Advertisment

SSLC, ಪಿಯುಸಿ, ITI, ಪದವಿ ಮುಗಿಸಿದವ್ರಿಗೆ ಗುಡ್​ನ್ಯೂಸ್.. ಸರ್ಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಸಂಬಳ ಎಷ್ಟು?

author-image
Bheemappa
Updated On
SSLC, ಪಿಯುಸಿ, ITI, ಪದವಿ ಮುಗಿಸಿದವ್ರಿಗೆ ಗುಡ್​ನ್ಯೂಸ್.. ಸರ್ಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಸಂಬಳ ಎಷ್ಟು?
Advertisment
  • ಸ್ಟೇಷನ್ ಮಾಸ್ಟರ್, ಲೋಕೋ ಪೈಲಟ್ ಸೇರಿ ವಿವಿಧ ಜಾಬ್​ಗಳು
  • ವಿವಿಧ ಜಾಬ್​ಗಳಿಗೆ ಅರ್ಜಿಗಳನ್ನ ಕರೆದಿರುವ ರೈಲ್ವೆ ಕಾರ್ಪೊರೇಷನ್
  • ಯಾವ್ಯಾವ ಹುದ್ದೆ ಖಾಲಿ ಇವೆ, ಯಾರು ಯಾರು ಅಪ್ಲೇ ಮಾಡಬಹುದು?

ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ (KRCL) ಇಲಾಖೆಯು ಹಿರಿಯ ಸೆಕ್ಷನ್​ ಇಂಜಿನಿಯರ್, ಟೆಕ್ನಿಷೀಯನ್, ಸಹಾಯಕ ಲೋಕೋ ಪೈಲಟ್, ಸ್ಟೇಷನ್ ಮಾಸ್ಟರ್ ಸೇರಿದಂತೆ ಇತರೆ ಹುದ್ದೆಗಳ ಭರ್ತಿಗಾಗಿ ಅರ್ಜಿಗಳನ್ನು ಆಹ್ವಾನ ಮಾಡಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳೂ ಕೊನೆ ದಿನಾಂಕದೊಳಗೆ ಅಪ್ಲೇ ಮಾಡಲು ತಿಳಿಸಲಾಗಿದೆ.

Advertisment

ಇದನ್ನೂ ಓದಿ: ಟೀಚರ್ ಆಗೋ ಅಭ್ಯರ್ಥಿಗಳಿಗೆ ಗುಡ್​ ನ್ಯೂಸ್.. ಶಿಕ್ಷಕ ಹುದ್ದೆ ನೇಮಕಾತಿ ಬಗ್ಗೆ ಸಚಿವರು ಏನಂದ್ರು?

ಈ ಹುದ್ದೆಗಳಿಗೆ ಸಂಬಂಧಿಸಿದಂತೆ ವಿದ್ಯಾರ್ಹತೆ, ಕೊನೆ ದಿನಾಂಕ, ಅರ್ಜಿ ಶುಲ್ಕ, ವಯಸ್ಸು, ಯಾವ ರೀತಿ ಅಪ್ಲೇ ಮಾಡುವುದು, ಎಷ್ಟು ಹುದ್ದೆಗಳು, ಯಾವ ರೀತಿ ಪರೀಕ್ಷೆಗಳು ಇರುತ್ತಾವೆ, ವೇತನ ಶ್ರೇಣಿ, ಹುದ್ದೆಯ ಆಯ್ಕೆ ಪ್ರಕ್ರಿಯೆ ಯಾವ ರೀತಿ ಇರುತ್ತದೆ ಸೇರಿದಂತೆ ಇನ್ನಿತರ ಮಾಹಿತಿಗಳನ್ನು ತಿಳಿದುಕೊಳ್ಳಲು ಅಭ್ಯರ್ಥಿಗಳು ಇದನ್ನು ಸಂಪೂರ್ಣವಾಗಿ ಪರಿಶೀಲನೆ ಮಾಡಿ.

ಇದನ್ನೂ ಓದಿ:ಸಾಹಿತ್ಯ ಅಕಾಡೆಮಿಗೆ ನೇರ ನೇಮಕಾತಿ.. ಯಾವ್ಯಾವ ಹುದ್ದೆಗೆ ಎಷ್ಟೆಷ್ಟು ಸಂಬಳ..?

Advertisment

publive-image

ಯಾವ ಹುದ್ದೆ, ಯಾವ ಕೋರ್ಸ್ ಆಗಿರಬೇಕು..?

  • ಹಿರಿಯ ಸೆಕ್ಷನ್ ಇಂಜಿನಿಯರ್ ಹುದ್ದೆಗಳು 10 ಇದ್ದು ಇದಕ್ಕೆ BE/B.Tec in EE/ಮೆಕ್ಯಾನಿಕಲ್ ಇಂಜಿನಿಯರ್ ಆಗಿರಬೇಕು.
  • ಟೆಕ್ನಿಷೀಯನ್ 35 ಹುದ್ದೆಗಳಿದ್ದು 10ನೇ ತರಗತಿ ಅಥವಾ ಐಟಿಐ ಆಗಿರಬೇಕು.
  • ಸಹಾಯಕ ಲೋಕೋ ಪೈಲಟ್ 15 ಜಾಬ್​ಗಳಿದ್ದು 10ನೇ ತರಗತಿ ಅಥವಾ ಐಟಿಐ ಆಗಿರಬೇಕು.
  • ಟ್ರ್ಯಾಕ್ ನಿರ್ವಾಹಕ ಕೆಲಸಗಳು 35 ಇದ್ದು 10ನೇ ತರಗತಿ ಮಾತ್ರ ಪೂರ್ಣಗೊಳಿಸಿರಬೇಕು.
  • ಸ್ಟೇಷನ್ ಮಾಸ್ಟರ್​ ಹುದ್ದೆಗಳು 10 ಇದ್ದು ಪದವಿ ಆಗಿರಬೇಕು
  • ಗೂಡ್ಸ್​ ಟ್ರೈನ್ ಮ್ಯಾನೇಜರ್ 05 ಹುದ್ದೆಗಳಿದ್ದು ಪದವಿ ಆಗಿರಬೇಕು
  • ಪಾಯಿಂಟ್ ಮ್ಯಾನ್ 60 ಕೆಲಸಗಳಿದ್ದು 10ನೇ ತರಗತಿ ಪಾಸ್ ಆಗಿರಬೇಕು
  • ESTM 15 ಕೆಲಸಗಳು ಇದ್ದು 10 ತರಗತಿ, ಐಟಿಐ, ಸೆಕೆಂಡ್ ಪಿಯುಸಿ ಆಗಿರಬೇಕು
  • ಕಮರ್ಷಿಯಲ್ ಸೂಪರ್​ವೈಸರ್ 05 ಹುದ್ದೆಗಳಿದ್ದು ಯಾವುದೇ ಪದವಿಯನ್ನು ಪಡೆದಿರಬೇಕು.

ಒಟ್ಟು 190 ಹುದ್ದೆಗಳಿದ್ದು ಇವುಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 18 ರಿಂದ 36 ವರ್ಷದೊಳಗಿನವರು ಆಗಿರಬೇಕು. ಪರೀಕ್ಷೆಯು ಕಂಪ್ಯೂಟರ್ ಬೇಸ್ ಟೆಸ್ಟ್​ ಇರುತ್ತದೆ. ಪರೀಕ್ಷೆಯಲ್ಲಿ ಪಾಸ್ ಆದವರಿಗೆ ಸಂದರ್ಶನ ಮಾಡಿ ಬಳಿಕ ನೇಮಕ ಮಾಡಿಕೊಳ್ಳಲಾಗುತ್ತದೆ. ಈ ಅರ್ಜಿಗೆ ಯಾರು ಅಪ್ಲೇ ಮಾಡ್ತೋರೋ ಅವರು 885 ರೂಪಾಯಿಗಳನ್ನು ಪಾವತಿ ಮಾಡಬೇಕಾಗುತ್ತದೆ. ಇದು ಆನ್​ಲೈನ್ ಮೂಲಕವೇ ಇಲಾಖೆಗೆ ಪೇ ಮಾಡಬೇಕು. ಇನ್ನು ಈ ಹುದ್ದೆಗಳಿಗೆ ತಿಂಗಳಿಗೆ ಸಂಬಳ 18,000 ರೂ.ಗಳಿಂದ 44,900 ರೂ.ಗಳ ವರೆಗೆ ಇರುತ್ತದೆ. ​

ಅಭ್ಯರ್ಥಿಗಳು ಅರ್ಜಿಗಳನ್ನು ಅಪ್ಲೇ ಮಾಡಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ- https://konkanrailway.com/pages/viewpage/current_notifications

Advertisment

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 16 ಸೆಪ್ಟೆಂಬರ್ 2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 6 ಅಕ್ಟೋಬರ್ 2024

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment