/newsfirstlive-kannada/media/post_attachments/wp-content/uploads/2024/09/JOBS_NEW_1.jpg)
ಬೆಂಗಳೂರು: ಗೆಜೆಟೆಡ್ ಪ್ರೊಬೆಷನರಿ 384 ಹುದ್ದೆಗಳ ನೇಮಕಾತಿ ಪೂರ್ವಭಾವಿ ಮರುಪರೀಕ್ಷೆಯನ್ನು ಡಿಸೆಂಬರ್ 29ಕ್ಕೆ ನಡೆಸಲಾಗುವುದು ಎಂದು ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ತಿಳಿಸಿದೆ.
2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ ಗ್ರೂಪ್ ಎ ಹಾಗೂ ಬಿ ವೃಂದದ ಒಟ್ಟು 384 ಹುದ್ದೆಗಳಿಗೆ ದಿನಾಂಕ 2024ರ ಆಗಸ್ಟ್ 27 ರಂದು ಪೂರ್ವಭಾವಿ ಪರೀಕ್ಷೆ ನಡೆಸಲಾಗಿತ್ತು. ಆದರೆ ಅಕ್ಟೋಬರ್ 01 ರ ತಿದ್ದುಪಡಿ ಅಧಿಸೂಚನೆ- 4ರ ಅನ್ವಯ ಪೂರ್ವಭಾವಿ ಮರು ಪರೀಕ್ಷೆಯನ್ನು 2024 ಡಿಸೆಂಬರ್ 29ರಂದು ನಿಗದಿ ಪಡಿಸಲಾಗಿದೆ. ಪರೀಕ್ಷಾ ವೇಳಾಪಟ್ಟಿ ಮತ್ತು ತಿದ್ದುಪಡಿ ಅಧಿಸೂಚನೆಯನ್ನು ಆಯೋಗದ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ ಎಂದು ತಿಳಿಸಲಾಗಿದೆ.
ಇದನ್ನೂ ಓದಿ:ಯಾರೂ ಇಲ್ಲದ ವೇಳೆ ಪ್ರಿಯಕರನ ಮನೆಗೆ ಕರೆಸಿದ ಪ್ರಿಯತಮೆ.. ಪೋಷಕರು ಬರ್ತಿದ್ದಂತೆ ಟ್ರಂಕ್ನಲ್ಲಿ ಮುಚ್ಚಿಟ್ಟ ಗೆಳತಿ
ಕೆಪಿಎಸ್ಸಿಯ ಗ್ರೂಪ್ ಎ ಹಾಗೂ ಬಿ ಹುದ್ದೆಗಳಿಗೆ ಈಗಾಗಲೇ ಪರೀಕ್ಷೆಯನ್ನು ನಡೆಸಲಾಗಿದೆ. ಕೆಎಎಸ್ ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳಿಗಾಗಿ ಆಗಸ್ಟ್ನಲ್ಲಿ ಪೂರ್ವಭಾವಿ ಪರೀಕ್ಷೆ ನಡೆಸಲಾಗಿತ್ತು. ಆದರೆ ಈ ವೇಳೆ ಪ್ರಶ್ನೆಪತ್ರಿಕೆಯ ಭಾಷಾಂತರದಲ್ಲಿ ಎಡವಟ್ಟು ಹೆಚ್ಚಾಗಿ ಇರುವುದು ಕೇಳಿಬಂದಿತ್ತು. ಈ ಬಗ್ಗೆ ಟೀಕೆಗಳು ಕೂಡ ಕೇಳಿ ಬಂದಿದ್ದವು. ಹೀಗಾಗಿ ಮರುಪರೀಕ್ಷೆಗೆ ಸಿಎಂ ಸಿದ್ದರಾಮಯ್ಯ ಕೆಪಿಎಸ್ಸಿಗೆ ಸೂಚನೆ ನೀಡಿದ್ದರು. ಇದರಿಂದ ಡಿಸೆಂಬರ್ 29ಕ್ಕೆ ಪೂರ್ವಭಾವಿ ಮರುಪರೀಕ್ಷೆ ನಿಗದಿ ಮಾಡಲಾಗಿದೆ ಎಂದು ಕೆಪಿಎಸ್ಸಿ ತಿಳಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ