/newsfirstlive-kannada/media/post_attachments/wp-content/uploads/2025/01/GAVI-8.jpg)
ಕೊಪ್ಪಳದಲ್ಲಿ ಈಗ ಜಾತ್ರೆಯ ಸಂಭ್ರಮ.. ಅಜ್ಜಯ್ಯನ ಜಾತ್ರಾ ಮಹೋತ್ಸವದ ಕಲರವ ಮೇಳೈಸಿದೆ. ದಕ್ಷಿಣ ಭಾರತದ ಕುಂಭ ಅಂತಾನೇ ಪ್ರಖ್ಯಾತಿ ಪಡೆದುಕೊಂಡಿರುವ ಗವಿಸಿದ್ದೇಶ್ವರರ ಜಾತ್ರೆ ಇಂದಿನಿಂದ ಆರಂಭವಾಗಿದೆ. ಇಲ್ಲಿನ ಗವಿಮಠದ ಜಾತ್ರೆ ಕೇವಲ ಧಾರ್ಮಿಕ ಕಾರ್ಯಕ್ರಮವಲ್ಲ, ಸಾಮಾಜಿಕ ಜಾಗೃತಿಯ ಮಹತ್ವದ ವೇದಿಕೆ ಕೂಡ ಹೌದು.
ಪ್ರತಿವರ್ಷವು ಜಾತ್ರೆಯಲ್ಲಿ ಸಮಾಜಿಕ ಅರಿವು ಮೂಡಿಸಿ ಜನರನ್ನು ಜಾಗೃತಗೊಳಿಸುವ ವಿಶಿಷ್ಟ ಕಾರ್ಯಕ್ರಮ ಕೂಡ ನಡೆಯುತ್ತಿದೆ. ಈ ವರ್ಷ ‘ಸಕಲಚೇತನ’ ಶಿರ್ಷಿಕೆಯಡಿ ಜಾಗೃತಿ ನಡೆದಿದೆ. ‘ವಿಕಲಚೇತನರ ನಡೆ ಸಕಲಚೇತನದ ಕಡೆ’ ಎಂಬ ಘೋಷವಾಕ್ಯದೊಂದಿಗೆ ಜಾತ್ರೆ ನಡೆಯುತ್ತಿದೆ.
ಏನಿದು ಸಕಲಚೇತನ?
ಅಂದರೆ ಕೃತಕ ಅಂಗಾಗ ಜೋಡಣೆಯ ಸಂಕಲ್ಪದ ಅಭಿಯಾನ. ಪೋಲಿಯೋ, ರಸ್ತೆ ಅಪಘಾತ, ಆಕಸ್ಮಿಕ ಘಟನೆಗಳಲ್ಲಿ ಅನೇಕರು ಕೈ, ಕಾಲು ಕಳೆದುಕೊಂಡು ಅಂಗವೈಕಲ್ಯದಿಂದ ಬಳಲುತ್ತಾರೆ. ಅನೇಕರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕೃತಕ ಅಂಗಾಗ ಜೋಡಿಸಿಕೊಳ್ಳಲು ಕಷ್ಟ ಪಡುತ್ತಾರೆ. ಇಂತವರಿಗೆ ಆಸರೆಯಾಗಲು ಈ ಅಭಿಯಾನ ಮಾಡಲಾಗುತ್ತಿದೆ. ಮಠದವತಿಯಿಂದ ಕೃತಕ ಕೈ-ಕಾಲು ಅವಶ್ಯಕತೆ ಇರೋರಿಗೆ ಈ ಸೌಲಭ್ಯ ನೀಡಲಾಗುತ್ತಿದೆ.
ಇದನ್ನೂ ಓದಿ:ಕೊಪ್ಪಳದಲ್ಲಿ ಗವಿಸಿದ್ದೇಶ್ವರ ಅಜ್ಜನ ಜಾತ್ರಾ ಮಹೋತ್ಸವ.. ಸಂಭ್ರಮ ಕ್ಷಣದ ಫೋಟೋಗಳು..!
2016ರಿಂದ ನೆಡೆದ ಜಾಗೃತಿ ಕಾರ್ಯಗಳ ವಿಷಯಗಳು
- 2016 ರಲ್ಲಿ ಬಾಲ್ಯವಿವಾಹ
- 2017 ಜಲದೀಕ್ಷೆ
- 2018 ರಲ್ಲಿ ಸಶಕ್ತ ಮನ - ಸಂತ್ರಪ್ತ ಜೀವನ
- 2019 ರಲ್ಲಿ ಕೃಪಾದೃಷ್ಠಿ - ನೇತ್ರದಾನ ಜಾಗೃತಿ
- 2020 ರಲ್ಲಿ ಲಕ್ಷ ವೃಕ್ಸೋತ್ಸವ
- 2021 ರಲ್ಲಿ ಸರಳ ಜಾತ್ರೆ - ಸಮಾಜಮುಖಿ ಜಾತ್ರೆ
- 2022 ರಲ್ಲಿ ಅಡವಿಹಳ್ಳಿ ಗ್ರಾಮ ದತ್ತು, ಕ್ಯಾನ್ಸರ್ ರೋಗ ತಪಾಸಣೆ, ಗಿಣಗೇರಿ ಕೆರೆ ಊಳೆತ್ತುವುದು
- 2023ರಲ್ಲಿ ಅಂಗಾಂಗ ದಾನ ಜಾಗೃತಿ
- 2024 ರಲ್ಲಿ ಕಾಯಕದೇವೋಭವ
- 2025 ರಲ್ಲಿ ಸಕಲಚೇತನ
ಇದನ್ನೂ ಓದಿ:ಕೊಪ್ಪಳ ಗವಿಮಠ ಜಾತ್ರೆ; ನಾಳೆ ಮಹಾರಥೋತ್ಸವ; ಈ ಬಾರಿಯ ವಿಶೇಷತೆಗಳು ಏನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ