/newsfirstlive-kannada/media/post_attachments/wp-content/uploads/2024/11/JOB_EXAMS_KPSC.jpg)
ಪಬ್ಲಿಕ್ ಸರ್ವೀಸ್ ಕಮಿಷನ್ ಸ್ಟೇಟ್ ಆಡಿಟ್ ಅಂಡ್ ಅಕೌಂಟ್ಸ್ ಡಿಪಾರ್ಟ್‌ಮೆಂಟ್ (SAAD) ನ ಲೆಕ್ಕಪರಿಶೋಧನ ಅಧಿಕಾರಿ ಮತ್ತು ಸಹಾಯಕ ನಿಯಂತ್ರಕರು ಹುದ್ದೆಗಳ ಮುಖ್ಯ ಪರೀಕ್ಷೆಗೆ ದಿನಾಂಕ ಘೋಷಣೆ ಮಾಡಲಾಗಿದೆ. ಮುಖ್ಯ ಪರೀಕ್ಷೆಯ ದಿನಾಂಕ- 21 ಜನವರಿ 2025 ರಿಂದ 24 ಜನವರಿ 2025 ರಂದು ನಡೆಸಲಾಗುತ್ತದೆ. ಪ್ರಿಲಿಮ್ಸ್ ಪರೀಕ್ಷೆಯಲ್ಲಿ ಬರೆದು ಪಾಸ್ ಆಗಿ ಮೆರಿಟ್ ಪಟ್ಟಿಯಲ್ಲಿ ಹೆಸರು ಪಡೆದವರು ಮುಖ್ಯ ಪರೀಕ್ಷೆಗೆ ಹಾಜರಾಗಬಹುದು.
ಗ್ರೂಪ್ ಬಿ ವೃಂದದ ಲೆಕ್ಕಪರಿಶೋಧನ ಅಧಿಕಾರಿ ಮತ್ತು ಸಹಾಯಕ ನಿಯಂತ್ರಕರು ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಮುಖ್ಯ ಪರೀಕ್ಷೆಯ ಅಧಿಸೂಚನೆ ರಿಲೀಸ್ ಮಾಡಲಾಗಿದೆ. ಸೆಪ್ಟೆಂಬರ್‌ನಲ್ಲಿ ಕೆಪಿಎಸ್‌ಸಿ SAAD ಹುದ್ದೆಗಳ ಮುಖ್ಯ ಪರೀಕ್ಷೆಗೆ ಅರ್ಹರ ಪಟ್ಟಿ ಪ್ರಕಟಿಸಿತ್ತು. ಈ ಮುಖ್ಯ ಪರೀಕ್ಷೆಗೆ ಅಭ್ಯರ್ಥಿಗಳು ಹಾಜರಾಗಬೇಕು ಎಂದರೆ ಸಂಪೂರ್ಣ ಮಾಹಿತಿಯ ಅರ್ಜಿ ಈಗ ಸಲ್ಲಿಸಬೇಕಾಗಿರುತ್ತದೆ.
ಇದಕ್ಕೆ ಸಂಬಂಧಿಸಿದ ದಿನಾಂಕ, ಅರ್ಜಿ ಹೇಗೆ ಸಲ್ಲಿಸಬೇಕು ಎನ್ನುವ ಮಾಹಿತಿ ಇಲ್ಲಿ ನೀಡಲಾಗಿದೆ. ಆದರೆ ಅರ್ಜಿ ಸಲ್ಲಿಕೆ ಮಾಡಲು ಕೇವಲ 14 ದಿನಗಳ ಗಡುವ ಮಾತ್ರ ಇಲಾಖೆ ನೀಡಿದೆ. ಅರ್ಜಿ ಸಲ್ಲಿಕೆ ಮಾಡುವಾಗ ವಿವರವಾಗಿ ಓದಿಕೊಂಡು ಆಕಾಂಕ್ಷಿಗಳು ಅರ್ಜಿ ಭರ್ತಿ ಮಾಡಬೇಕು. ಏಕೆಂದರೆ ಮತ್ತೆ ತಿದ್ದುಪಡಿಗೆ ಇಲ್ಲಿ ಅವಕಾಶ ಇರುವುದಿಲ್ಲ. ಪೂರ್ವಭಾವಿ ಪರೀಕ್ಷೆಯ ಅರ್ಜಿಯಲ್ಲಿ ಕೊಟ್ಟ ಸ್ವವಿವರ ಮತ್ತೆ ಈಗ ತಿದ್ದಲು ಅವಕಾಶ ಇಲ್ಲ. ಎಲ್ಲ ದಾಖಲೆಗಳನ್ನು ಸ್ಪಷ್ಟವಾಗಿ ಕಾಣುವಂತೆ ಅಪ್‌ಲೋಡ್ ಮಾಡಬೇಕು.
ಇದನ್ನೂ ಓದಿ:ಬ್ಯಾಂಕ್ನಿಂದ ಗುಡ್ನ್ಯೂಸ್; ಜೂನಿಯರ್ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳು.. ನಾಳೆ ಅರ್ಜಿ ಆರಂಭ
ಸದ್ಯ ಈಗ ಕರೆಯಲಾದ ಖಾಲಿ ಹುದ್ದೆಗಳ ತಕ್ಕಂತೆ 1:20 ಅನುಪಾತದಲ್ಲಿ ಪೂರ್ವಭಾವಿ ಪರೀಕ್ಷೆಯಲ್ಲಿ ಗಳಿಸಿದ ಮಾರ್ಕ್ಸ್ ಆಧಾರದ ಮೇಲೆ ಮೇನ್ ಎಕ್ಸಾಂ ಬರೆಯಬಹುದು. ಮುಖ್ಯ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳು ಹಾಗೂ ಮೀಸಲಾತಿ ಪ್ರಕಾರ ಹುದ್ದೆಗಳಿಗೆ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಲಾಗುತ್ತೆ.
ಗ್ರೂಪ್-ಎ ಸಹಾಯಕ ನಿಯಂತ್ರಕರ ಹುದ್ದೆ- 43 ಆರ್ಪಿಸಿ + 15 ಹೆಚ್ಕೆ
ಗ್ರೂಪ್-ಬಿ ಲೆಕ್ಕಪರಿಶೋಧನಾಧಿಕಾರಿ ಹುದ್ದೆ- 54 ಉದ್ಯೋಗಗಳು
ಪರೀಕ್ಷಾ ಶುಲ್ಕ ಎಷ್ಟು ಇದೆ?
ಸಾಮಾನ್ಯ ಅಭ್ಯರ್ಥಿಗಳಿಗೆ- 500 ರೂಪಾಯಿಗಳು
ಎಸ್ಸಿ, ಎಸ್ಟಿ, ಸಿ-1, ವಿಶೇಷ ಚೇತನರು, ಮಾಜಿ ಸೈನಿಕರು- 300 ರೂಪಾಯಿಗಳು
ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡುವುದು ಹೇಗೆ?
ಅಭ್ಯರ್ಥಿಗಳು ವೆಬ್ಸೈಟ್ https://kpsconline.karnataka.gov.in/HomePage/index.html ಗೆ ಭೇಟಿ ನೀಡಬೇಕು. ಲಾಗಿನ್ ಎಂದಿರುವಲ್ಲಿ ಕ್ಲಿಕ್ ಮಾಡಬೇಕು. ಲಾಗಿನ್ ಆದ ಮೇಲೆ ಸಂಪೂರ್ಣ ಮಾಹಿತಿ ನೀಡಿ. ಮರೆಯದೇ ಪರೀಕ್ಷೆ ಶುಲ್ಕ ಪಾವತಿಸಿ.
ಮುಖ್ಯವಾದ ದಿನಾಂಕ ನೆನಪಿಡಿ
ಅರ್ಜಿ ಆರಂಭದ ದಿನಾಂಕ- 25 ನವೆಂಬರ್ 2024
ಅರ್ಜಿ ಸಲ್ಲಿಸಲು ಕೊನೆ ದಿನಾಂಕ- 09 ಡಿಸೆಂಬರ್ 2024
ಮುಖ್ಯ ಪರೀಕ್ಷೆ ದಿನಾಂಕ- 21 ಜನವರಿ 2025 ರಿಂದ 24 ಜನವರಿ 2025
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ