ಗವಿಸಿದ್ದೇಶ್ವರ ಜಾತ್ರೆ.. ಈ ವರ್ಷ ಎಷ್ಟು ಲಕ್ಷ ಭಕ್ತರು ಭಾಗಿ; ಪೊಲೀಸರು ಹೇಳಿದ್ದೇನು?

author-image
Bheemappa
Updated On
ಗವಿಸಿದ್ದೇಶ್ವರ ಜಾತ್ರೆ.. ಈ ವರ್ಷ ಎಷ್ಟು ಲಕ್ಷ ಭಕ್ತರು ಭಾಗಿ; ಪೊಲೀಸರು ಹೇಳಿದ್ದೇನು?
Advertisment
  • ಪೊಲೀಸ್ ಭದ್ರತೆ ಬಗ್ಗೆ ಎಸ್​​ಪಿ ಡಾ.ರಾಮ್ ಹೇಳಿದ್ದು ಏನು?
  • ಜಾತ್ರೆಯಲ್ಲಿ ಟ್ರಾಫಿಕ್ ನಿರ್ವಹಣೆ ಮಾಡುತ್ತಿರುವ ಪೊಲೀಸರು
  • ಜಾತ್ರಾ ಮಹೋತ್ಸವದಲ್ಲಿ ಎಷ್ಟು ಲಕ್ಷ ಭಕ್ತರು ಭಾಗವಹಿದ್ದಾರೆ?

ಕೊಪ್ಪಳದ ಆರಾಧ್ಯ ದೈವ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ರಥವನ್ನು ಅದ್ಧೂರಿಯಾಗಿ ಎಳೆಯಲಾಯಿತು. ಭಕ್ತ ಸಾಗರದ ನಡುವೆ ಅಜ್ಜನ ರಥ ಶಾಂತವಾಗಿ ಸಾಗಿತು. ಲಕ್ಷಾಂತರ ಜನರು ಸಾಗುತ್ತಿರುವ ರಥವನ್ನು ಕಣ್ತುಂಬಿಕೊಂಡು ಪುನೀತರಾದರು.

publive-image

ಗವಿಮಠದ ಅಂಗಳದಲ್ಲಿ ಭಕ್ತ ಸಾಗರದ ಮಧ್ಯೆ ವೈಭವದಿಂದ ರಥೋತ್ಸವ ನೆರವೇರಿತು. ನೆರೆದಿದ್ದ ಲಕ್ಷಾಂತರ ಭಕ್ತರು ರಥಕ್ಕೆ ಉತ್ತತ್ತಿ, ಹೂ, ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು. ಇದರ ಜೊತೆಗೆ ಜೈ ಗವಿಸಿದ್ದೇಶ ಎಂಬ ನಾಮಸ್ಮರಣೆ ಮುಗಿಲು ಮುಟ್ಟಿತ್ತು. ಮಹಾರಥೋತ್ಸವ ಹಿನ್ನೆಲೆಯಲ್ಲಿ ಬೆಳಗಿನ ಜಾವವೇ ಗವಿಮಠದ ಗುಹೆಯಲ್ಲಿ ಇರುವ 11ನೇ ಪೀಠಾಧಿಪತಿ ಲಿಂಗೈಕ್ಯ ಗವಿಸಿದ್ಧೇಶ್ವರ ಸ್ವಾಮೀಜಿಯ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಲಾಗಿತ್ತು. ಸುತ್ತಮುತ್ತಲ ಗ್ರಾಮದ ಭಕ್ತರು ಪಾದಯಾತ್ರೆ ಮೂಲಕ ಬಂದು ಮಹಾರಥೋತ್ಸವದಲ್ಲಿ ಭಾಗಿಯಾದರು.

ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ಅಂದಾಜು 8 ಲಕ್ಷ ಭಕ್ತರು ಆಗಮಿಸಿದ್ದಾರೆ. ಈ ಸಂಬಂಧ ಪೊಲೀಸ್ ಅಧಿಕಾರಿಗಳು ಬಿಗಿ ಪೊಲೀಸ್ ಬಂದೋಬಸ್ತ್​ ಅನ್ನು ಕೈಗೊಳ್ಳಲಾಗಿತ್ತು. ಎಲ್ಲಿಯು ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಸಿಬ್ಬಂದಿ ಎಚ್ಚರಿಕೆ ವಹಿಸಿದ್ದಾರೆ. ಸತತ 15 ದಿನಗಳ ಕಾಲ ನಡೆಯುವ ಈ ಜಾತ್ರೆಯಲ್ಲಿ ಪೊಲೀಸರ ನಿರಂತರ ಕಾರ್ಯವನ್ನು ಮೆಚ್ಚಲೇಬೇಕಾಗಿದೆ. ಸದ್ಯ ಈ ಸಂಬಂಧ ಕೊಪ್ಪಳದ ಎಸ್​​ಪಿ ಡಾ.ರಾಮ್ ಎಲ್ ಅರಸಿದ್ಧಿ ಅವರು ಮಾತನಾಡಿದ್ದಾರೆ.

ಅಜ್ಜನ ಜಾತ್ರಾ ಮಹೋತ್ಸವದ ಭದ್ರತೆ ಕುರಿತು ಮಾತನಾಡಿದ ಎಸ್​​ಪಿ ಡಾ.ರಾಮ್ ಎಲ್ ಅರಸಿದ್ಧಿ ಅವರು, ದಕ್ಷಿಣ ಭಾರತದ ಕುಂಭ ಎಂದೇ ಪ್ರಸಿದ್ಧವಾದ ಗವಿಸಿದ್ದೇಶ್ವರ ಜಾತ್ರೆಗೆ ಸುಮಾರು 8 ಲಕ್ಷಕ್ಕೂ ಅಧಿಕ ಜನರು ಆಗಮಿಸಿದ್ದಾರೆ. ಭದ್ರತೆ ಸಂಬಂಧ ಎಲ್ಲ ಸಕಲ ಸಿದ್ಧತೆ ಮಾಡಿಕೊಂಡಿದ್ದೇವೆ. ಐಜಿ, ಎಸ್​ಪಿ, ಇಬ್ಬರು ಅಡಿಷನಲ್ ಎಸ್​ಪಿ, 20 ಡಿಎಸ್​ಪಿಜಿ ಅಧಿಕಾರಿಗಳು, 30 ಇನ್​ಸ್ಪೆಕ್ಟರ್ಸ್​, 60 ಪಿಎಸ್​, 1500 ಪೊಲೀಸ್ ಕಾನ್​ಸ್ಟೆಬಲ್ಸ್, ಹೋಂ ಗಾರ್ಡ್ಸ್​, 5 ಕೆಎಸ್​ಆರ್​ಪಿ, 10 ಡಿಆರ್​ ಸೇರಿ ಭದ್ರತೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ; ದಾಸೋಹದಲ್ಲಿ ಲಕ್ಷಾನುಗಟ್ಟಲೇ ಘಮ ಘಮಿಸುವ ಜಿಲೇಬಿಗಳು

publive-image

ವಾಚ್​ ಟವರ್​ಗಳು ಇದ್ದು ನಮ್ಮ ಕಾರ್ಯ ದಕ್ಷತೆಯನ್ನು ನೋಡುತ್ತಿರುತ್ತಾರೆ. ಕ್ರೈಂ ಸಿಬ್ಬಂದಿ ಕೂಡ ಇದ್ದಾರೆ. ಇನ್​​ಸ್ಪೆಕ್ಟರ್, ಪಿಎಸ್​ಐ ನೇತೃತ್ವದಲ್ಲಿ ಕ್ರೈಂ ಕೆಲಸ ಮಾಡುತ್ತಿದೆ. ಟ್ರಾಫಿಕ್​ಗೆ ಸಂಬಂಧಿಸಿದಂತೆ ಬೆಳಗ್ಗೆ 7 ಗಂಟೆಯಿಂದಲೇ ಎಲ್ಲ ಟ್ರಾಫಿಕ್ ಕೆಲಸ ಆರಂಭವಾಗುತ್ತದೆ. ಜಾತ್ರೆಯಲ್ಲಿ 5 ಕಡೆ ಪಾರ್ಕಿಂಗ್​ಗೆ ಸ್ಥಳವಿದೆ. ಭಕ್ತರಿಗೂ ವಿಶೇಷ ಮನವಿ ಮಾಡಿ ಕಾಲ್ನಿಡಿಗೆ ಮೂಲಕ ಬಂದರೆ ವಾಹನ ದಟ್ಟಣೆ ಇರಲ್ಲ. ಹೊರಗಿನವರಿಗೆ ಅನುಕೂಲ ಆಗುತ್ತದೆ ಎಂದು ಹೇಳಿದ್ದೇವು. ಮಕ್ಕಳು, ವಸ್ತುಗಳು ಕಳೆದು ಹೋದರೆ ನಮಗೆ ತಿಳಿಸಿದರೆ ಅನೌನ್ಸ್ ಮಾಡಿ ಮಕ್ಕಳ ಪೋಷಕರನ್ನು ಹಾಗೂ ವಸ್ತುಗಳಿಗೆ ಸಂಬಂಧಿಸಿದವರನ್ನು ಪತ್ತೆ ಹಚ್ಚಲಾಗುತ್ತದೆ ಎಂದು ಎಸ್​​ಪಿ ಡಾ.ರಾಮ್ ಎಲ್ ಅರಸಿದ್ಧಿ ಅವರು ಹೇಳಿದ್ದಾರೆ.

​ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment