈಟ್ ರೈಡರ್ಸ್ ತಂಡಗಳು ಮುಖಾಮುಖಿ ಆಗುತ್ತಿವೆ. ಸಂಜೆ 7.30 ಕ್ಕೆ ಪಂದ್ಯ ಆರಂಭವಾಗಲಿದ್ದು, ಅದಕ್ಕೂ ಮೊದಲು ಉದ್ಘಾಟನಾ ಸಮಾರಂಭ ನಡೆಯಲಿದೆ.

ಆರ್​ಸಿಬಿ ಈ ಬಾರಿ ರಜತ್ ಪಾಟೀದಾರ್​ ನೇತೃತ್ವದಲ್ಲಿ ಅಭಿಯಾನ ಆರಂಭಿಸುತ್ತಿದೆ. ಇದುವರೆಗೂ ಒಮ್ಮೆಯೂ ಕಪ್ ಗೆಲ್ಲದ ಕಾರಣ, ರಜತ್ ಪಾಟೀದಾರ್ ಮೇಲೆ ಭರವಸೆಯ ನಿರೀಕ್ಷೆಗಳು ಹೆಚ್ಚಾಗಿವೆ. ಅಲ್ಲದೇ, ಆರ್​ಸಿಬಿಗೆ ಕಪ್ ಗೆಲ್ಲಿಸಿಕೊಡುವ ಜವಾಬ್ದಾರಿ ಕೂಡ ರಜತ್ ಮೇಲಿದೆ. ಹೀಗಾಗಿ ಕ್ಯಾಪ್ಟನ್, ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರಗಳು ಕೂಡ ನಿರ್ಣಾಯಕವಾಗಿದೆ.

ಇದನ್ನೂ ಓದಿ: ಆರ್​​ಸಿಬಿ, ಕೆಕೆಆರ್​ ನಡುವಿನ IPL​ ಪಂದ್ಯ ನಡೆಯೋದು ಡೌಟ್​; ಕಾರಣವೇನು?

publive-image

ಹೀಗಾಗಿ ಅಭಿಮಾನಿಗಳು ಇಂದಿನ ಪಂದ್ಯದ ಪ್ಲೇಯಿಂಗ್-11 ಹೇಗೆರಲಿದೆ ಎಂಬ ಎಕ್ಸೈಟ್​​ನಲ್ಲಿದ್ದಾರೆ. ರಜತ್ ಪಾಟೀದಾರ್ ಯಾರನ್ನೆಲ್ಲ ತಂಡಕ್ಕೆ ಆಯ್ಕೆ ಮಾಡಿಕೊಳ್ಳಲಿದ್ದಾರೆ ಎಂದು ಕುತೂಹಲ ಹೆಚ್ಚಾಗಿದೆ. ಇಂಡಿಯನ್​ ಪ್ಲೇಯರ್​​ಗಳ ಆಯ್ಕೆ ದೊಡ್ಡ ಸಮಸ್ಯೆ ಅನಿಸಿಲ್ಲ. ಪ್ಲೇಯಿಂಗ್​ ಇಲೆವೆನ್​ನಲ್ಲಿ ಸ್ಥಾನ ಪಡೆಯೋ ನಾಲ್ವರು ವಿದೇಶಿ ಪ್ಲೇಯರ್ಸ್​​ ಯಾರು ಅನ್ನೋದು ಪ್ರಶ್ನೆಯಾಗಿದೆ. ಫಿಲ್​ ಸಾಲ್ಟ್​, ಲಯಾಮ್​ ಲಿವಿಂಗ್​ಸ್ಟೋನ್, ಜೋಶ್​ ಹೇಜಲ್ವುಡ್​​​ ಮೊದಲ 3 ಆಯ್ಕೆಯಾಗಿದ್ದಾರೆ. ಇನ್ನೊಂದು ಸ್ಥಾನಕ್ಕೆ ಟಿಮ್ ಡೇವಿಡ್​, ರೊಮಾರಿಯೋ ಶೆಫರ್ಡ್​, ಜೇಕಬ್​ ಬೆತೆಲ್​ ನಡುವೆ ಫೈಟ್​ ಇದೆ. ಕ್ಯಾಪ್ಟನ್​​ ಚಾಯ್ಸ್​ ಯಾರು ಅನ್ನೋದು ಕುತೂಹಲ ಮೂಡಿಸಿದೆ.

ಸಂಭಾವ್ಯ ಪ್ಲೇಯಿಂಗ್-11: ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ರಜತ್ ಪಾಟೀದಾರ್ (ಕ್ಯಾಪ್ಟನ್), ಲಿಯಾಮ್ ಲಿವಿಂಗ್​ಸ್ಟೋನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೆವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೊಶ್ ಹೇಜಲ್​ವುಡ್, ಯಶ್ ದಯಾಳ್, ಸುಯೇಶ್ ಶರ್ಮಾ.

ಇದನ್ನೂ ಓದಿ: KKR ವಿರುದ್ಧ ಆರ್​ಸಿಬಿಗೆ ಇದೆ 5 ಕಹಿ ಅನುಭವ.. ಕ್ಯಾಪ್ಟನ್ ರಜತ್​ಗೆ ಈ ವಿಚಾರ ಗೊತ್ತಿರಲೇಬೇಕು..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment