ಗಂಗೆಯ ದಡದಲ್ಲಿ ಯೋಗ ಮಾಡುತ್ತಿದ್ದ ಜನ.. ಸೂಟ್​ಕೇಸ್ ಹಿಡಿದುಕೊಂಡು ಬಂದ ತಾಯಿ, ಮಗಳು! ಅದರಲ್ಲಿ ಇದ್ದಿದ್ದೇನು ಗೊತ್ತಾ?

author-image
Gopal Kulkarni
Updated On
ಗಂಗೆಯ ದಡದಲ್ಲಿ ಯೋಗ ಮಾಡುತ್ತಿದ್ದ ಜನ.. ಸೂಟ್​ಕೇಸ್ ಹಿಡಿದುಕೊಂಡು ಬಂದ ತಾಯಿ, ಮಗಳು! ಅದರಲ್ಲಿ ಇದ್ದಿದ್ದೇನು ಗೊತ್ತಾ?
Advertisment
  • ಗಂಗಾ ನದಿಯಲ್ಲಿ ಸೂಟ್​​ಕೇಸ್​ ಎಸೆಯಲು ಬಂದಿದ್ದ ತಾಯಿ ಮಗಳ ಬಂಧನ
  • ಅವರ ಹರಸಾಹಸ ಕಂಡು ಸಂಶಗೊಂಡ ಸ್ಥಳೀಯರಿಂದ ವಿಚಾರಣೆ ಶುರು
  • ನಾಯಿಯ ಶವ ಇದೆ ಎಂದಿದ್ದ ಸೂಟ್​ಕೇಸ್​ನಲ್ಲಿ ಅಸಲಿಗೆ ಇದ್ದಿದ್ದೇನು?

ಕೊಲ್ಕತ್ತಾದ ಕುಮರ್ತುಳಿಯ ಗಂಗಾ ನದಿಯ ತೀರದಲ್ಲಿ ಮಂಗಳವಾರ ಬೆಳಗ್ಗೆ ಜನರು ಯೋಗ ಹಾಗೂ ವಾಕಿಂಗ್ ಮಾಡುತ್ತಿದ್ದರು. ಇದೇ ವೇಳೆ ಇಬ್ಬರು ಮಹಿಳೆಯರು ಒಂದು ಸೂಟ್​​ಕೇಸ್​ನ್ನು ಎಳೆದುಕೊಂಡು ಗಂಗಾ ನದಿಯಲ್ಲಿ ಎಸೆಯಲು ಪರದಾಡುತ್ತಿದ್ದರು. ಅವರ ಈ ಪರದಾಟ ಅಲ್ಲಿಯ ಸ್ಥಳೀಯರ ಗಮನ ಸೆಳೆದಿದೆ. ನೀಲಿ ಹಾಗೂ ಬಿಳಿ ಬಣ್ಣದ ಕಾರ್​ನಿಂದ ಸೂಟ್​ಕೇಸ್ ಹೊರಕ್ಕೆ ಎಳೆದ ಇಬ್ಬರು ಮಹಿಳೆಯರು, ದುರ್ಗಾಪೂಜೆಗೆ ಹೆಸರಾದ ಕುಮರ್ತುಳಿಯ ಬಳಿ ಗಂಗಾ ನದಿಗೆ ಎಸೆಯಲು ಹರಸಾಹಸಪಡುತ್ತಿದ್ದರು

ಹೀಗೆ ಸೂಟ್​​​ಕೇಸ್​​ವೊಂದನ್ನು ನದಿಗೆ ಎಸೆಯಲು ಒದ್ದಾಡುತ್ತಿದ್ದ ಮಹಿಳೆಯರನ್ನು ಸ್ಥಳೀಯರು ಪ್ರಶ್ನಿಸಿದಾಗ ಅವರು ತಾಯಿ ಮಗಳು ಎಂದು ತಿಳಿದು ಬಂದಿದೆ. ಹೆಸರು ಆರತಿ ಘೋಷ್ ಹಾಗೂ ಫಲ್ಗುಣಿ ಘೋಷ್​ ಎಂದಿದ್ದು. ಸ್ಥಳೀಯರು ಸೂಟ್​ಕೇಸ್​ನಲ್ಲಿ ಏನಿದೆ ಎಂದು ಕೇಳಿದ್ದಾರೆ. ಆದ್ರೆ ತಾಯಿ, ಮಗಳು ಇಬ್ಬರು ಕೂಡ ಯಾರಿಗೂ ಸೂಟ್​ಕೇಸ್​ನ್ನು ಮುಟ್ಟಲು ಬಿಡಲಿಲ್ಲ. ಇದರಲ್ಲಿ ನಾಯಿಯ ಮೃತದೇಹವಿದೆ ಎಂದು ವಾದಿಸಿದರು. ಆದರೆ ಇದು ಸ್ಥಳೀಯರಿಗೆ ನಂಬಲು ಸಾಧ್ಯವಾಗಲಿಲ್ಲ. ಅದು ಅಲ್ಲದೇ ಸೂಟ್​​ಕೇಸ್​ನಿಂದ ಕೆಟ್ಟ ದುರ್ನಾತವೂ ಕೂಡ ಬರುತ್ತಿತ್ತು. ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಪೊಲೀಸರಿಗೆ ಫೋನ್ ಮಾಡಿದ್ದಾರೆ.

ಇದನ್ನೂ ಓದಿ: ಸಾಕ್ಷಿದಾರರಿಗೆ ವಯೋಮಿತಿ ಎಂಬುದಿಲ್ಲ.. ಮಕ್ಕಳ ಸಾಕ್ಷಿಯನ್ನು ಪರಿಗಣಿಸಬಹುದು.. ಸುಪ್ರೀಂಕೋರ್ಟ್​

ಸ್ಥಳಕ್ಕೆ ಬಂದ ಪೊಲೀಸರು ಸೂಟ್​ಕೇಸ್​ ತೆಗೆದು ನೋಡಿದಾಗ ಸೂಟ್​​ಕೇಸ್​ನಲ್ಲಿ ಮಹಿಳೆಯೊಬ್ಬಳ ಶವ ಇದ್ದಿದ್ದು ಕಂಡು ಬಂದಿದೆ. ರಕ್ತಸಿಕ್ತದಿಂದ ಕೂಡಿದ ಬಟ್ಟೆಯಲ್ಲಿ ಸೂಟ್​ಕೇಸ್​ಗೊಳಗೆ ಮಹಿಳೆಯ ಶವವಿತ್ತು. ಕೂಡಲೇ ಪೊಲೀಸರು ತಾಯಿ ಆರತಿ ಘೋಷ್ ಹಾಗೂ ಆಕೆಯ ಮಗಳು ಫಲ್ಗುಣಿ ಘೋಷ್​ರನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಧ್ರುವ ಸರ್ಜಾ, ಪ್ರೇರಣಾಗೆ ಧನ್ಯವಾದ ಹೇಳಿದ ಸರ್ಕಾರಿ ಶಾಲೆ ಮಕ್ಕಳು.. ಯಾಕೆ ಗೊತ್ತಾ?

ಪೊಲೀಸ್ ಮೂಲಗಳು ಹೇಳುವ ಪ್ರಕಾರ ಸೂಟ್​ಕೇಸ್​ನಲ್ಲಿ ಶವವಾಗಿ ಮುದುಡಿ ಹೋಗಿದ್ದು ಸುಮೀತಾ ಘೋಷ್​ ಎಂದು ಗುರುತಿಸಲಾಗಿದೆ. ಇವರು ಆರತಿ ಹಾಗೂ ಪಲ್ಗುಣಿ ಅವರ ಸಂಬಂಧಿಕರು ಎಂದು ಕೂಡ ಹೇಳಲಾಗಿದೆ. ಇನ್ನು ಆ ಸೂಟ್​ಕೇಸ್​ನಲ್ಲಿ ಟ್ರೇನ್​ ಟಿಕೆಟ್ ಕೂಡ ಸಿಕ್ಕಿದೆ ಎಂದು ಪೊಲೀಸರು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment