/newsfirstlive-kannada/media/post_attachments/wp-content/uploads/2025/01/JOB_EXAMS.jpg)
ಬೆಂಗಳೂರು: 384 ಕೆಎಎಸ್- ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ಸಂಬಂಧ ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್​​ಸಿ) ಮುಖ್ಯ ಪರೀಕ್ಷೆಯ ಸಂಭಾವ್ಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.
ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಪೂರ್ವಭಾವಿ ಮರು ಪರೀಕ್ಷೆಯನ್ನು 2024ರ ಡಿಸೆಂಬರ್ 29 ರಂದು ಕೆಪಿಎಸ್​ಸಿ ಪರೀಕ್ಷೆ ನಡೆಸಿತ್ತು. ಇದೀಗ ಮುಖ್ಯ ಪರೀಕ್ಷೆಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಇದರ ಜೊತೆಗೆ ಇಲಾಖೆಯಿಂದ ನಡೆಯುವ ಮುಂದಿನ ಪರೀಕ್ಷೆಗಳ ದಿನಾಂಕಗಳನ್ನು ರಿಲೀಸ್ ಮಾಡಲಾಗಿದೆ. ಹೀಗಾಗಿ ಕರ್ನಾಟಕ ಸರ್ಕಾದ ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡಿದಂತ ಅಭ್ಯರ್ಥಿಗಳು ಪೂರ್ವ ತಯಾರಿ ಮಾಡಿಕೊಳ್ಳುವುದು ಹಾಗೂ ಸುಮ್ಮನೇ ಸಮಯ ಕಳೆಯದೇ ಓದಿನ ಕಡೆಗೆ ಹೆಚ್ಚಿನ ಗಮನ ಕೊಡುವುದು ಉತ್ತಮ.
384 ಕೆಎಎಸ್ ಹುದ್ದೆಗಳ ಮುಖ್ಯ ಪರೀಕ್ಷೆಯ ಸಂಭಾವ್ಯ ವೇಳಾಪಟ್ಟಿ ಆಗಿದೆ. ಈ ದಿನಾಂಕಗಳಂದು ಏನಾದರೂ ಕೇಂದ್ರ ಅಥವಾ ರಾಜ್ಯ ಸರ್ಕಾರದ ಆಡಳಿತಾತ್ಮಕದಿಂದ ಸಮಸ್ಯೆ ಆಗದಿದ್ದರೇ ಇದೇ ತಾರೀಖಿನಂದೇ ಪರೀಕ್ಷೆ ನಡೆಸಲಾಗುತ್ತದೆ. 2023-24ರಲ್ಲಿ ಕರ್ನಾಟಕ ಸರ್ಕಾರದಡಿ ಇರುವ ಹುದ್ದೆಗಳಿಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಿದ್ದರೇ ಕೆಪಿಎಸ್​ಸಿ ವೆಬ್​ಸೈಟ್​​ಗೆ ಭೇಟಿ ಕೊಟ್ಟು ಪರಿಶೀಲನೆ ಮಾಡಿಕೊಳ್ಳಬಹುದು.
/newsfirstlive-kannada/media/post_attachments/wp-content/uploads/2024/10/EXAMS_PSI.jpg)
ಇದನ್ನೂ ಓದಿ: ಲವ್ ಬ್ರೇಕ್ ಅಪ್ ಆಗಿದ್ರೆ ಬೆಂಗಳೂರಿನ ಈ ಕಂಪನಿಯಲ್ಲಿ ಪಕ್ಕಾ ಉದ್ಯೋಗ.. ಲಿಂಕ್ ಇಲ್ಲಿದೆ!
2025 ಫೆಬ್ರುವರಿ, ಮಾರ್ಚ್, ಏಪ್ರಿಲ್ ಈ ತಿಂಗಳಲ್ಲಿ ಕೆಪಿಎಸ್​​ಸಿ ಇಂದ ಹೆಚ್ಚಿನ ಪರೀಕ್ಷೆಗಳು ನಡೆಯುವ ಸಾಧ್ಯತೆ ಇದೆ. ಈಗಾಗಲೇ 384 ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳ ಪೂರ್ವಭಾವಿ ಪರೀಕ್ಷೆಯ ಕೀ ಉತ್ತರಗಳನ್ನು ಜನವರಿ 30 ರಂದು ಅಂತಿಮ ಕೀ ಆನ್ಸರ್​​ಗಳನ್ನು ಬಿಡುಗಡೆ ಮಾಡಲಾಗಿದೆ. ಸದ್ಯದಲ್ಲೇ ಕೆಎಎಸ್ ಮೇನ್ ಇಕ್ಸಾಂ ಅಧಿಸೂಚನೆ ಹೊರ ಬೀಳಲಿದ್ದು, ಪೂರ್ವಭಾವಿಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ಮತ್ತೊಮ್ಮೆ ಅರ್ಜಿ ಸಲ್ಲಿಕೆ ಮಾಡಬೇಕಾಗುತ್ತದೆ.
384 ಕೆಎಎಸ್ ಹುದ್ದೆಗಳ ಸಂಭಾವ್ಯ ಪರೀಕ್ಷೆ ವೇಳಾಪಟ್ಟಿ
384 ಗೆಜೆಟೆಡ್ ಪ್ರೊಬೇಷನರ್ (ಗ್ರೂಪ್-ಎ & ಬಿ)
28 ಮಾರ್ಚ್​​ 2025
29 ಮಾರ್ಚ್​ 2025
01 ಏಪ್ರಿಲ್ 2025
02 ಏಪ್ರಿಲ್ 2025
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us