/newsfirstlive-kannada/media/post_attachments/wp-content/uploads/2024/08/KolkataDoctorDeath.jpg)
ಕೊಲ್ಕತ್ತಾ: ನಗರದ ಆರ್​ಜಿ ಕರ್ ಕಾಲೇಜಿನಲ್ಲಿ ವೈದ್ಯೆಯ ಮೇಲಾದ ಅನ್ಯಾಯದ ಪ್ರಕರಣ ದಿನದಿಂದ ದಿನಕ್ಕೆ ಹೊಸದೊಂದು ಟ್ವಿಸ್ಟ್ ಪಡೆಯುತ್ತಿದೆ. ಆರಂಭದಲ್ಲಿ ಒಬ್ಬರಿಂದ ಅವಳ ಮೇಲೆ ಆ ಅನಾಚಾರ ನಡೆದಿಲ್ಲ, ಇದು ಸಾಮೂಹಿಕವಾಗಿ ನಡೆದ ಕೃತ್ಯ ಎನ್ನುವ ವಾದ ಹಾಗೂ ಗೂಂಡಾಗಳು ನುಗ್ಗಿ ಆಸ್ಪತ್ರೆಯಲ್ಲಿನ ಸಾಕ್ಷ ನಾಶ ಮಾಡಿದರು ಅನ್ನೋ ವಾದದ ಜೊತೆಗೆ ಈಗ ಮತ್ತೊಂದು ಹೊಸ ಅಧ್ಯಾಯ ತೆರೆದುಕೊಳ್ಳುತ್ತಿದೆ
ಇದನ್ನೂ ಓದಿ:ಆರೋಗ್ಯದ ಸಮಸ್ಯೆಗೆ ಸಿಲುಕಿದ ಸುನಿತಾ ವಿಲಿಯಮ್ಸ್​; ಗಗನಯಾತ್ರಿಗೆ ಆಗಿದ್ದೇನು?
ರಾತ್ರಿ ಪಾಳಯದಲ್ಲಿ ಕೆಲಸಕ್ಕೆ ಬಂದಿದ್ದ ವೈದ್ಯಯ ಮೇಲೆ ವಿಕೃತ ಕಾಮಿ ನಡೆಸಿದ ಅನಾಚಾರ ಜಾಗತಿಕವಾಗಿ ಸುದ್ದಿ ಪಡೆದುಕೊಂಡಿತ್ತು. ಘಟನೆ ನಡೆದ ಬಳಿಕ ಸಂಜಯ್ ರಾಯ್ ಅನ್ನೋ ಆರೋಪಿಯನ್ನ ಬಂಧಿಸಲಾಗಿತ್ತು. ಅದಾದ ಮೇಲೆ ಪ್ರಕರಣದಲ್ಲಿ ಯಾವುದೇ ಬೆಳವಣಿಗಳು ಕಾಣದಿದ್ದಾಗ ಕೊಲ್ಕೊತ್ತಾ ಹೈಕೋರ್ಟ್ ಪ್ರಕರಣವನ್ನು ಸಿಬಿಐಗೆ ವಹಿಸಿದೆ. ಸದ್ಯ ಈ ಪ್ರಕರಣದ ವಿಚಾರವಾಗಿ ಬೇರೆಯದ್ದೇ ಸುದ್ದಿ ಕೇಳಿ ಬರುತ್ತಿವೆ. ಕಾಮುಕರ ಕೈಯಲ್ಲಿ ಸಿಕ್ಕು ನರಳಿದ ವೈದ್ಯೆಗೆ ಕಾಲೇಜಿಗೆ ಸಂಬಂಧಿಸಿದ ಹಲವು ಸತ್ಯಗಳು ಗೊತ್ತಿದ್ದವಂತೆ.
ಇಂಥಹದೊಂದು ಹೇಳಿಕೆಯನ್ನೀಗ ಸಂತ್ರಸ್ತೆ ವೈದ್ಯೆಯ ಸಹೋದ್ಯೋಗಿಗಳೇ ಹೇಳುತ್ತಿದ್ದಾರೆ. ಒಂದು ವೇಳೆ ಇದು ಸಾಧಾರಣ ಪ್ರಕರಣವೇ ಆಗಿದ್ದಲ್ಲಿ ಆರೋಪಿ ಸಂಜಯ್ ರಾಯ್​ಗೆ ವೈದ್ಯೆ ಸೆಮಿನಾರ್ ಹಾಲ್​​ನಲ್ಲಿ ಒಬ್ಬಳೇ ಇದ್ದಾಳೆ ಎಂಬುದು ಹೇಗೆ ಗೊತ್ತಾಯ್ತು. ಅವನಿಗೆ ಯಾರೋ ಮೊದಲೇ ಹೇಳಿರಬೇಕಲ್ಲವೇ. ಅಸಲಿಗೆ ಇದು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕುತ್ತಿದೆ. ಇದು ನಡೆದ ಆ ಒಂದು ಪ್ರಕರಣಕ್ಕೆ ಮಾತ್ರ ಸೀಮಿತವಾಗಿಲ್ಲ . ಇದರ ಹಿಂದೆ ಹಲವು ರಹಸ್ಯಗಳು ಅಡಗಿವೆ ಎಂದು ಹೇಳಿದ್ದಾರೆ.
ಸಂತ್ರಸ್ತೆಗೆ ಗೊತ್ತಿದ್ವಾ ಸಾವಿರ ಸತ್ಯಗಳು..?
ಅದು ಅಲ್ಲದೇ ಇತ್ತೀಚೆಗೆ ವೈದ್ಯೆಗೆ ಹಲವು ರೀತಿಯ ತೊಂದರೆಗಳನ್ನು ಕೊಡಲಾಗುತ್ತಿತ್ತು. ಆಕೆಯ ಕೆಲಸದ ಸಮಯವನ್ನು ಹೆಚ್ಚು ಮಾಡಲಾಗಿತ್ತು. ಹೆಚ್ಚು ಹೆಚ್ಚು ನೈಟ್ ಶಿಫ್ಟ್​​ಗೆ ಆಕೆಯನ್ನು ಕರೆಯಲಾಗುತ್ತಿತ್ತು. ಇವೆಲ್ಲವೂ ಅವಳಿಗೆ ಈ ಕಾಲೇಜಿನಲ್ಲಿ ಅಡಗಿದ ಹಲವು ಸತ್ಯಗಳ ಬಗ್ಗೆ ಗೊತ್ತಿತ್ತು ಎಂದೇ ಸೂಚಿಸುತ್ತಿವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬರಿಗೈಯಲ್ಲಿ ಬಂದ್ರು ಭರ್ಜರಿ ಸ್ವಾಗತ.. ತವರಿನಲ್ಲಿ ವಿನೇಶ್ ಪೋಗಟ್ ಕಣ್ಣೀರು; ಭಾವುಕರಾಗಿ ಹೇಳಿದ್ದೇನು?
ಮತ್ತೊಬ್ಬ ಸಹೋದ್ಯೋಗಿ ಹೇಳುವ ಪ್ರಕಾರ ಸಂತ್ರಸ್ತೆ ಇದ್ದ ಡಿಪಾರ್ಟ್​​ಮೆಂಟ್​ನಲ್ಲಿ ಡ್ರಗ್ಸ್​ ರಾಕೆಟ್ ಜೋರಾಗಿತ್ತು. ಅದನ್ನು ಬಹಿರಂಗಗೊಳಿಸಲು ಆಕೆ ಮುಂದಾಗಿದ್ದಳು. ಹೀಗಾಗಿಯೇ ಅವಳು ಹಂತಕರಿಗೆ ಬಲಿಯಾಗಿದ್ದಾಳೆ ಎಂದು ಹೇಳಿದ್ದಾರೆ. ಸಹೋದ್ಯೋಗಿಗಳ ಹೇಳಿಕೆಯನ್ನು ಗಮನಿಸಿದಲ್ಲಿ. ನಿಜಕ್ಕೂ ಆರ್​ಜಿ ಕರ್ ಕಾಲೇಜಿನಲ್ಲಿ ನಿಗೂಢವಾದ ಯಾವುದೋ ಒಂದು ಸತ್ಯ ಹುದುಗಿದೆ ಅನ್ನೋ ಅನುಮಾನಗಳು ದಟ್ಟವಾಗಿ ಮೂಡುತ್ತಿವೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ