/newsfirstlive-kannada/media/post_attachments/wp-content/uploads/2024/12/KPSC_OFFICE.jpg)
ಬೆಂಗಳೂರು: ಕೆಪಿಎಸ್‌ಸಿಯಿಂದ ರಾಜ್ಯಾದ್ಯಾಂತ ನಡೆಸಲಾದ ಕೆಎಎಸ್ ಶ್ರೇಣಿಯ ಗ್ರೂಪ್ ಎ, ಬಿ 384 ಹುದ್ದೆಗಳ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಮತ್ತೆ ತಪ್ಪುಗಳು ಕಂಡು ಬಂದಿರುವುದು ತಿಳಿದು ಬಂದಿದೆ. ಈ ಸಂಬಂಧ ಪುನಃ ಪರೀಕ್ಷೆ ನಡೆಸುವಂತೆ ಕರ್ನಾಟಕ ಲೋಕ ಸೇವಾ ಆಯೋಗಕ್ಕೆ ಅಭ್ಯರ್ಥಿಯೊಬ್ಬರು ಪತ್ರ ಬರೆದಿದ್ದಾರೆ.
ಕರ್ನಾಟಕ ಲೋಕ ಸೇವಾ ಆಯೋಗದ ವತಿಯಿಂದ ಡಿಸೆಂಬರ್ 29ರಂದು 2023- 24ನೇ ಸಾಲಿನ ಕೆಎಎಸ್ ಶ್ರೇಣಿಯ ಗ್ರೂಪ್ ಎ, ಬಿ ಹುದ್ದೆಗಳ ಪರೀಕ್ಷೆಯನ್ನು ನಡೆಸಲಾಗಿತ್ತು. ಇದರಲ್ಲಿ ನಾಲ್ಕೈದು ಪ್ರಶ್ನೆಗಳನ್ನು ತಪ್ಪಾಗಿ ಇಂಗ್ಲಿಷ್ನಿಂದ ಕನ್ನಡಕ್ಕೆ ಅನುವಾದ (Translate) ಮಾಡಿಲಾಗಿದೆ ಎಂದು ತುಮಕೂರಿನ ಕುಣಿಗಲ್ ತಾಲೂಕಿನ ನಾಗಣ್ಣ ಜಿ.ಕೆ ಎನ್ನುವರು ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಿ ಎಂದು ಮನವಿ ಮಾಡಿದ್ದಾರೆ.
ಪರೀಕ್ಷೆ ಬರೆದ ಅಭ್ಯರ್ಥಿಗಳು ಕೆಪಿಎಸ್ಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು ಕನ್ನಡ ಬಾರದ ಕೆಪಿಎಸ್ಸಿ ಎಂದು ಹೇಳಲಾಗುತ್ತಿದೆ. ಒಮ್ಮೆ ತಪ್ಪು ಮಾಡಿದರೆ ಪುನಃ ಪರೀಕ್ಷೆ ಎನ್ನಬಹುದು. ಈ ರೀತಿ ಮಾಡಿದರೆ ಹೇಗೆ ಎಂದು ಅಭ್ಯರ್ಥಿಗಳು ಪ್ರಶ್ನೆ ಮಾಡುತ್ತಿದ್ದಾರೆ. ಹೀಗಾಗಿ ಇದರಲ್ಲಿ ಸಿಎಂ ಸಿದ್ದರಾಮಯ್ಯ ಅವರು ಮಧ್ಯೆ ಪ್ರವೇಶಿಸಬೇಕು ಎಂದು ಒತ್ತಾಯ ಮಾಡಲಾಗುತ್ತಿದೆ.
ಇದನ್ನೂ ಓದಿ:ಕೇಂದ್ರ ಸರ್ಕಾರದಡಿ ಉದ್ಯೋಗ ಅವಕಾಶ.. 40 ವರ್ಷದ ಒಳಗಿನವರು ಅರ್ಜಿ ಸಲ್ಲಿಕೆ ಮಾಡಬಹುದು
ಇದೇ 384 ಹುದ್ದೆಗಳಿಗೆ ಸಂಬಂಧಿಸಿದಂತೆ ಈ ಹಿಂದೆ ಆಗಸ್ಟ್ 27ರಂದು ನಡೆಸಲಾಗಿದ್ದ ಪರೀಕ್ಷೆಯಲ್ಲಿ ಕನ್ನಡ ಲೋಪದೋಷವಾಗಿ ಇಡೀ ಪರೀಕ್ಷೆಯನ್ನು ರದ್ದು ಮಾಡಲಾಗಿತ್ತು. ಹೀಗಾಗಿ ಪುನಃ ಪರೀಕ್ಷೆಯನ್ನು ಡಿಸೆಂಬರ್ 29 ಭಾನುವಾರದಂದು ನಡೆಸಲಾಗಿತ್ತು. ಪೇಪರ್- 1 ಸಾಮಾನ್ಯ ಜ್ಞಾನ 1-ಬಿ ಸಿರೀಸ್ನ ಪ್ರಶ್ನೆ ಪತ್ರಿಕೆಯಲ್ಲಿ ಮತ್ತೆ ಅನುವಾದದಲ್ಲಿ ಲೋಪ ಕಂಡು ಬಂದಿರುವುದು ಅಭ್ಯರ್ಥಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರಶ್ನೆ ಪತ್ರಿಕೆಯಲ್ಲಿ ತಪ್ಪಾಗಿ ಕೊಟ್ಟಿರುವ ಪ್ರಶ್ನೆಗಳು
- ಪ್ರಶ್ನೆ 3- ತಪ್ಪದ ಪದ ಬಳಕೆ- ಇದು ‘ತಪ್ಪಾದ’ ಎಂದು ಆಗಬೇಕಿತ್ತು
- ಪ್ರಶ್ನೆ 45- ವಿಧೇಯತ- ಇದು ‘ವಿಧೇಯಕ’ ಎಂದು ಆಗಬೇಕು
- ಪ್ರಶ್ನೆ 97- ಸ್ವಾಯಿಕ ಪುನರಂ- ಇದು ‘ಪುನರ್ ಪರಿಶೀಲನೆ’ ಎಂದು ಆಗಬೇಕಿತ್ತು.
- ಪ್ರಶ್ನೆ 85- ಅಮೆರಿಕದ ರಾಷ್ಟ್ರಪತಿಯವರಿಗೆ ಹೋಲಿಸಿದಂತೆ ಭಾರತದ ರಾಷ್ಟ್ರಪತಿಯವರು ಸಂಸತ್ತಿನಿಂದ ಬಾಕಿ ಇರುವ ಮಸೂದೆಯನ್ನ ಇತ್ಯರ್ಥವಾಗದ ಅನಿರ್ಧಿಷ್ಟ ಕಾಲದವರೆಗೆ ಹಿಡಿದುಕೋಳ್ಳಬಹುದು ಎಂದು ಕನ್ನಡಕ್ಕೆ ಅನುವಾದ ತಪ್ಪಾಗಿ ಮಾಡಲಾದೆ. ಇದರಲ್ಲಿ ತಪ್ಪಾಗಿರೋದು ಎಂದರೆ ಅಮೆರಿಕದಲ್ಲಿ ರಾಷ್ಟ್ರಪತಿ ಇರುವುದಿಲ್ಲ. ಅಲ್ಲಿ ರಾಷ್ಟ್ರಾಧ್ಯಕ್ಷರು ಇರುತ್ತಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ