ಗ್ರೂಪ್​ ಸಿ ಹುದ್ದೆಗಳಿಗೆ ಮತ್ತೆ ಅರ್ಜಿ ಆಹ್ವಾನಿಸಿದ KPSC.. ಯಾರು ಯಾರು ಅಪ್ಲೇ ಮಾಡಬಹುದು?

author-image
Bheemappa
Updated On
RDPR ಕರ್ನಾಟಕ ನೇಮಕಾತಿ.. ಜಿಲ್ಲಾ SMHM ಸಂಯೋಜಕ ಹುದ್ದೆಗಳಿಗೆ ಅರ್ಜಿ ಆಹ್ವಾನ
Advertisment
  • ಕರ್ನಾಟಕ ಲೋಕ ಸೇವಾ ಆಯೋಗದಿಂದ ಕಾಲ್​ಫಾರ್ಮ್
  • ಈ ಮೊದಲು ಆಹ್ವಾನಿಸಿರುವ ಹುದ್ದೆಗೆ ಮತ್ತೆ ಅರ್ಜಿ ಆಹ್ವಾನ
  • ಒಟ್ಟು ಹುದ್ದೆಗಳು ಎಷ್ಟು, ಈಗ ಮತ್ತೆ ಏಕೆ ಅರ್ಜಿ ಆಹ್ವಾನಿಸಿದೆ?

ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್​ಸಿ)ವೂ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಸಾರ್ವಜನಿಕ ಗ್ರಂಥಾಲಯ ಇಲಾಖೆಗಳಲ್ಲಿ ಖಾಲಿ ಇರುವಂತ ಕೆಲಸಗಳಿಗೆ ಮತ್ತೆ ಅರ್ಜಿಗಳನ್ನ ಆಹ್ವಾನ ಮಾಡಿದೆ. ಹೈದರಾಬಾದ್ ಕರ್ನಾಟಕ (ಹೆಚ್​ಕೆ) ಹಾಗೂ ನಾನ್ ಹೆಚ್​ಕೆ ಈ ಎರಡು ಸೇರಿ ಒಟ್ಟು 76 ಹುದ್ದಗಳು ಇವೆ. ಹೀಗಾಗಿ ಈ ಮೊದಲು ಅಪ್ಲೇ ಮಾಡದಿರುವವರು ಹಾಗೂ ಹೊಸದಾಗಿ ಅರ್ಜಿ ಹಾಕುವವರು ಈ ಅವಕಾಶವನ್ನು ಉಪಯೋಗಿಸಿಕೊಳ್ಳಬಹುದು.

ಈ ಮೊದಲು ಮಾರ್ಚ್​​ನಲ್ಲಿ (2024) ಕೆಪಿಎಸ್​ಸಿ ಈ ಹುದ್ದೆಗಳಿಗೆ ಅರ್ಜಿಗಳನ್ನ ಆಹ್ವಾನ ಮಾಡಿತ್ತು. ಆದರೆ ರಾಜ್ಯ ಸರ್ಕಾರ ವಯೋಮಿತಿಯನ್ನು ಗರಿಷ್ಠ 3 ವರ್ಷಕ್ಕೆ ಹೆಚ್ಚಳ ಮಾಡಿದ್ದರಿಂದ ಇದೀಗ ಮತ್ತೆ ಅರ್ಜಿಗಳನ್ನ ಆಹ್ವಾನ ಮಾಡಲಾಗಿದೆ. ಕೆಪಿಎಸ್​ಸಿ ಲಿಂಕ್ ಅನ್ನು ಮತ್ತೆ ಚಾಲನೆ ಮಾಡಿದ್ದು ಇದರ ಮೂಲಕ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಬಹುದು. ಅಲ್ಲದೇ ಈ ಮೊದಲು ಶುಲ್ಕ ಪಾವತಿ ಮಾಡಲು ವಿಫಲವಾದ ಅಭ್ಯರ್ಥಿಗಳು ಹೊಸದಾಗಿ ಅರ್ಜಿ ಸಲ್ಲಿಕೆ ಮಾಡಬಹುದು.

ಇದನ್ನೂ ಓದಿ: KPTCL ಹುದ್ದೆಗಳಿಗೆ ಯಾವ್ಯಾವ ಸ್ಪರ್ಧೆ ಇವೆ.. ಎಷ್ಟು ಮೀಟರ್ ಎತ್ತರದ ಕರೆಂಟ್ ಕಂಬ ಏರಬೇಕು?

ರಾಜ್ಯ ಸಿವಿಲ್ ಸೇವೆಗಳಲ್ಲಿನ ವಿವಿಧ ಇಲಾಖೆಗಳ ಗ್ರೂಪ್ ಸಿ ಹಾಗೂ ಬಿ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಈಗಾಗಲೇ ಅಧಿಸೂಚನೆ ಹೊರಡಿಸಲಾಗಿದೆ. ಮುಂದಿನ 1 ವರ್ಷದಲ್ಲಿ ಹೊರಡಿಸಲಿರುವ ಅಧಿಸೂಚನೆಗಳಿಗೆ ಸಂಬಂಧಿಸಿದಂತೆ ಎಲ್ಲಾ ಪ್ರವರ್ಗಗಳ ಅಭ್ಯರ್ಥಿಗಳಿಗೆ 1 ಬಾರಿಗೆ ಅನ್ವಯವಾಗುವಂತೆ ಗರಿಷ್ಠ ವಯೋಮಿತಿಯಲ್ಲಿ 03 ವರ್ಷಗಳ ಸಡಿಲಿಕೆಯನ್ನು ನೀಡಿ ಆದೇಶಿಸಲಾಗಿದೆ.

ಇದನ್ನೂ ಓದಿ: ಇನ್ಸ್‌ಪೆಕ್ಟರ್, ಹೆಡ್​ಕಾನ್​ಸ್ಟೆಬಲ್, ಕಾನ್​ಸ್ಟೆಬಲ್ ಹುದ್ದೆಗಳ ನೇಮಕಾತಿ.. ಅರ್ಜಿ ಯಾವಾಗ ಆರಂಭ?

publive-image

ಶೈಕ್ಷಣಿಕ ವಿದ್ಯಾರ್ಹತೆ

  • ಸಾರ್ವಜನಿಕ ಗ್ರಂಥಾಲಯ ಇಲಾಖೆ- ಲೈಬ್ರರಿ ಸೈನ್ಸ್‌ ಪದವಿ
  • ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ- ಕಾಮರ್ಸ್​, ಬ್ಯುಸಿನೆಸ್, ಸೈನ್ಸ್​, ಇಂಜಿನಿಯರಿಂಗ್ ಪದವಿ

ವಯೋಮಿತಿ ಸಡಿಲಿಕೆ

  • ಸಾಮಾನ್ಯ ಅರ್ಹತೆ- 35 ವರ್ಷದಿಂದ 38 ವರ್ಷಗಳು
  • ಪ್ರವರ್ಗ 2ಎ, 2ಬಿ, 3ಎ, 3ಬಿ- 38 ವರ್ಷದಿಂದ 41 ವರ್ಷಗಳು
  • ಪರಿಶಿಷ್ಟ ಜಾತಿ, ಪಂಗಡ, ಪ್ರ-1- 40 ವರ್ಷದಿಂದ 43 ವರ್ಷಗಳು

ಅರ್ಜಿ ಶುಲ್ಕ ಎಷ್ಟು ಇದೆ?

  • ಸಾಮಾನ್ಯ ವರ್ಗದವರಿಗೆ- 600 ರೂ.ಗಳು
  • ಹಿಂದುಳಿದ ಎಲ್ಲಾ ವರ್ಗದದವರು- 300 ರೂ.ಗಳು
  • ಎಸ್​​ಸಿ, ಎಸ್​ಟಿ ಪ್ರವರ್ಗ-1- ಶುಲ್ಕ ವಿನಾಯಿತಿ ಇದೆ

ಅರ್ಜಿ ಸಲ್ಲಿಕೆ ಮಾಡಲು ಕೊನೆ ದಿನಾಂಕ- 30/10/2024

ವಯೋಮಿತಿ ಹೊರತುಪಡಿಸಿ ಉಳಿದಂತೆ ಈ ಮೊದಲು ರಿಲೀಸ್ ಮಾಡಲಾದ ಅಧಿಸೂಚನೆಗಳಲ್ಲಿ ಇದ್ದಂತಹ ಎಲ್ಲ ಮಾಹಿತಿ/ವಿವರಗಳು ಯಥಾವತ್ತಾಗಿ ಅನ್ವಯ ಆಗುತ್ತವೆ. ಹೆಚ್ಚಿನ ಮಾಹಿತಿಗಾಗಿ ಈ ಮೊದಲು ಬಿಡುಗಡೆ ಮಾಡಲಾದ ಅಧಿಸೂಚನೆಯನ್ನು ಅಭ್ಯರ್ಥಿಗಳು ಗಮನಿಸಬೇಕು.

ಪ್ರಮುಖವಾದ ಲಿಂಕ್-https://kpsc.kar.nic.in/Corrigendum%20HK%20%20Degree%20level%20posts.pdf

https://kpsc.kar.nic.in/Corrigendum%20RPC%20Degree%20level%20posts.pdf

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment