/newsfirstlive-kannada/media/post_attachments/wp-content/uploads/2024/09/JOB-1.jpg)
ಸಾರಿಗೆ ಇಲಾಖೆಯ ಮೋಟಾರು ವಾಹನ ನಿರೀಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಅರ್ಜಿಗಳನ್ನು ಆಹ್ವಾನ ಮಾಡಿತ್ತು. ಸದ್ಯ ಇದೀಗ ಈ ಕೆಲಸಗಳಿಗೆ ವಯೋಮಿತಿಯನ್ನು ಹೆಚ್ಚಿಸಿ ಅರ್ಜಿ ಸಲ್ಲಿಕೆ ಮಾಡಲು ಮತ್ತೆ ಅವಕಾಶ ನೀಡಿದೆ. ಹೀಗಾಗಿ ಈ ಹಿಂದೆ ಅರ್ಜಿ ಸಲ್ಲಿಕೆ ಮಾಡದೇ ಇರುವವರು, ಶುಲ್ಕ ಪಾವತಿಗೆ ಸಮಯ ಸಿಗದವರು ಈ ಉದ್ಯೋಗಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದು.
ಕೆಪಿಎಸ್ಸಿ ಅರ್ಜಿ ಲಿಂಕ್ ಅನ್ನು ರಿಲೀಸ್ ಮಾಡಿದ್ದು ಅರ್ಹತೆ ಇರುವವರು, ಆಸಕ್ತರು ಆನ್‌ಲೈನ್ ಮೂಲಕ ಅಪ್ಲೇ ಮಾಡಿ. ಈ ಹಿಂದೆ ಹಲವು ಕಾರಣಗಳಿಂದ ಅರ್ಜಿ ಹಾಕದವರಿಗೆ ಇದೊಂದು ಸುವರ್ಣಾವಕಾಶ ಎನ್ನಬಹುದು. ಮೋಟಾರು ವಾಹನ ನಿರೀಕ್ಷಕರ ಹುದ್ದೆಗಳನ್ನ ಈ ವರ್ಷದ ಮಾರ್ಚ್ ನಲ್ಲೇ ಇಲಾಖೆ ಅಧಿಸೂಚನೆ ಹೊರಡಿಸಿತ್ತು. ಅರ್ಜಿ ಕೂಡ ಸ್ವೀಕಾರ ಮಾಡಿತ್ತು. ಆದರೆ ಈಗ ಸೆಪ್ಟೆಂಬರ್ 10 ರ ಆದೇಶದ ಪ್ರಕಾರ ಗರಿಷ್ಠ 3 ವರ್ಷ ವಯೋಮಿತಿ ಹೆಚ್ಚಿಸಿ, ಮತ್ತೆ ಅಪ್ಲೇ ಮಾಡಲು ಅವಕಾಶ ನೀಡಿದೆ.
ಉದ್ಯೋಗದ ಹೆಸರು ಹಾಗೂ ಎಷ್ಟು ಹುದ್ದೆಗಳು
ಮೋಟಾರು ವಾಹನ ನಿರೀಕ್ಷಕರು- 70
ಮೋಟಾರು ವಾಹನ ನಿರೀಕ್ಷಕರು- 06 (ಹೈದರಾಬಾದ್ ಕರ್ನಾಟಕ)
ಇದನ್ನೂ ಓದಿ:ಕಲ್ಯಾಣ ಕರ್ನಾಟಕ ಭಾಗದವರಿಗೆ ಉದ್ಯೋಗಾವಕಾಶ.. ಅರ್ಜಿ ಆಹ್ವಾನಿಸಿದ ಕರ್ನಾಟಕ ಲೋಕಾಯುಕ್ತ
ವಯಸ್ಸಿನ ಮಿತಿ ಏನಿದೆ?
18 ವರ್ಷದಿಂದ 43 ವರ್ಷಗಳು
ವಯೋಮಿತಿ ಸಡಿಲಿಕೆ
- ಎಸ್‌ಸಿ, ಎಸ್‌ಟಿ, ಪ್ರವರ್ಗ-1 ಅಭ್ಯರ್ಥಿಗಳಿಗೆ 40 ರಿಂದ 43 ವರ್ಷ
- ಸಾಮಾನ್ಯ ಅರ್ಹತೆ ಅಭ್ಯರ್ಥಿಗಳಿಗೆ 35 ರಿಂದ ಗರಿಷ್ಠ 38 ವರ್ಷ
- ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 38 ರಿಂದ 41 ವರ್ಷ
ಮಾಸಿಕ ಸಂಭಾವನೆ
33,450 ರಿಂದ 62,600 ರೂಪಾಯಿ
ವಿದ್ಯಾರ್ಹತೆ
ಎಸ್ಎಸ್ಎಲ್ಸಿ, ಬಿಇ, ಬಿಟೆಕ್ (ಆಟೋಮೊಬೈಲ್, ಮೆಕ್ಯಾನಿಕಲ್),
ಚಾಲನ ಪರವಾನಗಿ ಹೊಂದಿರಬೇಕು
ದೈಹಿಕವಾಗಿ ಸದೃಢವಾಗಿರಬೇಕು
ಅರ್ಜಿ ಶುಲ್ಕ ಎಷ್ಟು..?
- ಸಾಮಾನ್ಯ ವರ್ಗದ ಅಭ್ಯರ್ಥಿಗಳು- 600 ರೂಪಾಯಿಗಳು
- ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳು- 300 ರೂಪಾಯಿ
- ಎಸ್ಎಸಿ, ಎಸ್‌ಟಿ, ಪ್ರವರ್ಗ-1 ಅಭ್ಯರ್ಥಿಗಳು- ಶುಲ್ಕ ವಿನಾಯಿತಿ
- ಮಾಜಿ ಸೈನಿಕರಿಗೆ- 50 ರೂಪಾಯಿಗಳು
ಈ ದಿನಾಂಕ ನೆನಪಿಡಿ
- ಅರ್ಜಿ ಆರಂಭದ ದಿನಾಂಕ- 05 ನವೆಂಬರ್ 2024
- ಅರ್ಜಿ ಸಲ್ಲಿಸಲು ಕೊನೆ ದಿನಾಂಕ- 20 ನವೆಂಬರ್ 2024
- ಶುಲ್ಕ ಪಾವತಿಗೆ ಕೊನೆ ದಿನಾಂಕ- 20 ನವೆಂಬರ್ 2024
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ