ಗವಿಸಿದ್ದೇಶ್ವರ ಜಾತ್ರೆಯ ಸ್ಪೆಷಲ್‌ ಮಿರ್ಚಿ ಬಜ್ಜಿ.. ಇದರ ವಿಶೇಷತೆ ಏನು ಗೊತ್ತಾ? ಇಂಟ್ರೆಸ್ಟಿಂಗ್ ಮಾಹಿತಿ!

author-image
Bheemappa
Updated On
ಗವಿಸಿದ್ದೇಶ್ವರ ಜಾತ್ರೆಯ ಸ್ಪೆಷಲ್‌ ಮಿರ್ಚಿ ಬಜ್ಜಿ.. ಇದರ ವಿಶೇಷತೆ ಏನು ಗೊತ್ತಾ? ಇಂಟ್ರೆಸ್ಟಿಂಗ್ ಮಾಹಿತಿ!
Advertisment
  • ಅಜ್ಜನ ಜಾತ್ರೆಯಲ್ಲಿ ಎಷ್ಟು ಲಕ್ಷ ಮಿರ್ಚಿ ಬಜ್ಜಿ ತಯಾರಿಸಲಾಗುತ್ತಿದೆ?
  • ದಾಸೋಹದಲ್ಲಿ ಮಿರ್ಚಿ ಬಜ್ಜಿಗಳನ್ನು ಸವಿಯಲಿರುವ ಭಕ್ತ ವೃಂದ
  • ಲಕ್ಷ ಲಕ್ಷ ಬಜ್ಜಿಗಳಿಗೆ ಎಷ್ಟು ಕ್ವಿಂಟಲ್ ಕಡಲೆ ಹಿಟ್ಟು ಬಳಸಲಾಗಿದೆ?

ಕೊಪ್ಪಳದ ಗವಿಮಠದ ಜಾತ್ರಾಮಹೋತ್ಸವ ಎಂದರೆ ಮಹಾ ದಾಸೋಹಕ್ಕೆ ಹೆಸರುವಾಸಿ. ಅನ್ನ ಸಂಬಾರು, ಶೇಂಗಾ, ಎಳ್ಳು, ಹೂರಣ ಹೋಳಿಗೆ, ಜಿಲೇಬಿ, ಸಜ್ಜೆ, ಜೋಳದ ರೊಟ್ಟಿ, ವಿಧ ವಿಧವಾದ ಉಪ್ಪಿನ ಕಾಯಿ ಸೇರಿದಂತೆ ಇನ್ನು ಹಲವು ವಿಧದ ಖಾದ್ಯಗಳನ್ನು ದಾಸೋಹದಲ್ಲಿ ಬಡಿಸಲಾಗುತ್ತದೆ. ಮೊದಲಿನಿಂದಲೂ ಜಾತ್ರೆಯಲ್ಲಿ ಲೆಕ್ಕವಿಲ್ಲದಷ್ಟು ಅಡುಗೆ ಮಾಡಿ ಭಕ್ತರಿಗೆ ನೀಡುತ್ತ ಬರಲಾಗುತ್ತಿದೆ. ಈ ವರ್ಷವೂ ಹಲವು ಖಾದ್ಯಗಳ ಜೊತೆ ಸುಮಾರು 5 ಲಕ್ಷಕ್ಕೂ ಹೆಚ್ಚು ಮಿರ್ಚಿ ಬಜ್ಜಿಗಳನ್ನು ಮಾಡಿ ಭಕ್ತ ವೃಂದಕ್ಕೆ ಬಡಿಸಲಾಗುತ್ತದೆ.

publive-image

ಕೊಪ್ಪಳದ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ರಥೋತ್ಸವ ಅದ್ಧೂರಿಯಾಗಿ ನರವೇರಿದೆ. ಸಹಸ್ರಾರು ಭಕ್ತ ಸಾಗರದ ನಡುವೆ ಅಜ್ಜನ ರಥ ಸಂಭ್ರಮ ಸಡಗರದಿಂದ ಎಳೆಯಲಾಯಿತು. ರಥದ ಸುತ್ತಲೂ ಲಕ್ಷಾಂತರ ಜನರು ಸೇರಿದ್ದರು. ರಥವನ್ನು ಎಳೆಯುವಾಗ ಮುಂದೆ ಹೋಗುವಂತೆ ಸ್ಥಳಾವಕಾಶ ಮಾಡಿಕೊಡಲಾಗಿತ್ತು. ನೋಡಿದಷ್ಟು ದೂರ ಭಕ್ತರ ವೃಂದ ಬಿಟ್ಟರೇ ಬೇರೆ ಏನು ಕಾಣುತ್ತಿರಲಿಲ್ಲ. ಅಷ್ಟೊಂದು ಜನರು ಅಜ್ಜನ ಜಾತ್ರೆಯಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ: ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ; ದಾಸೋಹದಲ್ಲಿ ಲಕ್ಷಾನುಗಟ್ಟಲೇ ಘಮ ಘಮಿಸುವ ಜಿಲೇಬಿಗಳು

ಈ ಮಹಾನ್ ರಥೋತ್ಸವ ಮುಗಿದ ಮರುದಿನ ಅಂದರೆ ಇಂದು ಜಾತ್ರೆಗೆ ಬಂದಿರುವ ಲಕ್ಷೋಪ ಲಕ್ಷ ಭಕ್ತರಿಗೆ ಪ್ರಸಾದವನ್ನು ಬಡಿಸಲಾಗುತ್ತದೆ. ಇದರಲ್ಲಿ ಮಿರ್ಚಿ ಬಜ್ಜಿ ಕೂಡ ಒಂದಾಗಿದೆ. ಈ ಬಾರಿಯ ದಾಸೋಹದಲ್ಲಿ 5 ಲಕ್ಷಕ್ಕೂ ಅಧಿಕ ಮಿರ್ಚಿ ಬಜ್ಜಿಗಳನ್ನು ತಯಾರು ಮಾಡಲಾಗುತ್ತಿದೆ. ಉತ್ತರ ಕರ್ನಾಟಕದ ಯಾವ ಊರಿಗೆ ಹೋದರೂ ಅಲ್ಲಿ ಮಿರ್ಚಿಬಜ್ಜಿ, ಮಂಡಕ್ಕಿ ದೊರೆಯುತ್ತದೆ. ಅದರಂತೆ ಅಜ್ಜಯ್ಯನ ಜಾತ್ರೆಯಲ್ಲಿ ಭಕ್ತ ಗಣಕ್ಕಾಗಿ ಲಕ್ಷಾನುಗಟ್ಟಲೇ ಬಜ್ಜಿಗಳನ್ನು ಮಾಡಲಾಗತ್ತಿದೆ.

publive-image

5 ಲಕ್ಷಕ್ಕೂ ಹೆಚ್ಚಿನ ಮಿರ್ಚಿ ಬಜ್ಜಿ ತಯಾರು ಮಾಡಲು ಪ್ರತ್ಯೇಕವಾಗಿ ಸುಮಾರು 300 ಬಾಣಸಿಗರು ಹಗಲಿರುಳು ಎನ್ನದೇ ಶ್ರಮಿಸಿದ್ದಾರೆ. ಪ್ರತಿವರ್ಷದಂತೆ ಈ ವರ್ಷವು ರಥೋತ್ಸವದ ಮರುದಿನ ದಾಸೋಹದಲ್ಲಿ ಮಿರ್ಚಿ ಬಜ್ಜಿಗಳನ್ನು ಬಡಿಸಲಾಗುತ್ತದೆ. ಈ ಬಜ್ಜಿಗಳನ್ನು ತಯಾರು ಮಾಡುವುದಕ್ಕೆ 25 ಕ್ವಿಂಟಲ್ ಕಡಲೆ ಹಿಟ್ಟು, 20 ಕ್ವಿಂಟಲ್ ಹಸಿ ಮೆಣಸಿನಕಾಯಿ, 10 ಬ್ಯಾರಲ್ ಅಡುಗೆ ಎಣ್ಣೆ ಉಪಯೋಗಿಸಲಾಗಿದೆ. ಇನ್ನು ಬಜ್ಜಿ ತಿಂದರೆ ಹೊಟ್ಟೆ ನೋವು ಬಾರದಂತೆ 25 ಕೆ.ಜಿ ಅಜಿವಾನ, 20 ಕೆ.ಜಿ ಸೋಡಾಪುಡಿ ಬಳಕೆ ಮಾಡಲಾಗಿದೆ.

publive-image

ಅಜ್ಜನ ಜಾತ್ರೆಯ ಮಹಾದಾಸೋಹಕ್ಕೆ ಕೊಪ್ಪಳ ಸೇರಿದಂತೆ ಬೇರೆ ಜಿಲ್ಲೆಗಳ ಗ್ರಾಮಗಳಿಂದಲೂ ಸಜ್ಜೆ ರೊಟ್ಟಿ, ಜೋಳದ ರೊಟ್ಟಿ, ಉಪ್ಪಿನಕಾಯಿ, ಧಾನ್ಯ, ಚಟ್ನಿ, ಎಳ್ಳು, ಶೇಂಗಾ, ಹೂರಣ ಹೋಳಿಗೆ ಸೇರಿದಂತೆ ವಿವಿಧ ಅಡುಗೆಗಳನ್ನು ಮಾಡಿ ಜಾತ್ರೆಗೆ ತರುತ್ತಾರೆ. ಜಾತ್ರೆಗೆ ಎಷ್ಟು ಭಕ್ತರು ಬರುತ್ತಾರೋ ಅಷ್ಟು ಜನ ಊಟ ತಿಂದರೂ ಇನ್ನಷ್ಟು ಮಿಕ್ಕುವಷ್ಟು ಅಡುಗೆ ಇರುತ್ತದೆ. ಇದಕ್ಕಾಗಿಯೇ ದಕ್ಷಿಣ ಭಾರತದ ಕುಂಭಮೇಳ ಎಂದು ಕೊಪ್ಪಳದ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಖ್ಯಾತಿ ಪಡೆದಿದೆ.

​ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment