/newsfirstlive-kannada/media/post_attachments/wp-content/uploads/2024/10/JOBS_KPTCL.jpg)
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ಹಲವಾರು ಉದ್ಯೋಗಗಳನ್ನು ನೇಮಕಾತಿ ಮಾಡುತ್ತಿದೆ. ಈ ಸಂಬಂಧ ಅರ್ಹರಿಂದ ಅರ್ಜಿಗಳನ್ನು ಆಹ್ವಾನ ಮಾಡಿದೆ. ಆಸಕ್ತಿ ಇರುವ ಅಭ್ಯರ್ಥಿಗಳು ಈ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಂಡು ತದನಂತರ ಅಪ್ಲೇ ಮಾಡಬಹುದು. ರಾಜ್ಯದಲ್ಲಿ ಇರುವ ಎಲ್ಲ ವಿದ್ಯುತ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನ ತುಂಬಲಾಗುತ್ತಿದೆ.
ಕೆಪಿಟಿಸಿಎಲ್ ಹುದ್ದೆಗಳ ಅರ್ಜಿಗಳು ಸಂಪೂರ್ಣವಾಗಿ ಆನ್ಲೈನ್ನಲ್ಲಿ ಆಗಿದ್ದು ಆಫ್ಲೈನ್ನಿಂದ ಬರುವ ಹುದ್ದೆಗಳನ್ನು ಸ್ವೀಕಾರ ಮಾಡುವುದಿಲ್ಲ. ಅಭ್ಯರ್ಥಿಗಳು ಕಂಪ್ಯೂಟರ್ ಸೆಂಟರ್ಗೆ ಹೋಗಿ ಅಥವಾ ತಾವೇ ಸ್ವತಹ ಉದ್ಯೋಗಗಳಿಗೆ ಆನ್ಲೈನ್ ಮೂಲಕ ಅಪ್ಲೇ ಮಾಡಬಹುದು. ಬ್ಯಾಕ್ಲಾಗ್ ಹುದ್ದೆಗಳನ್ನೂ ಕಾಲ್ಫಾರ್ಮ್ ಮಾಡಲಾಗಿದೆ. ಈ ಹುದ್ದೆಗೆ ಸಂಬಂಧಿಸಿದ ಇತರೆ ಮಾಹಿತಿ ಈ ಕೆಳಗೆ ನೀಡಲಾಗಿದೆ. ಆಸಕ್ತಿ ಇರುವವರು ಇದನ್ನು ಕೊನೆವರೆಗೂ ಗಮನಿಸಿ. ಅರ್ಜಿ ಶುಲ್ಕ, ವೇತನ ಶ್ರೇಣಿ, ವಿದ್ಯಾರ್ಹತೆ ಸೇರಿ ಎಲ್ಲ ಮಾಹಿತಿ ಇಲ್ಲಿದೆ.
ವಿದ್ಯಾರ್ಹತೆ ಏನು..?
SSLC ಪೂರ್ಣಗೊಳಿಸಿರಬೇಕು
ಹುದ್ದೆಯ ಹೆಸರು ಹಾಗೂ ಎಷ್ಟು ಉದ್ಯೋಗಗಳು?
- ಕಿರಿಯ ಸ್ಟೇಷನ್ ಪರಿಚಾರಕ- 433
- ಕಿರಿಯ ಪವರ್ಮ್ಯಾನ್- 2542
- ಒಟ್ಟು ಉದ್ಯೋಗಗಳು- 2975
ಮಾಸಿಕ ಸಂಬಳ ಎಷ್ಟು ಇರುತ್ತದೆ?
28,550 ರಿಂದ 63,000 ರೂಪಾಯಿಗಳು
ಸಹನ ಶಕ್ತಿ ಪರೀಕ್ಷೆ ಯಾವ್ಯಾವು ಇವೆ?
- ಕರೆಂಟ್ ಕಂಬ ಹತ್ತುವುದು= 8 ಮೀಟರ್ ಎತ್ತರ ಕಡ್ಡಾಯ
- 100 ಮೀಟರ್ ರನ್ನಿಂಗ್= 14 ಸೆಕೆಂಡ್ಸ್
- ಸ್ಕಿಪ್ಪಿಂಗ್= 1 ನಿಮಿಷಕ್ಕೆ 50 ಬಾರಿ
- ಶಾಟ್ಪುಟ್(12 ಪೌಂಡ್ಗಳು)= 8 ಮೀಟರ್ ಎಸೆತ
- 800 ಮೀಟರ್ ಓಟ= 3 ನಿಮಿಷ
ಇದನ್ನೂ ಓದಿ: PUC ಮುಗಿಸಿದವರಿಗೆ ಶುಭ ಸುದ್ದಿ.. ವಿವಿಧ ಗ್ರಾಮ ಪಂಚಾಯತಿಗಳಲ್ಲಿ ಸರ್ಕಾರಿ ಉದ್ಯೋಗಗಳು!
ಅರ್ಜಿ ಶುಲ್ಕ ಎಷ್ಟು ಇರುತ್ತದೆ?
ಸಾಮಾನ್ಯ ವರ್ಗದ ಅಭ್ಯರ್ಥಿಗಳು- ಪ್ರವರ್ಗ-1, 2ಎ, 2ಬಿ, 3ಎ ಮತ್ತು 3ಬಿ- 614 ರೂಪಾಯಿ
ಎಸ್ಸಿ, ಎಸ್ಟಿ ಅಭ್ಯರ್ಥಿಗಳು- 378 ರೂಪಾಯಿ
ಅಭ್ಯರ್ಥಿಗಳು ಅಂಚೆ ಮೂಲಕ ಶುಲ್ಕ ಪಾವತಿ ಮಾಡಬೇಕು
ವಯೋಮಿತಿ
18 ರಿಂದ 40 ವರ್ಷದ ಒಳಗಿನವರಿಗೆ ಅವಕಾಶ
ಆಯ್ಕೆ ವಿಧಾನ-
ಸಹನ ಶಕ್ತಿ ಪರೀಕ್ಷೆಯ ಕನಿಷ್ಠ ಮೂರು ಸ್ಪರ್ಧೆಗಳಲ್ಲಿ ಅರ್ಹತೆ ಹೊಂದಿರುವ ಅಭ್ಯರ್ಥಿಗಳನ್ನು ಹಾಗೂ ಅವರು 10ನೇ ತರಗತಿಯಲ್ಲಿ ಪಡೆದ ಅಂಕಗಳನ್ನ ಪರಿಗಣಿಸಲಾಗುತ್ತದೆ. ಇವೆರಡರ ಶೇಕಡವಾರು ಅಂಕಗಳ ಜೇಷ್ಠತೆ ಆಧಾರದ ಮೇಲೆ ಸರ್ಕಾರದಲ್ಲಿ ಚಾಲ್ತಿಯಲ್ಲಿ ಇರುವ ಮೀಸಲಾತಿ ನಿಯಮಗಳನ್ನು ಪಾಲಿಸಿ ಆಯ್ಕೆ ಮಾಡಲಾಗುತ್ತದೆ.
ಮುಖ್ಯವಾದ ದಿನಾಂಕಗಳು
- ಅರ್ಜಿ ಸಲ್ಲಿಕೆ ಮಾಡಲು ಆರಂಭದ ದಿನಾಂಕ- 21-10-2024
- ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನಾಂಕ- 20-11-2024
- ಅರ್ಜಿ ಶುಲ್ಕ ಪಾವತಿ ಮಾಡಲು ಕೊನೆ ದಿನಾಂಕ- 25-11-2024
ಅರ್ಜಿ ಸಲ್ಲಿಕೆ ಮಾಡಲು ಲಿಂಕ್- https://kptcl.karnataka.gov.in
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ