ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ಮಹತ್ತರ ಕಾರ್ಯ.. ಕೈ, ಕಾಲು ಇಲ್ಲದವರಿಗೆ ಕೃತಕ ಜೋಡಣೆ

author-image
Bheemappa
Updated On
ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ಮಹತ್ತರ ಕಾರ್ಯ.. ಕೈ, ಕಾಲು ಇಲ್ಲದವರಿಗೆ ಕೃತಕ ಜೋಡಣೆ
Advertisment
  • ಮುಂದಿನ ವರ್ಷ ಯಾವ ವಿಷಯದ ಕುರಿತು ಜಾಥಾ ನಡೆಯುತ್ತದೆ?
  • ಎಷ್ಟು ಜನ ನೋಂದಾಯಿಸಿಕೊಳ್ಳುತ್ತಾರೋ ಅವರಿಗೆಲ್ಲಾ ಜೋಡಣೆ
  • ಗವಿಮಠದ ಶ್ರೀಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದ್ದು ಏನು?

ಕೊಪ್ಪಳದ ನಡೆದಾಡುವ ದೇವರು ಹಾಗೂ 2ನೇ ಸಿದ್ದಗಂಗಾ ಮಠದ ಖ್ಯಾತಿಯ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಗವಿಮಠ, ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆಗಳು ಮತ್ತು ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಮಾಜಿಕ ಕಳಕಳಿ ಜಾಥಾ ನಡೆಯಿತು. ಕಾರ್ಯಕ್ರಮದಲ್ಲಿ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಗಳು ಆಶೀರ್ವಚನ ನೀಡಿದರು.

publive-image

ವಿಕಲ ಚೇತನರ ನಡೆ ಸಕಲ ಚೇತನದ ಕಡೆ ಎಂಬ ಕೃತಕ ಅಂಗಾಂಗ ಜೋಡಣೆ ಬೃಹತ್ ಜಾಗೃತಿ ಜಾಥಾ ನಡಿಗೆ ನಡೆಯಿತು, ಕಾರ್ಯಕ್ರಮದಲ್ಲಿ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಗಳು ಮಾತನಾಡಿ, ಕಣ್ಣು, ಕಿವಿ, ಕಾಲು ಹಾಗೂ ಕೈ ಇಲ್ಲದ ವಿಶೇಷ ಚೇತನರನ್ನು ಸಮಾಜವು ನೋಡುವ ದುಷ್ಠಿಕೋನ ಬದಲಾಗಬೇಕು ಎಂದು ಹೇಳಿದರು.

ಕೊಪ್ಪಳದ ತಾಲೂಕ ಕ್ರೀಡಾಂಗಣದಿಂದ ನಗರದ ಶ್ರೀ ಗವಿಮಠ ಆವರಣದವರೆಗೂ ಈ ಜಾಥಾ ಸಾಗಿ ಯಶಸ್ವಿಗೊಳಿಸಲಾಯಿತು. ಜಾಥಾದಲ್ಲಿ ನಗರದ ಖಾಸಗಿ ಹಾಗೂ ಸರ್ಕಾರಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಜಾಥಾ ನಂತರ ಮಠದ ಮಹಾದಾಸೋಹ ಮಂಟಪದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಗವಿಮಠದ ಶ್ರೀಗಳು ಆಶೀರ್ವಚನ ನೀಡಿದರು. ಯಾವುದೋ ಒಂದು ಅಪಘಾತ, ಪೂರ್ವಜನ್ಮದ ಕೃತವೂ ಕೆಲವರಿಗೆ ಕೈ, ಕಾಲು, ಕಣ್ಣು, ಕಿವಿ ಹೀಗೆ ನ್ಯೂನತೆ ಆಗಿರುತ್ತದೆ. ಅಂತಹವರಿಗೆ ಆತ್ಮಸ್ಥೈರ್ಯ, ಜೊತೆಗೆ ಪ್ರೀತಿ, ಸಹನಾಭೂತಿಯೂ ಅತ್ಯವಶ್ಯಕವಾಗಿದೆ ಎಂದು ಹೇಳಿದರು.

ಕಾಲು ಮುರಿಯುವವರ ಮಧ್ಯೆ ಕಾಲು, ಕೈ ಜೋಡಿಸುವ ಕಾರ್ಯ

ಪ್ರತಿ ವರ್ಷ ನಡೆಯುವ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವವು ಕೇವಲ ರಥೋತ್ಸವವಾಗಿ ನಡೆಯದೆ ಸಾಮಾಜಿಕ ಸಂದೇಶ ಸಾರುತ್ತದೆ. ಇಂತಹ ಸಾಮಾಜಿಕ ಸಂದೇಶಗಳು ಕೇವಲ ಜಾಗೃತಿ ಅಭಿಯಾನಕ್ಕೆ ಮಾತ್ರ ಸೀಮಿತವಾಗಬಾರದು. ಹಾಗಾಗಿ ಈ ವರ್ಷದ ವಿಕಲಚೇತನರ ನಡೆ ಸಕಲಚೇತನದ ಕಡೆ ಎಂಬ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಕಾಲು ಮುರಿಯುವವರ ಮಧ್ಯೆ ಕಾಲು, ಕೈ ಜೋಡಿಸುವಂತ ಮಹಾನ್ ಕಾರ್ಯಕ್ಕೆ ಎಲ್ಲರೂ ಮುಂದಾಗಬೇಕು ಎಂದು ಹೇಳಿದ್ದಾರೆ.

ಈ ಜಾತ್ರೆಯಲ್ಲಿ ಕೃತಕ ಕೈ-ಕಾಲುಗಳಿಗಾಗಿ ಎಷ್ಟು ಜನ ನೋಂದಾಯಿಸಿಕೊಳ್ಳುತ್ತಾರೆ, ಅವರೆಲ್ಲರಿಗೂ ಉಚಿತವಾಗಿ ಕೃತಕ ಕೈ-ಕಾಲುಗಳ ಜೋಡಣೆ ಮಾಡಲಾಗುವುದು. ಶ್ರವಣ ನ್ಯೂನತೆಯುಳ್ಳ ವಿದ್ಯಾರ್ಥಿಗಳಿಗೆ ಶ್ರವಣ ಸಾಧನಗಳ ವಿತರಣೆ ಮಾಡಲಾಗುತ್ತಿದೆ. ಈ ಮಹತ್ತರ ಕಾರ್ಯಕ್ಕಾಗಿ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ, ಶ್ರೀ ಮಹಾವೀರ ಲಿಂಬ್ ಸಂಸ್ಥೆಗಳು ಮುಂದಾಗಿವೆ. ಕೈ ಜೊಡಿಸಲು ಹಲವಾರು ದಾನಿಗಳು ಸಹ ಮುಂದೆ ಬಂದಿದ್ದಾರೆ.

ಇದನ್ನೂ ಓದಿ:BBK11; ಪುಂಗೋ ಅವಶ್ಯಕತೆ ಇಲ್ಲ.. ಸಂಕ್ರಾಂತಿ ದಿನವೇ ತ್ರಿವಿಕ್ರಮ್- ಭವ್ಯ ನಡುವೆ ಟಾಕ್ ವಾರ್

publive-image

ಕೈ, ಕಾಲು ಇಲ್ಲದವರಿಗೆ ಕೃತಕ ಕೈ, ಕಾಲು ಜೋಡಿಸುವುದು ಮಹತ್ತರವಾದ ಕಾರ್ಯವಾಗಿದೆ. ಅಜ್ಜನ ಜಾತ್ರೆಯ ರಥ ಸಾಗುವುದಕ್ಕಿಂತ ಮುಂಚೆ ಈ ಅಭಿಯಾನದಲ್ಲಿ ಸಾವಿರಾರೂ ಸಂಖ್ಯೆಯಲ್ಲಿ ಪಾಲ್ಗೊಂಡ ಮಕ್ಕಳ ಹೆಜ್ಜೆಯ ಗುರುತುಗಳು ಎಲ್ಲರಿಗೂ ದಿಕ್ಸೂಚಿಯಾಗಲಿ ಎಂದ ಶ್ರೀಗಳು ಮುಂದಿನ ವರ್ಷ ಯಾವ ವಿಷಯದ ಬಗ್ಗೆ ಜಾಥಾ ಮತ್ತು ಕೆಲಸ ಮಾಡಬೇಕು ಎಂಬುವುದನ್ನು ವಿದ್ಯಾರ್ಥಿಗಳೇ ಸಲಹೆ ನೀಡಬೇಕು. ಆಯ್ಕೆ ಆಗುವ ವಿಷಯವನ್ನು ತಿಳಿಸಿದ ವಿದ್ಯಾರ್ಥಿಯಿಂದಲೇ ಮುಂದಿನ ವರ್ಷದ ಜಾಥಾ ಕಾರ್ಯಕ್ರಮ ಉದ್ಘಾಟಿಸಲಾಗುವುದು ಎಂದು ಶ್ರೀಗಳು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

​ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment