/newsfirstlive-kannada/media/post_attachments/wp-content/uploads/2025/02/Koppal-Factory-Bundh-Protest-6.jpg)
ಕೊಪ್ಪಳದ ಕೈಗಾರಿಕಾ ಪ್ರದೇಶ ಹಾಲವರ್ತಿಯಲ್ಲಿ ಬಲ್ದೋಟಾ ಕಂಪನಿಯಿಂದ ಉಕ್ಕಿನ ಕಾರ್ಖಾನೆ ನಿರ್ಮಾಣ ಮಾಡಲಾಗುತ್ತಿದೆ. ಇದು 54 ಸಾವಿರ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗ್ತಿರೋ ರಾಜ್ಯದ ಎರಡನೇ ಅತಿ ದೊಡ್ಡ ಸ್ಟೀಲ್ ಕಾರ್ಖಾನೆ.
ಜರ್ಮನ್ ತಂತ್ರಜ್ಞಾನವನ್ನು ಬಳಸಿ ಉಕ್ಕಿನ ಕಾರ್ಖಾನೆ ನಿರ್ಮಾಣ ಮಾಡಲಾಗುತ್ತಿದ್ದು, ಇದು 13 ದಶಲಕ್ಷ ಟನ್ ಉತ್ಪಾದನೆ ಮಾಡುವ ಸಾಮರ್ಥ್ಯ ಹೊಂದಿದೆ. ಈ ಕಾರ್ಖಾನೆ ನಿರ್ಮಾಣಕ್ಕೆ ಸರ್ಕಾರ ಈಗಾಗ್ಲೆ ಸಹಿ ಹಾಕಿದ್ದು, ಕಂಪನಿ ಈಗಾಗಲೇ 15,000 ಮಾನವ ಸಂಪನ್ಮೂಲ ಆಯ್ಕೆ ಪ್ರಕ್ರಿಯೆ ನಡೆಸಿದೆ.
ಕೊಪ್ಪಳದ ಕೈಗಾರಿಕಾ ಪ್ರದೇಶದಲ್ಲಿ 200ಕ್ಕೂ ಹೆಚ್ಚು ಸ್ಟೀಲ್ ಕಾರ್ಖಾನೆಗಳು ಇವೆ. ಈಗಾಗಲೆೇ ಕಾರ್ಖಾನೆಗಳ ಹೊಗೆಯಿಂದ ಇಲ್ಲಿನ ಗ್ರಾಮಸ್ಥರು ನಲುಗಿ ಹೋಗಿದ್ದಾರೆ. ಕಾರ್ಖಾನೆ ಹೊರಸೂಸುವ ಹೊಗೆ, ಧೂಳಿನಿಂದ ಪರಿಸರ ಕಲುಷಿತ ಆಗಿದೆ. ಗ್ರಾಮದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರಿದ್ದು, ರೈತರು ಬೆಳೆದ ಬೆಳೆಗಳಿಗೆ ಹಾನಿಯಾಗುತ್ತಿದೆ.
ಈಗಾಗ್ಲೇ ಕಾರ್ಖಾನೆಗಳ ಹೊಗೆಯಿಂದ ಜನರು ನಲುಗಿ ಹೋಗಿದ್ದು, ಈ ಮಧ್ಯೆ ಉಕ್ಕಿನ ಕಾರ್ಖಾನೆ ನಿರ್ಮಾಣಕ್ಕೆ ಕಂಪನಿ ಮುಂದಾಗಿದೆ. ಬಲ್ದೋಟಾ ಕಂಪನಿಯ ಉಕ್ಕಿನ ಕಾರ್ಖಾನೆ ನಿರ್ಮಾಣಕ್ಕೆ ಜಿಲ್ಲೆಯ ಜನರಿಂದ ಭಾರೀ ವಿರೋಧ ವ್ಯಕ್ತವಾಗಿದೆ.
ಇದನ್ನೂ ಓದಿ: ಗೃಹಿಣಿಯರಿಗೆ ಶಾಕಿಂಗ್ ನ್ಯೂಸ್.. ಸದ್ದಿಲ್ಲದೇ ಅಡುಗೆ ಎಣ್ಣೆ ಬೆಲೆ ಏರಿಕೆ? ಕೆ.ಜಿಗೆ ಎಷ್ಟಿತ್ತು? ಈಗ ಎಷ್ಟು ಹೆಚ್ಚಳ?
ಗಿಣಿಗೇರಾ, ಚಿಕ್ಕಬಗನಾಳ್, ಹಿರೇ ಬಗನಾಳ್, ಕಾಸನಕಂಡಿ, ಗೊಂಡಬಾಳ, ಹಾಲವರ್ತಿ ಕುಣಿಕೇರಿ ಗ್ರಾಮಗಳ ಜನರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ. ಜಿಲ್ಲಾಧಿಕಾರಿ ನಳಿನ್ ಅತುಲ್ ಅವರು ಇದು ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ್ದು ಅಂತಿರೋ ಡಿಸಿ ನಳಿನ್ ಅತುಲ್ ಅವರ ವಿರುದ್ಧ ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಕಾರ್ಖಾನೆ ಹಠಾವೋ, ಕೊಪ್ಪಳ ಬಚಾವೋ!
BSPL_MSPL ಕಾರ್ಖಾನೆ ನಿರ್ಮಾಣ ವಿರೋಧಿಸಿ ಇಂದು ಕೊಪ್ಪಳ ಬಂದ್‌ಗೆ ಕರೆ ನೀಡಲಾಗಿತ್ತು. ಬಂದ್‌ಗೆ ಗವಿಮಠದ ಶ್ರೀಗವಿಸಿದ್ದೇಶ್ವರ ಶ್ರೀ ಬೆಂಬಲ ವ್ಯಕ್ತಪಡಿಸಿದ್ದು, ವರ್ತಕರು, ಬೀದಿ ಬದಿ ವ್ಯಾಪಾರಸ್ಥರ ಸಾಥ್ ನೀಡಿದ್ದಾರೆ. ಬಸ್ ಡಿಪೋಗೆ ನುಗ್ಗಿ ಪ್ರತಿಭಟನಾಕಾರರ ವಾಗ್ವಾದ ನಡೆಸಿದ್ದು, KSRTC ಬಸ್ ಕಾರ್ಯಾಚರಣೆ ಬಂದ್ ಮಾಡಿಸಿದ್ರು.
ತಾಲೂಕು ಕ್ರೀಡಾಂಗಣದಲ್ಲಿ ಕಾರ್ಖಾನೆ ಹಠಾವೋ ಕೊಪ್ಪಳ ಬಚಾವೋ ಬಹಿರಂಗ ಸಭೆ ನಡೆಸಲಾಯಿತು. ಈ ವೇಳೆ ಜನರು ಕಾರ್ಖಾನೆ ಹೊಗೆಯಿಂದ ನರಳಾಡುತ್ತಿರುವ ವಿಡಿಯೋ ಪ್ರದರ್ಶನ ಮಾಡಲಾಯಿತು. ಈ ವೇಳೆ ಗವಿಮಠದ ಶ್ರೀಗಳು ಕಾರ್ಖಾನೆಯಿಂದ ಆದ ನರಳಾಟದ ವಿಡಿಯೋ ನೋಡಿ ಕಣ್ಣೀರು ಹಾಕಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ