KPSC ಇಂದ ಕೃಷಿ ಇಲಾಖೆಯ 273 ಉದ್ಯೋಗಗಳಿಗೆ ಮತ್ತೆ ಅರ್ಜಿ ಆಹ್ವಾನ

author-image
Bheemappa
Updated On
ಕರ್ನಾಟಕ ಕೃಷಿ ಮಾರಾಟ ಇಲಾಖೆ ಹುದ್ದೆಗಳಿಗೆ ಶೀಘ್ರವೇ ಅಧಿಸೂಚನೆ.. ಯಾವ್ಯಾವ ಉದ್ಯೋಗಗಳು?
Advertisment
  • ಅರ್ಜಿ ಸಲ್ಲಿಕೆ ಮಾಡುವವರು ಶುಲ್ಕ ಎಷ್ಟು ಪಾವತಿ ಮಾಡಬೇಕು?
  • ಅಭ್ಯರ್ಥಿಗಳ ಮನವಿಗೆ ಸ್ಪಂದಿಸಿರುವ ಲೋಕಸೇವಾ ಆಯೋಗ
  • ಕೃಷಿ ಇಲಾಖೆಯಲ್ಲಿ ಉದ್ಯೋಗ ಬಯಸುವವರು ಅರ್ಜಿ ಸಲ್ಲಿಸಿ

ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್​ಸಿ)ವು ಕೃಷಿ ಇಲಾಖೆಯ ಹೈದ್ರಾಬಾದ್ ಕರ್ನಾಟಕ ವೃಂದದಲ್ಲಿನ ಗ್ರೂಪ್​- ಬಿ ಉದ್ಯೋಗಗಳಿಗೆ ಈ ಹಿಂದೆ ಅರ್ಜಿ ಆಹ್ವಾನ ಮಾಡಿತ್ತು. 3 ಜನವರಿ 2025 ರಿಂದ 1 ಫೆಬ್ರುವರಿ 2025ರ ವರೆಗೆ ಅರ್ಜಿ ಅಲ್ಲಿಕೆಗೆ ಸಮಯ ನಿಗದಿ ಮಾಡಲಾಗಿತ್ತು. ಆದರೆ ಈ ವೇಳೆ ಅರ್ಜಿ ಸಲ್ಲಿಕೆ ಮಾಡಲು ತಾಂತ್ರಿಕ ತೊಂದರೆ ಆಗಿತ್ತು. ಇದರಿಂದ ಅರ್ಜಿ ಸಲ್ಲಿಕೆಗೆ ಅಭ್ಯರ್ಥಿಗಳು ಕಾಲಾವಕಾಶಕ್ಕೆ ಮನವಿ ಮಾಡಿದ್ದರು.

ಅಭ್ಯರ್ಥಿಗಳ ಮನವಿಗೆ ಸ್ಪಂದಿಸಿರುವ ಕೆಪಿಎಸ್​ಸಿ, ಅರ್ಜಿ ಸಲ್ಲಿಕೆಗೆ ದಿನಾಂಕ ವಿಸ್ತರಣೆ ಮಾಡಿ ಪ್ರಕಟಣೆ ಹೊರಡಿಸಿದೆ. ಹೀಗಾಗಿ ಈ ಕೃಷಿ ಇಲಾಖೆಯ ಹೈದ್ರಾಬಾದ್ ಕರ್ನಾಟಕ ವೃಂದದಲ್ಲಿನ ಗ್ರೂಪ್​- ಬಿ ಉದ್ಯೋಗಗಳಿಗೆ ಈ ಹಿಂದೆ ಯಾರೂ ಅಪ್ಲೇ ಮಾಡಿಲ್ಲವೋ ಅವರು ಈಗ ಅರ್ಜಿ ಸಲ್ಲಿಕೆ ಮಾಡಬಹುದು. ಸದ್ಯಕ್ಕೆ ಇನ್ನು ಒಂದು ವಾರ ಕಾಲಾವಕಾಶ ಇದೆ. ದಿನಾಂಕ 05 ಫೆಬ್ರುವರಿ 2025 ರಿಂದ 15 ಫೆಬ್ರುವರಿ 2025ರ ಒಳಗಾಗಿ ಅಭ್ಯರ್ಥಿಗಳು ಉದ್ಯೋಕ್ಕೆ ಆನ್​​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದು.

ಕೃಷಿ ಇಲಾಖೆಯ ಉದ್ಯೋಗದ ಹೆಸರು, ಎಷ್ಟು ಇವೆ?

ಕೃಷಿ ಅಧಿಕಾರಿ- 42 ಹುದ್ದೆಗಳು
ಸಹಾಯಕ ಕೃಷಿ ಅಧಿಕಾರಿ- 231 ಹುದ್ದೆಗಳು

ವಯೋಮಿತಿ
18 ರಿಂದ 43 ವರ್ಷಗಳು
ಎಲ್ಲ ವರ್ಗದವರಿಗೂ 3 ವರ್ಷ ವಯೋಮಿತಿ ಸಡಿಲಿಕೆ

ಇದನ್ನೂ ಓದಿKPSC ಮಹತ್ವದ ಸೂಚನೆ.. ಪರೀಕ್ಷೆಯಲ್ಲಿ ಇನ್ಮುಂದೆ ಅಭ್ಯರ್ಥಿಗಳು ಇದನ್ನು ಬಳಸುವಂತಿಲ್ಲ, ಏನದು?

publive-image

ವೇತನ ಶ್ರೇಣಿ ಎಷ್ಟು ಇದೆ?
ಕೃಷಿ ಅಧಿಕಾರಿ- 43,100 ರಿಂದ 83,900 ರೂಪಾಯಿಗಳು
ಸಹಾಯಕ ಕೃಷಿ ಅಧಿಕಾರಿ- 40,900 ರಿಂದ 78,200 ರೂಪಾಯಿಗಳು

ವಿದ್ಯಾರ್ಹತೆ
ಬಿಎಸ್​​ಸಿ (ಕೃಷಿ), ಬಿಎಸ್​​ಸಿ (ಆನರ್ಸ್), ಬಿಟೆಕ್,

ಅರ್ಜಿ ಶುಲ್ಕ ಎಷ್ಟು ಇದೆ?

  • ಸಾಮಾನ್ಯ ಅಭ್ಯರ್ಥಿಗಳಿಗೆ- 600 ರೂಪಾಯಿ
  • ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ- 300 ರೂ.
  • ಮಾಜಿ ಸೈನಿಕ ಅಭ್ಯರ್ಥಿಗಳಿಗೆ- 50 ರೂಪಾಯಿ
  • ಎಸ್​ಸಿ, ಎಸ್​​ಟಿ, ಪ್ರವರ್ಗ-1, ವಿಶೇಷ ಚೇತನ ಅಭ್ಯರ್ಥಿಗಳಿಗೆ- ಇಲ್ಲ

ಆಯ್ಕೆ ವಿಧಾನ
ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಡೆದ ಅಂಕಗಳ ಶೇಕಡಾವಾರು ಆಧಾರದ ಮೇಲೆ
ಹಾಗೂ ಚಾಲ್ತಿಯಲ್ಲಿರುವ ಮೀಸಲಾತಿ ಆಧಾರದ ಮೇಲೆ

ಸ್ಪರ್ಧಾತ್ಮಕ ಪರೀಕ್ಷಾ ವಿಧಾನ
ಸಾಮಾನ್ಯ ಪತ್ರಿಕೆ- 300 ಅಂಕಗಳಿಗೆ ಒಂದೂವರೆ ಗಂಟೆ ಸಮಯ
ನಿರ್ದಿಷ್ಟ ಪತ್ರಿಕೆ- 300 ಅಂಕಗಳಿಗೆ ಎರಡು ಗಂಟೆ ಸಮಯ
ಕನ್ನಡ ಭಾಷಾ ಪರೀಕ್ಷೆ

ಸಂಪೂರ್ಣ ಮಾಹಿತಿ; https://www.kpsc.kar.nic.in/AAO%20-%20AO_HK_Notification.pdf
ದಿನಾಂಕ ವಿಸ್ತರಣೆಯ ಮಾಹಿತಿ; https://www.kpsc.kar.nic.in/Ao_AAO_HK%20corrigendum.pdf

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment