/newsfirstlive-kannada/media/post_attachments/wp-content/uploads/2024/08/kampli.jpg)
ಬಳ್ಳಾರಿ: ಹೊಸಪೇಟೆ ನಗರದ ತುಂಗಾಭದ್ರಾ ಡ್ಯಾಂ ಸಂಪೂರ್ಣ ಭರ್ತಿಯಾಗಿದೆ. ಇದರಿಂದಾಗಿ ತುಂಗಭದ್ರಾ ಜಲಾಶಯದ 19ನೇ ಚೈನ್​ಲಿಂಕ್​ ಗೇಟ್​ ಮುರಿದಿದೆ. ಪರಿಣಾಮ ಒಂದು ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ ನೀರು ನದಿಗೆ ಹರಿಯಬಿಡಲಾಗುತ್ತಿದೆ. ಸದ್ಯ ನದಿ ಪಾತ್ರದಲ್ಲಿ ಜನರಲ್ಲಿ ಆತಂಕ ಶುರುವಾಗಿದೆ.
ಇದನ್ನೂ ಓದಿ: ಅಪಾಯದಲ್ಲಿ ತುಂಗಭದ್ರಾ ಡ್ಯಾಂ​.. ಜಲಾಶಯದ ಬಳಿ ಓಡೋಡಿ ಬಂದ ಶಾಸಕ ಗವಿಯಪ್ಪ, ರಾಘವೇಂದ್ರ ಹಿಟ್ನಾಳ್
/newsfirstlive-kannada/media/post_attachments/wp-content/uploads/2024/08/Tungabadra-dam-5.jpg)
ಗೇಟ್​​ ಕಟ್​ ಆಗಿ ಕಂಪ್ಲಿ ಸೇತುವೆ ಮತ್ತೆ ಮುಳುಗುವ ಭೀತಿಯಲ್ಲಿದೆ. ಡ್ಯಾಂನಿಂದ ಒಂದು ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಬಿಟ್ಟಿದ್ದಕ್ಕೆ ಕಂಪ್ಲಿ ಸೇತುವೆ ಕಂಪ್ಲೀಟ್ ಮುಳುಗಡೆ ಆಗೋ ಭೀತಿ ಎದುರಾಗಿದೆ. ಸದ್ಯ 90 ಸಾವಿರ ಕ್ಯೂಸೆಕ್ ನೀರು ಬಿಡಲಾಗಿದ್ದು, ಸೇತುವೆ ಮುಳುಗಲು ಎರಡರಿಂದ ಮೂರು ಅಡಿ ಮಾತ್ರ ಬಾಕಿ ಉಳಿದಿದೆ.
/newsfirstlive-kannada/media/post_attachments/wp-content/uploads/2024/08/kampli1.jpg)
ಮುಂಜಾಗ್ರತಾ ಕ್ರಮವಾಗಿವಾಗಿ ಪೊಲೀಸರು ಕಂಪ್ಲಿ ಸೇತುವೆ ಸಂಚಾರ ಬಂದ್ ಮಾಡಿದ್ದಾರೆ. ನದಿಗೆ ಯಾರು ಇಳಿಯದಂತೆ ಜಿಲ್ಲಾಡಳಿತ ಹಾಗೂ ಟಿಬಿ ಬೋರ್ಡ್ ಸೂಚನೆ ನೀಡಿದೆ. ಯಾವುದೇ ಸಮಯದಲ್ಲಿ ನೀರು ಹೆಚ್ಚು ಬಿಡುವ ಸಾಧ್ಯತೆ ಇದೆ. ಕಳೆದ ವಾರವಷ್ಟೇ ಕಂಪ್ಲಿ ಸೇತುವೆ ಮುಳುಗಿತ್ತು. ಹೀಗಾಗಿ ಕಂಪ್ಲಿ ಸೇತುವೆ ಕಂಪ್ಲೀಟ್ ಮುಳುಗಡೆ ಆಗುತ್ತೆ ಎಂದು ಜನರಲ್ಲಿ ಕ್ಷಣ ಕ್ಷಣಕ್ಕೂ ಆತಂಕ ಹೆಚ್ಚಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us