newsfirstkannada.com

Rahul Dravid: ತಂಡದಿಂದ ಹೋಗುವಾಗಲೂ ಹೃದಯ ಗೆದ್ದ ಹೀರೋ.. ಕೋಟಿಗೊಬ್ಬ ನಮ್ಮ ದ್ರಾವಿಡ್..!

Share :

Published July 11, 2024 at 10:31am

    ಹೃದಯ ಶ್ರೀಮಂತಿಕೆ ನಡೆಯಿಂದ ದಿಲ್​ ಗೆದ್ದ ದ್ರಾವಿಡ್​

    ತಾರತಮ್ಯ ಬೇಡ.. ಸಮಾನತೆ ಪಾಠ ಮಾಡಿದ ದಿ ವಾಲ್

    ಅಂಡರ್​​​-19 ವಿಶ್ವಕಪ್​​ ಗೆಲ್ಲಿಸಿದಾಗಲೂ ಮಾದರಿ ನಡೆ

ರಾಹುಲ್​ ದ್ರಾವಿಡ್​​..! ಜಂಟಲ್​​ಮ್ಯಾನ್​ ಗೇಮ್​​ನ ರಿಯಲ್​​ ಜಂಟಲ್​ಮ್ಯಾನ್​​​. ರಾಹುಲ್​ ದ್ರಾವಿಡ್​​​​​ ಭಾರತಕ್ಕೆ ಐತಿಹಾಸಿಕ ಟಿ20 ವಿಶ್ವಕಪ್ ಗೆಲ್ಲಿಸಿಕೊಟ್ಟು ನಿರ್ಗಮಿಸಿದ್ದಾರೆ. ಹೋಗುವಾಗಲೂ ಮಾದರಿ ನಡೆಯಿಂದ ಎಲ್ಲರ ಹೃದಯ ಗೆದ್ದಿದ್ದಾರೆ.

ದ್ರಾವಿಡ್ ಎಂದಿಗೂ ತಮ್ಮ ಸಾಧನೆ ಬಗ್ಗೆ ಗರ್ವ ಪಟ್ಟುಕೊಂಡವರಲ್ಲ. ತಮಗೆ ಸಿಕ್ಕ ಸ್ಥಾನದಿಂದ ಮೈಮರೆತವರಲ್ಲ. ಯಾವ ಹಮ್ಮೂ ಇಲ್ಲ, ಬಿಮ್ಮೂ ಇಲ್ಲ. ಆಟಗಾರನಾಗಿದ್ದಲೂ ಹಾಗೇ ಇಂದಿಗೂ ಹಾಗೆ. ನಿಜಕ್ಕೂ ಇಂತವರು ಕೋಟಿಗೊಬ್ಬ.

ಇದನ್ನೂ ಓದಿ:ಕಡಲತೀರ.. ಕೋಟಿಗಟ್ಟಲೇ ಖರ್ಚು.. ಕೊಹ್ಲಿ ಕಟ್ಟಿಸಿದ ಬಂಗಲೆ ವಾವ್ಹ್ .. ಅದ್ಭುತ..! ವಿಡಿಯೋ

ದಿಲ್​ ಗೆದ್ದ ದ್ರಾವಿಡ್​​​..!
ಟೀಮ್ ಇಂಡಿಯಾ ರೋಹಿತ್​ ಶರ್ಮಾ ನಾಯಕತ್ವದಲ್ಲಿ 17 ವರ್ಷಗಳ ಬಳಿಕ ಟಿ20 ವಿಶ್ವಕಪ್​​ ಗೆದ್ದು ಹೊಸ ಚರಿತ್ರೆ ಸೃಷ್ಟಿಸಿತ್ತು. ಕಪ್​ ಗೆದ್ದ ಖುಷಿಗೆ ಬಿಸಿಸಿಐ ವಿಶ್ವಚಾಂಪಿಯನ್ ತಂಡಕ್ಕೆ ಬಂಪರ್​ 125 ಕೋಟಿ ರೂಪಾಯಿ ಬಹುಮಾನ ಘೋಷಿಸಿತ್ತು. ಆ ಪೈಕಿ ಹೆಡ್​ಕೋಚ್ ರಾಹುಲ್​ ದ್ರಾವಿಡ್​​ಗೂ ಜಾಕ್​​ಪಾಟ್​​​​​​ ಹೊಡೆದಿತ್ತು. ದಿ ವಾಲ್​ಗೆ ಬಿಸಿಸಿಐ 5 ಕೋಟಿ ರೂಪಾಯಿ ಬೋನಸ್​​​​ ನೀಡಿ ಖುಷಿ ಪಡಿಸಿತ್ತು.
ಚಾಂಪಿಯನ್​​ ಕೋಚ್​​​​​​​​​​​​​​ ದ್ರಾವಿಡ್​ ತಮಗೆ ನೀಡಿದ್ದ 5 ಕೋಟಿ ರೂಪಾಯಿ ಬಹುಮಾನವನ್ನ ತಿರಸ್ಕರಿಸಿದ್ದು, ಬಿಸಿಸಿಐಗೆ ಹಿಂತಿರುಗಿಸಿದ್ದಾರೆ. 5 ಕೋಟಿ ರೂಪಾಯಿ ಬದಲು ಕೇವಲ ಎರಡೂವರೆ ಕೋಟಿ ರೂಪಾಯಿಯನ್ನ ಮಾತ್ರ ತಮಗೆ ನೀಡಿ ಎಂದು ಬಿಸಿಸಿಐಗೆ ಮನವಿ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ:ಗೌತಮ್ ಗಂಭೀರ್​​ಗೆ ಬಿಗ್ ಶಾಕ್​.. ಮುಖ್ಯ ಕೋಚ್​ ಇಟ್ಟಿದ್ದ ದೊಡ್ಡ ಬೇಡಿಕೆ ತಿರಸ್ಕರಿಸಿದ ಬಿಸಿಸಿಐ

ದ್ರಾವಿಡ್​ ಮನವಿ ಗೌರವಿಸುತ್ತೇವೆ
ಸಹಾಯಕ ಸಿಬ್ಬಂದಿ ಪರಾಸ್ ಮಾಂಬ್ರೆ (ಬೌಲಿಂಗ್​​​ ಕೋಚ್​​​​) ಟಿ ದಿಲೀಪ್​​​​​ (ಫೀಲ್ಡಿಂಗ್​ ಕೋಚ್​​​) ಹಾಗೂ ವಿಕ್ರಮ್ ರಾಥೋರ್​​ (ಬ್ಯಾಟಿಂಗ್ ಕೋಚ್​​​). ಇವರಿಗೆ ನೀಡಿದಷ್ಟೇ ಬೋನಸ್​ ಹಣದಷ್ಟೇ ನನಗೂ ಕೊಡಿ ಎಂದು ಮಾಜಿ ಹೆಡ್​ಕೋಚ್​​ ರಾಹುಲ್​ ದ್ರಾವಿಡ್ ಅವರು ಮನವಿ ಮಾಡಿದ್ದಾರೆ. ನಾವು ಅವರ ಭಾವನೆಗಳನ್ನ ಗೌರವಿಸುತ್ತೇವೆ-ಬಿಸಿಸಿಐ, ಅಧಿಕಾರಿ

ಸಮಾನತೆ ಪಾಠ ಮಾಡಿದ ದಿ ವಾಲ್​​​..!
ರಾಹುಲ್​ ದ್ರಾವಿಡ್​​​ SELFLESS ಕ್ರಿಕೆಟರ್ ಅನ್ನೋ ಮಾತಿದೆ. ಇದೀಗ ಅದು ಮತ್ತೊಮ್ಮೆ ಸಾಬೀತಾಗಿದೆ. ಬಿಸಿಸಿಐ ಹೆಡ್​​​​ಕೋಚ್​​ಗೆ 5 ಕೋಟಿ ರೂಪಾಯಿ ಬಹುಮಾನ ನೀಡಿದ್ರೆ ಮೂವರು ಸಹಾಯಕ ಸಿಬ್ಬಂದಿಗೆ ತಲಾ 2.5 ಕೋಟಿ ರೂಪಾಯಿ ವಿತರಿಸಿತ್ತು. ಒಪ್ಪದ ದಿ ವಾಲ್​ ಎಲ್ಲಾ ಸಿಬ್ಬಂದಿಗೆ ನೀಡಿದಷ್ಟೇ ಬೋನಸ್​​ ಹಣವನ್ನು ತನಗೂ ನೀಡಿ ಎಂದು ಹೇಳಿದ್ದಾರೆ. ವಿಶ್ವಕಪ್​ ಗೆಲುವಿನಲ್ಲಿ ಎಲ್ಲಾ ಸಿಬ್ಬಂದಿ ಪಾತ್ರ ಸಮಾನವಾಗಿದೆ. ಹೀಗಾಗಿ ತಾನು ಕೋಟಿ 5 ಕೋಟಿ ಪಡೆದು ಉಳಿದವರಿಗೆ 2.5 ಕೋಟಿ ರೂಪಾಯಿ ನೀಡಿದ್ದು ದ್ರಾವಿಡ್​​​​​​ ಮನಸ್ಸಿಗೆ ಹಿಡಿಸಲಿಲ್ಲ. ತಾರತಮ್ಯ ಬೇಡ. ನೀಡುವುದಾದ್ರೆ ಎಲ್ಲರಿಗೂ ಒಂದೇ ಸಮಾನ ಬೋನಸ್ ಕೊಡುವಂತೆ ಕೇಳಿಕೊಂಡಿದ್ದಾರೆ.

ಇದನ್ನೂ ಓದಿ:ಓದಿಸಿ ಸರ್ಕಾರಿ ಕೆಲಸ ಕೊಡಿಸಿದ ಪತಿ.. ಡ್ಯೂಟಿಗೆ ಸೇರ್ತಿದ್ದಂತೆ ಗಂಡನ ಬಿಟ್ಟು ಪತ್ನಿ ಪರಾರಿ..!

ವಿಶ್ವಕಪ್​​ ಗೆಲ್ಲಿಸಿದಾಗಲೂ ಮಾದರಿ ನಡೆ
ರಾಹುಲ್​ ದ್ರಾವಿಡ್​ ಸಹಾಯಕ ಸಿಬ್ಬಂದಿ ಪರ ಬ್ಯಾಟ್​ ಬೀಸಿ, ಹೃದಯ ಗೆಲ್ತಿರೋದು ಇದೇ ಮೊದಲೇನಲ್ಲ. 6 ವರ್ಷಗಳ ಅಂಡರ್​​​-19 ವಿಶ್ವಕಪ್ ಗೆಲ್ಲಿಸಿಕೊಟ್ಟಾಗಲೂ ಮಾದರಿ ನಡೆಯಿಂದ ಸುದ್ದಿಯಾಗಿದ್ರು. ಬಿಸಿಸಿಐ ಹೆಡ್​ಕೋಚ್​ ದ್ರಾವಿಡ್​ಗೆ 50 ಲಕ್ಷ, ಸಹಾಯಕ ಸಿಬ್ಬಂದಿಗೆ 20 ಲಕ್ಷ ಹಾಗೂ ಆಟಗಾರರಿಗೆ 30 ಲಕ್ಷ ರೂಪಾಯಿ ಬಹುಮಾನ ಘೋಷಿಸಿತ್ತು. ಆಗಲೂ ದಿ ವಾಲ್​ 50 ಲಕ್ಷ ರೂಪಾಯಿ ತಿರಸ್ಕರಿಸಿ ಸಹಾಯಕ ಸಿಬ್ಬಂದಿಗೆ ನೀಡಿದಷ್ಟೇ 20 ಲಕ್ಷ ರೂಪಾಯಿ ಪಡೆದುಕೊಂಡಿದ್ರು.

ಸ್ವಾರ್ಥ ತುಂಬಿದ ಜಗತ್ತಿನಲ್ಲಿ ಬೇರೆಯವರ ಬಗ್ಗೆ ಯೋಚಿಸೋದೇ ವಿರಳ. ಅಂತ್ರದಲ್ಲಿ ರಾಹುಲ್​​​ ದ್ರಾವಿಡ್ ತಾರತಮ್ಯ ಬೇಡ, ಸಹಾಯಕ ಸಿಬ್ಬಂದಿಗೆ ನೀಡುವಷ್ಟೇ ಸಮಾನ ಬೋನಸ್​​ ಅನ್ನ ಕೊಡಿ ಎಂದು ಹೇಳ್ತಿರೋದು ನಿಜಕ್ಕೂ ಶ್ಲಾಘನೀಯ ಮತ್ತು ಅನುಕರಣೀಯ ನಡೆ. ಇದಕ್ಕೆ ಕನ್ನಡದ ಕಣ್ಮಣಿ ಅಂದ್ರೆ ಎಲ್ಲರಿಗೂ ಇಷ್ಟ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Rahul Dravid: ತಂಡದಿಂದ ಹೋಗುವಾಗಲೂ ಹೃದಯ ಗೆದ್ದ ಹೀರೋ.. ಕೋಟಿಗೊಬ್ಬ ನಮ್ಮ ದ್ರಾವಿಡ್..!

https://newsfirstlive.com/wp-content/uploads/2024/07/DRAVID-2.jpg

Load More