/newsfirstlive-kannada/media/post_attachments/wp-content/uploads/2025/02/JOB_EXAMS-1.jpg)
ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್ಸಿ) ಕರ್ನಾಟಕ ರಾಜ್ಯದ ಒಂದು ಸರ್ಕಾರಿ ಸಂಸ್ಥೆಯಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ರಾಜ್ಯ ಸರ್ಕಾರಿ ವಿವಿಧ ಉದ್ಯೋಗಗಳಿಗೆ ಅಭ್ಯರ್ಥಿಗಳನ್ನು ನೇಮಕ ಮಾಡುವ ಜವಾಬ್ದಾರಿ ಹೊಂದಿರುತ್ತದೆ. ಸದ್ಯ ಈ ಆಯೋಗವು ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಹೊಸ ಪ್ರಕಟಣೆಯನ್ನು ಹೊರಡಿಸಿದೆ.
ಅಭ್ಯರ್ಥಿಗಳಿಗೆ ಈವರೆಗೆ ನಡೆಸಲಾದ ಪರೀಕ್ಷೆಗಳಲ್ಲಿ ಕಪ್ಪು ಬಣ್ಣದ ಬಾಲ್ ಪಾಯಿಂಟ್ ಪೆನ್ನಿನಿಂದ ಪರೀಕ್ಷೆ ಬರೆಯಬೇಕು ಎಂದು ಸೂಚಿಸಲಾಗಿತ್ತು. ಆದರೆ ಈಗ ಇದರಲ್ಲಿ ಬದಲಾವಣೆ ಮಾಡಲಾಗಿದ್ದು ಕರ್ನಾಟಕ ಲೋಕಸೇವಾ ಆಯೋಗವು ಇದೇ ಫೆಬ್ರುವರಿ 16 ರಿಂದ ನಡೆಸುವ ಯಾವುದೇ ಪರೀಕ್ಷೆಯಲ್ಲಿ ಕಪ್ಪು ಬಣ್ಣದ ಬಾಲ್ ಪಾಯಿಂಟ್ ಪೆನ್ನು ಬಳಕೆ ಮಾಡುವಂತಿಲ್ಲ ಎಂದು ತಿಳಿಸಿದೆ.
ಇದನ್ನೂ ಓದಿ: ನ್ಯಾಯಾಲಯದಲ್ಲಿ ಉದ್ಯೋಗ ಅವಕಾಶ.. 241 ಸರ್ಕಾರಿ ಕೆಲಸಗಳಿಗೆ ಇಂದಿನಿಂದ ಅರ್ಜಿ ಆರಂಭ
ಕಪ್ಪು ಬಣ್ಣದ ಬಾಲ್ ಪಾಯಿಂಟ್ ಪೆನ್ನಿನ ಬದಲಿಗೆ ನೀಲಿ ಬಣ್ಣದ ಬಾಲ್ ಪಾಯಿಂಟ್ ಪೆನ್ನು ಅನ್ನು ಪರೀಕ್ಷೆಯಲ್ಲಿ ಬಳಕೆ ಮಾಡಬೇಕು. 2025ರಿಂದ ನಡೆಸುವ ಎಲ್ಲ ಪರೀಕ್ಷೆಗಳಲ್ಲಿ ನೀಲಿ ಬಣ್ಣದ ಬಾಲ್ ಪಾಯಿಂಟ್ ಪೆನ್ನು ಕಡ್ಡಾಯವಾಗಿರುತ್ತದೆ. ಈ ಪೆನ್ನು ಅನ್ನು ಮಾತ್ರ ಎಕ್ಸಾಂನಲ್ಲಿ ಅಭ್ಯರ್ಥಿಗಳು ಬಳಸತಕ್ಕದ್ದು. ಇದರ ಬದಲಿಗೆ ಬೇರೆ ಯಾವುದಾದ್ರೂ ಪೆನ್ನು ಬಳಕೆ ಮಾಡಿದರೆ ಅಭ್ಯರ್ಥಿಗಳಿಗೆ ಉಪಯೋಗ ಇಲ್ಲ ಎಂದು ಕೆಪಿಎಸ್ಸಿ ಪ್ರಕಟಣೆಯಲ್ಲಿ ತಿಳಿಸಿದೆ.
ಕೆಪಿಎಸ್ಸಿ ಪ್ರಕಟಣೆ;https://www.kpsc.kar.nic.in/Pen.pdf
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ