KPSC ಇಂದ ಅಧಿಸೂಚನೆ.. ಕರ್ನಾಟಕ ಲೋಕೋಪಯೋಗಿ ಇಲಾಖೆಯ ಹುದ್ದೆಗಳಿಗೆ ಅರ್ಜಿ ಆಹ್ವಾನ

author-image
Bheemappa
Updated On
NCRTC ಅಲ್ಲಿ ಹಲವು ಉದ್ಯೋಗಗಳು.. ಎಷ್ಟು ಕೆಲಸಗಳು ಖಾಲಿ ಇವೆ?
Advertisment
  • ಯಾವ ಕೋರ್ಸ್ ಮಾಡಿದವ್ರು ಇವುಗಳಿಗೆ ಅರ್ಹ ಆಗಿರ್ತಾರೆ?
  • ಈ ಹಿಂದೆ ಕರೆಯಲಾದ ಉದ್ಯೋಗಗಳಿಗೆ ಮತ್ತೆ ಅರ್ಜಿ ಸ್ವೀಕಾರ
  • ಈಗಾಗಲೇ ಅರ್ಜಿಗಳನ್ನು ಸ್ವೀಕಾರ ಮಾಡುತ್ತಿರುವ ಕೆಪಿಎಸ್​ಸಿ

ಕರ್ನಾಟಕ ಲೋಕೋಪಯೋಗಿ ಇಲಾಖೆಯಲ್ಲಿ ಖಾಲಿ ಇರುವಂತಹ ಸಹಾಯಕ ಕಾರ್ಯಪಾಲಕ ಇಂಜಿನಿಯರ್ (ಗ್ರೇಡ್‌-1) ಗ್ರೂಪ್‌- ಎ ಹುದ್ದೆಗಳಿಗೆ ಮತ್ತೆ ಅರ್ಜಿ ಆಹ್ವಾನ ಮಾಡಲಾಗಿದೆ. 18/ 09 / 2024ರಂದು ಅಧಿಸೂಚನೆ ಹೊರಡಿಸಿ ಅರ್ಹ ಅಭ್ಯರ್ಥಿಗಳಿಂದ ಈಗಾಗಲೇ ಅರ್ಜಿಗಳನ್ನು ಸ್ವೀಕಾರ ಮಾಡಲಾಗಿತ್ತು. ಆದರೆ ಇದೀಗ ಇದೇ ಉದ್ಯೋಗಗಳಿಗೆ ಕರ್ನಾಟಕ ಲೋಕಸೇವಾ ಆಯೋಗ ಅರ್ಜಿಗಳನ್ನು ಮತ್ತೆ ಆಹ್ವಾನ ಮಾಡಿದೆ.

ಕೆಪಿಎಸ್‌ಸಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ (ಗ್ರೇಡ್‌-1) ಗ್ರೂಪ್‌- ಎ 30 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನ ಮಾಡಿದೆ. ಇದರಲ್ಲಿ 29 ಹುದ್ದೆಗಳು ಮುಕ್ತ ಸ್ಪರ್ಧೆ ಅಭ್ಯರ್ಥಿಗಳನ್ನು ಹಾಗೂ 01 ಕೆಲಸಕ್ಕೆ ಸೇವಾನಿರತ (ಈಗಾಗಲೇ ಕೆಲಸದಲ್ಲಿ ಇರುವವರು) ಸ್ಪರ್ಧೆ ಅಭ್ಯರ್ಥಿಯನ್ನು ಭರ್ತಿ ಮಾಡಲಾಗುತ್ತಿದೆ. ಈ ಉದ್ಯೋಗಗಳನ್ನು ವರ್ಗೀಕರಣ ಮಾಡಲಾಗಿದೆ.

ಹುದ್ದೆಗಳ ವರ್ಗೀಕರಣ ಹೀಗಿದೆ

  • ಸಾಮಾನ್ಯ ವರ್ಗ- 13
  • ಪರಿಶಿಷ್ಟ ಜಾತಿ- 05
  • ಪರಿಶಿಷ್ಟ ಪಂಗಡ- 02
  • ಪ್ರವರ್ಗ1- 01
  • ಪ್ರವರ್ಗ-2ಎ- 05
  • ಪ್ರವರ್ಗ-2ಬಿ- 01
  • ಪ್ರವರ್ಗ-3ಎ- 01
  • ಪ್ರವರ್ಗ-3ಬಿ- 01
  • ಸೇವಾನಿರತ (ಎಸ್​ಸಿ)- 01

ಒಟ್ಟು- ಉದ್ಯೋಗಗಳು- 30

ಇದನ್ನೂ ಓದಿ:ರೈಲ್ವೆ ಇಲಾಖೆಯಲ್ಲಿ ಬೃಹತ್ ನೇಮಕಾತಿ.. 32,438 ಉದ್ಯೋಗಗಳಿಗೆ ಈ ದಿನಾಂಕದಿಂದ ಅರ್ಜಿ ಆರಂಭ

publive-image

ವಿದ್ಯಾರ್ಹತೆ
ಇಂಜಿನಿಯರಿಂಗ್ ಪದವಿ- ಸಿವಿಲ್ ಇಂಜಿನಿಯರ್, ಕನ್​ಸ್ಟ್ರಕ್ಷನ್ ಟೆಕ್ನಲಾಜಿ, ಬಿಲ್ಡಿಂಗ್ ಅಂಡ್ ಕಂಸ್ಟ್ರಕ್ಷನ್ ಟೆಕ್ನಾಲಜಿ, ಸಿವಿಲ್ ಟೆಕ್ನಾಲಜಿ ಕಂಸ್ಟ್ರಕ್ಷನ್ ಟೆಕ್ನಾಲಜಿ, ಕಂಸ್ಟ್ರಕ್ಷನ್ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್, ಜಿಯೋಮೆಕಾನಿಕ್ಸ್‌ ಮತ್ತು ಸ್ಟ್ರಕ್ಚರ್ಸ್‌, ಸ್ಟ್ರಕ್ಚರಲ್ ಅಂಡ್ ಫೌಂಡೇಷನ್ ಇಂಜಿನಿಯರಿಂಗ್, ಸ್ಟ್ರಕ್ಚರಲ್ ಇಂಜಿನಿಯರಿಂಗ್ ಮತ್ತು ಕಂಸ್ಟ್ರಕ್ಷನ್ ಪದವಿ. ಇವುಗಳಲ್ಲಿ ಯಾವುದಾದರು ಒಂದನ್ನು ಪೂರ್ಣಗೊಳಿಸಿರಬೇಕು.

ಮಾಸಿಕ ವೇತನ ಶ್ರೇಣಿ- 83,700 ದಿಂದ 1,55,200 ರೂಪಾಯಿಗಳು

ಇತರೆ ಅರ್ಹತೆ
ಸೇವಾನಿರತ ಹುದ್ದೆ; ಸೇವಾನಿರತ ಹುದ್ದೆ ಸ್ಪರ್ಧೆಯ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ (ಗ್ರೇಡ್-1) ಅಥವಾ ಸಹಾಯಕ ಇಂಜಿನಿಯರ್ (ಗ್ರೇಡ್‌-2) ಅಥವಾ ಕಿರಿಯ ಇಂಜಿನಿಯರ್ ಆಗಿರಬೇಕು. ಯಾವುದೇ ಕೇಡರ್‌ನಲ್ಲಿ ಕನಿಷ್ಠ 5 ವರ್ಷ ಕೆಲಸ ಮಾಡಿರಬೇಕು. ಇಲಾಖೆ ವಯಸ್ಸು ನಿಗದಿ ಪಡಿಸಿಲ್ಲ. ಸೇವಾನಿರತ ಅಭ್ಯರ್ಥಿ, ಸಹ ಮುಕ್ತ ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಇರುತ್ತದೆ.

ಅರ್ಜಿ ಶುಲ್ಕ ಹೇಗಿದೆ?
ಸಾಮಾನ್ಯ ಅರ್ಹತೆ ಅಭ್ಯರ್ಥಿಗಳು- 600 ರೂಪಾಯಿ
ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳು- 300 ರೂಪಾಯಿ
ಎಸ್​ಸಿ, ಎಸ್​ಟಿ, ಪ್ರ-01, ಮಾಜಿ ಸೈನಿಕ, ವಿಶೇಷ ಚೇತನ ಶುಲ್ಕ ಇರಲ್ಲ

ಅರ್ಜಿ ಸಲ್ಲಿಕೆ ಮಾಡಲು ದಿನಾಂಕಗಳು
ಅರ್ಜಿ ಸಲ್ಲಿಕೆಯ ಆರಂಭದ ದಿನಾಂಕ- 20 ಜನವರಿ 2025
ಅರ್ಜಿ ಸಲ್ಲಿಕೆಯ ಕೊನೆ ದಿನಾಂಕ- 03 ಫೆಬ್ರವರಿ 2025

ಮಾಹಿತಿಗಾಗಿ ಲಿಂಕ್ -
https://www.kpsc.kar.nic.in/Corrigendum%20Notification%20RPC.pdf

ಅರ್ಜಿ ಸಲ್ಲಿಕೆಗೆ-https://kpsconline.karnataka.gov.in/HomePage/index.html

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment