/newsfirstlive-kannada/media/post_attachments/wp-content/uploads/2025/04/BK_RAVI_1.jpg)
ಬೆಂಗಳೂರು: ಆಫ್ರಿಕಾ ಖಂಡದ ಮೊರಕ್ಕೋ ದೇಶದ ಕಾಸಾಬ್ಲಾಂಕಾದಲ್ಲಿ ಜೂನ್ 10 ಮತ್ತು 11ರಂದು 16ನೇ ಅಂತಾರಾಷ್ಟ್ರೀಯ ಶೈಕ್ಷಣಿಕ ಸಮ್ಮೇಳನ ನಡೆಯಲಿದೆ. ಈ ಸಮ್ಮೇಳನಕ್ಕೆ ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಬಿ.ಕೆ ರವಿ ಅವರನ್ನು ಆಹ್ವಾನಿಸಲಾಗಿದೆ.
ಸುಸ್ಥಿರ ಭವಿಷ್ಯಕ್ಕಾಗಿ ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿ ಎಂಬ ಮಹತ್ವದ ವಿಷಯದ ಕುರಿತಾಗಿ ಹಸನ್ ವಿಶ್ವವಿದ್ಯಾಲಯದಿಂದ ಈ ಅಂತಾರಾಷ್ಟ್ರೀಯ ಸಮ್ಮೇಳನ ಆಯೋಜಿಸಿದೆ. ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಪ್ರೊ. ಬಿ.ಕೆ ರವಿ ಅವರು ಪ್ರಧಾನ ಭಾಷಣವನ್ನು ಮಾಡಲಿದ್ದಾರೆ.
ಜೂನ್ 11 ರಂದು ಉನ್ನತ ಶಿಕ್ಷಣ ಮತ್ತು ಮಾನವೀಯ ಮೌಲ್ಯಗಳು ಎಂಬ ವಿಷಯದ ಕುರಿತು ವಿಶೇಷ ಗೋಷ್ಠಿಯನ್ನು ಪ್ರೊ. ಬಿ.ಕೆ ರವಿ ಅವರು ಪ್ರಸ್ತುತಪಡಿಸಲಿದ್ದಾರೆ.
ಜೂನ್ 10, 11ರಂದು ನಡೆಯುವ ಸಮ್ಮೇಳನವು ಜಾಗತಿಕ ಮಟ್ಟದ ಪ್ರಮುಖ ಶೈಕ್ಷಣಿಕ ತಜ್ಞರನ್ನು ಒಗ್ಗೂಡಿಸುತ್ತಿದೆ. ಅಮೆರಿಕ, ಜೋರ್ಡಾನ್, ಯೂರೋಪ್, ಆಫ್ರಿಕಾ, ಕುವೈತ್, ಕೆನಡಾ ಸೇರಿದಂತೆ 12 ರಾಷ್ಟ್ರಗಳ 254ಕ್ಕೂ ಅಧಿಕ ಸಂಶೋಧಕರು ತಮ್ಮ ಪ್ರಬಂಧಗಳನ್ನು ಮಂಡಿಸಲಿದ್ದಾರೆ.
ಇದನ್ನೂ ಓದಿ: ಬಡವರ ಡಾಕ್ಟರ್, 10 ರೂಪಾಯಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯ ರಥಿನಂ ಪಿಳ್ಳೈ ಇನ್ನಿಲ್ಲ
ಪ್ರೊ.ಬಿ.ಕೆ. ರವಿ ಅವರ ಈ ಭಾಗವಹಿಸುವಿಕೆ ಕೊಪ್ಪಳ ವಿಶ್ವವಿದ್ಯಾಲಯದ ಖ್ಯಾತಿಗೆ ಮತ್ತಷ್ಟು ಗರಿಮೆ ತಂದುಕೊಡಲಿದೆ. ವಿಶ್ವ ಮಟ್ಟದಲ್ಲಿ ಶೈಕ್ಷಣಿಕ ವಿನಿಮಯಕ್ಕೆ ದಾರಿ ಮಾಡಿಕೊಡಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ