/newsfirstlive-kannada/media/post_attachments/wp-content/uploads/2024/11/JOB_EXAMS_KPSC.jpg)
ರೇಷ್ಮೆ ಇಲಾಖೆ, ಕಾರ್ಮಿಕ ಇಲಾಖೆ ಮತ್ತು ಪೌರಾಡಳಿತ ಇಲಾಖೆ ಹುದ್ದೆಗಳಿಗೆ ನೇಮಕಾತಿಗೆ ಸಂಬಂಧಪಟ್ಟಂತೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಹೆಚ್ಚುವರಿ ಆಯ್ಕೆಪಟ್ಟಿಯನ್ನು ಬಿಡುಗಡೆ ಮಾಡಿದೆ.
ಕರ್ನಾಟಕ ಲೋಕಸೇವಾ ಆಯೋಗವು 2022ರಲ್ಲಿ ಈ ಮೂರು ಹುದ್ದೆಗಳಿಗೆ ಪರೀಕ್ಷೆಯನ್ನು ನಡೆಸಿತ್ತು. ಈ ವೇಳೆ ಅರ್ಜಿ ಸಲ್ಲಿಕೆ ಮಾಡಿ ಪರೀಕ್ಷೆ ಬರೆದಂತವರು ಈಗ ಪಟ್ಟಿಯಲ್ಲಿ ತಮ್ಮ ಹೆಸರು ಇದೆಯೇ ಎಂದು ಪರಿಶೀಲನೆ ಮಾಡಿಕೊಳ್ಳಬಹುದು. ಇನ್ನು ಪಟ್ಟಿಯನ್ನು ಯಾವ ರೀತಿ ಸರ್ಚ್ ಮಾಡುವುದು ಎನ್ನುವ ಲಿಂಕ್ ಇಲ್ಲಿದೆ.
2022ರ ಡಿಸೆಂಬರ್ನಲ್ಲಿ ಕಾರ್ಮಿಕ ಇಲಾಖೆಯಲ್ಲಿನ ಹುದ್ದೆಗಳ ಅಂತಿಮ ಆಯ್ಕೆಪಟ್ಟಿಯನ್ನು ಪ್ರಕಟಿಸಲಾಗಿತ್ತು. ಆದರೆ ಇದು ಸದರಿ ಪಟ್ಟಿ, ಹೆಚ್ಚುವರಿ ಪಟ್ಟಿಯಾಗಿದ್ದು, ಆಯ್ಕೆ ಪಟ್ಟಿ ಆಗಿರುವುದಿಲ್ಲ. ಕಾರ್ಮಿಕ ಇಲಾಖೆಯಲ್ಲಿನ ಹೈದರಾಬಾದ್ ಕರ್ನಾಟಕ ವೃಂದದ ಕಾರ್ಮಿಕ ನಿರೀಕ್ಷಕರ 6 ಅಭ್ಯರ್ಥಿಗಳ ಹೆಸರನ್ನು ಶಿಫಾರಸು ಮಾಡಲಾಗಿದೆ.
ಇದನ್ನೂ ಓದಿ:NHAIನಿಂದ ಉದ್ಯೋಗಗಳಿಗೆ ಅರ್ಜಿ ಆಹ್ವಾನ.. ಈ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ
ಮಾರ್ಚ್ 2022ರಂದು ಪೌರಾಡಳಿತ ನಿರ್ದೇಶನಾಲಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಎಲೆಕ್ಟ್ರೀಷಿಯನ್ ಗ್ರೇಡ್-2 ಹೈದರಾಬಾದ್ ಕರ್ನಾಟಕದ 10 ಹುದ್ದೆಗಳಿಗೆ ಅಧಿಸೂಚಿಸಲಾಗಿತ್ತು. ಬಳಿಕ ಪರೀಕ್ಷೆ ನಡೆದ ಮೇಲೆ ಅಂತಿಮ ಆಯ್ಕೆಪಟ್ಟಿಯನ್ನು ಮಾರ್ಚ್ 2024 ರಂದು ಇಲಾಖೆ ಪ್ರಕಟಿಸಿತ್ತು. ಈಗ ಸದರಿ ಹುದ್ದೆಗಳಿಗೆ ನಿಯಮಕ್ಕೆ ತಕ್ಕಂತೆ ಹೆಚ್ಚುವರಿ ಪಟ್ಟಿಯನ್ನು ಸಿದ್ಧಪಡಿಸಿ 8 ಅಭ್ಯರ್ಥಿಗಳ ಹೆಸರನ್ನು ಈ ಪಟ್ಟಿಯಲ್ಲಿ ನೀಡಲಾಗಿದೆ.
ರೇಷ್ಮೆ ವಿಸ್ತರಣಾಧಿಕಾರಿ 72 ಹುದ್ದೆಗಳಿಗೆ ಸಂಬಂಧಿಸಿದ ಅಂತಿಮ ಆಯ್ಕೆಪಟ್ಟಿಯನ್ನು 12 ಜುಲೈ 2024 ರಂದು ಇಲಾಖೆ ಪ್ರಕಟಣೆ ಮಾಡಿತ್ತು. ಮಾಹಿತಿಗಾಗಿ ಹೆಚ್ಚುವರಿ ಪಟ್ಟಿಯನ್ನು ಈಗ ಪ್ರಕಟಿಸಲಾಗಿದೆ. ಇದರಲ್ಲಿ 55 ಅಭ್ಯರ್ಥಿಗಳ ಹೆಸರುಗಳು ಇವೆ.
ಅಭ್ಯರ್ಥಿಗಳು ತಮ್ಮ ಹೆಸರನ್ನು ವೆಬ್ಸೈಟ್ನಲ್ಲಿ ಹುಡುಕುವುದು ಹೇಗೆ?
ಅಭ್ಯರ್ಥಿಗಳು ಈ ಲಿಂಕ್- https://www.kpsc.kar.nic.in/ ಕ್ಲಿಕ್ ಮಾಡಬೇಕು. ಪಟ್ಟಿಗಳು ಎನ್ನುವುದರ ಕ್ರಸರ್ ಹೋಗುತ್ತಿದ್ದಂತೆ ಮೂರು ಆಯ್ಕೆಗಳು ಬರುತ್ತವೆ. ಇದರಲ್ಲಿ ಆಯ್ಕೆ ಪಟ್ಟಿ ಎನ್ನುವದ ಮೇಲೆ ಕ್ರಸರ್ ಇಡುತ್ತಿದ್ದಂತೆ ಮತ್ತ ಮೂರು ಆಯ್ಕೆಗಳು ಸಿಗುತ್ತವೆ. ಇದರಲ್ಲಿ ಹೆಚ್ಚುವರಿ ಆಯ್ಕೆ ಪಟ್ಟಿಯನ್ನು ಕ್ಲಿಕ್ ಮಾಡಿದರೆ ಲಿಸ್ಟ್ ಲಭ್ಯವಾಗುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ