/newsfirstlive-kannada/media/post_attachments/wp-content/uploads/2025/02/KPL_WATER.jpg)
ಕೊಪ್ಪಳ: ಉಪ ಕಾಲುವೆಗಳಿಗೆ ನೀರು ಹರಿಸುವಲ್ಲಿ ಅಧಿಕಾರಿಗಳು ತಾರತಮ್ಯ ಮಾಡುತ್ತಿದ್ದರಿಂದ ತುಂಗಭದ್ರಾ ಎಡದಂಡೆ ಕಾಲುವೆ ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಕಾರಟಗಿ ತಾಲೂಕಿನ ತುಂಗಭದ್ರಾ ಎಡದಂಡೆ ಕಾಲುವೆಯ 28ನೇ ಉಪ ಕಾಲುವೆ ಬಳಿ ರೈತರು ಜಮಾವಣೆ ಆಗಿದ್ದಾರೆ. ಕಾಲುವೆಗಳಿಗೆ ನೀರು ಹರಿಸುವಲ್ಲಿ ಅಧಿಕಾರಿಗಳು ತಾರತಮ್ಯ ಮಾಡುತ್ತಿರುವ ಹಿನ್ನೆಲೆಯಲ್ಲಿ ರೈತರು ಆಗಮಿಸಿದ್ದಾರೆ. ಶ್ರೀಮಂತ ರೈತರೊಂದಿಗೆ ಶಾಮೀಲು ಆಗಿ ಸಣ್ಣ ರೈತರ ಭತ್ತದ ಗದ್ದೆಗಳಿಗೆ ನೀರು ಹರಿಸಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ.
ಇದನ್ನೂ ಓದಿ:ಇದು ಬಡ ಆಟೋ ಚಾಲಕರ ಕನಸು.. ನನಸು ಮಾಡಲು ಸಿದ್ದರಾಮಯ್ಯ ದೊಡ್ಡ ಮನಸು ಮಾಡಬೇಕಿದೆ..!
ಇದರಿಂದ ರೈತರು ಸಮಸ್ಯೆಗೆ ಒಳಗಾಗಿದ್ದು ನೀರಾವರಿ ಇಲಾಖೆಯ ಎಇಇ ಅಧಿಕಾರಿ ವೆಂಕಟೇಶ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವಂತೆ ರೈತರು ಪಟ್ಟು ಹಿಡಿದಿದ್ದಾರೆ. ನೀರು ಹರಿಸುವ ರೈತರಿಗೆ ಮೋಸ ಮಾಡಲಾಗ್ತಿದೆ. 28ನೇ ಉಪ ಕಾಲುವೆಗೆ 20 ಗೇಜ್ವೆರೆಗೆ ನೀರು ಬಿಡುವಂತೆ ರೈತರ ಆಗ್ರಹಿಸಿದ್ದಾರೆ.
ಆದರೆ ರಾತ್ರಿ ವೇಳೆ ಬಿಡುವ ನೀರಿನಲ್ಲಿ ವ್ಯತ್ಯಾಸ ಆಗುತ್ತಿದೆ. ಕಡಿಮೆ ಗೇಜ್ ನೀರನ್ನು ಅಧಿಕಾರಿಗಳು ಹರಿಸುತ್ತಿದ್ದಾರೆ ಎನ್ನುವ ಆರೋಪವಿದೆ. ಹಣ ಉಳ್ಳವರೊಂದಿಗೆ ಶಾಮೀಲಾಗಿ ಸಣ್ಣ ರೈತರಿಗೆ ಅಧಿಕಾರಿಗಳು ವಂಚನೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ. 18 ಗೇಜ್ ನೀರು ಬಿಟ್ಟರೂ ಕೊನೆ ಭಾಗದ ರೈತರಿಗೆ ನೀರು ಸಿಗುತ್ತಿಲ್ಲ. ಇದಕ್ಕೆ ಕಾರಣ ನೀರು ಬಿಡುವಲ್ಲಿ ಮೋಸವಾಗುತ್ತಿದೆ. ನೀರು ಕೊಟ್ಟು ಭತ್ತ ಉಳಿಸಿ ಎಂದು ರೈತರು ಹೇಳುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ