/newsfirstlive-kannada/media/post_attachments/wp-content/uploads/2024/09/JOBS_GOVT.jpg)
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ಇಲಾಖೆ, ಖಾಲಿ ಇರುವಂತ ಹುದ್ದೆಗಳಿಗೆ ಈಗಾಗಲೇ ಅರ್ಜಿಗಳನ್ನು ಕರೆದಿದೆ. ಕಿರಿಯ ಸ್ಟೇಷನ್ ಪರಿಚಾರಕ, ಕಿರಿಯ ಪವರ್‌ಮ್ಯಾನ್ ಹುದ್ದೆ ಸೇರಿ 2,975 ಹುದ್ದೆಗಳನ್ನ ನೇಮಕ ಮಾಡಲು ಪ್ರಕಟಣೆ ಹೊರಡಿಸಿತ್ತು. ಈಗಾಗಲೇ ರಾಜ್ಯದ ಅಭ್ಯರ್ಥಿಗಳು ಅರ್ಜಿಗಳನ್ನ ಸಲ್ಲಿಕೆ ಮಾಡಿದ್ದಾರೆ. ಯಾರು ಅರರ್ಜಿಗಳನ್ನು ಸಲ್ಲಿಕೆ ಮಾಡಿಲ್ಲವೋ ಅವರು ಇನ್ನೂ 2 ದಿನದ ಒಳಗೆ ಅಪ್ಲೇ ಮಾಡಬೇಕು. 10ನೇ ತರಗತಿ ಪಾಸ್ ಆದಂತಹ 40 ವರ್ಷದ ಒಳಗಿನ ಅಭ್ಯರ್ಥಿಗಳು ಈ ಉದ್ಯೋಗಗಳಿಗೆ ಆನ್ಲೈನ್ ಮೂಲಕ ಅಪ್ಲೇ ಮಾಡಬಹುದಾಗಿದೆ.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಆಹ್ವಾನಿಸಿದ ಉದ್ಯೋಗಗಳಿಗೆ ಕೊನೆ ದಿನಾಂಕ ನವೆಂಬರ್ 20 ಆಗಿದ್ದು ಇನ್ನೇನು ಎರಡು ದಿನ ಮಾತ್ರ ಬಾಕಿ ಇದೆ. ಹೀಗಾಗಿ ಈ ಕೆಲಸಗಳಿಗೆ ಅಪ್ಲೇ ಮಾಡದೇ ಇರುವ ಅಭ್ಯರ್ಥಿಗಳು ತಕ್ಷಣ ಅರ್ಜಿ ಸಲ್ಲಿಕೆ ಮಾಡಬಹುದು. ಇನ್ನು ಅರ್ಜಿ ಶುಲ್ಕ ಪಾವತಿಯ ಕೊನೆ ದಿನಾಂಕ ನವೆಂಬರ್ 25 ಆಗಿದೆ.
/newsfirstlive-kannada/media/post_attachments/wp-content/uploads/2024/08/JOBS.jpg)
ಇಲಾಖೆ ನೀಡುವ ಸ್ಪರ್ಧೆಗಳಲ್ಲಿ ಕನಿಷ್ಠ 3 ಅನ್ನು ಆದರೂ ಅಭ್ಯರ್ಥಿಗಳು ಪಾಸ್ ಮಾಡಲೇಬೇಕು. ಮೂರರಲ್ಲಿ ಪಾಸ್ ಆಗಿದ್ದರೇ ಮುಂದಿನ ಹಂತದ ಆಯ್ಕೆಗೆ ಪರಿಗಣಿಸುತ್ತಾರೆ. ಎಸ್ಎಸ್ಎಲ್ಸಿ ಅಲ್ಲಿ ಪಡೆದಂತ ಅಂಕ ಬಹುಮುಖ್ಯವಾಗಿ ಇಲ್ಲಿ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. 10ನೇ ತರಗತಿಯಲ್ಲಿ ಗರಿಷ್ಠ ಅಂಕಗಳನ್ನು ಪಡೆದು ಈ ಕೆಳಗಿನ 3 ಟೆಸ್ಟ್ನಲ್ಲಿ ಉತ್ತಮ ಮಟ್ಟದಲ್ಲಿ ಪಾಸ್ ಆಗಿದ್ದರೆ ಆ ಅಭ್ಯರ್ಥಿಗೆ ಉದ್ಯೋಗದ ಹಾದಿ ಸುಲಭವಾಗಿರುತ್ತದೆ.
ಇದನ್ನೂ ಓದಿ:ಕರ್ನಾಟಕ ವಿದ್ಯುತ್ ಇಲಾಖೆಯಿಂದ ಕಾಲ್ಫಾರ್ಮ್.. 500, ಸಾವಿರ ಅಲ್ಲ 2 ಸಾವಿರಕ್ಕೂ ಹೆಚ್ಚು ಹುದ್ದೆಗಳು
ಈ ಕೆಲಸಗಳ ಜೊತೆಗೆ ಬ್ಯಾಕ್ಲಾಗ್ ಹುದ್ದೆಗಳನ್ನೂ ಭರ್ತಿ ಮಾಡಲಾಗುತ್ತಿದೆ. ಈ ಹುದ್ದೆಗೆ ಸಂಬಂಧಿಸಿದ ದೈಹಿಕ ಸಾಮರ್ಥ್ಯ ಪರೀಕ್ಷೆ, ಆಯ್ಕೆ ವಿಧಾನವನ್ನು ಹೇಗೆ ಮಾಡಲಾಗುತ್ತದೆ ಎಂಬುದರ ಮಾಹಿತಿ ಎಲ್ಲವೂ ಈ ಹಿಂದೆ ನೀಡಲಾಗಿತ್ತು. ಇದಕ್ಕೆ ಸಂಬಂಧಿಸಿದ ಲಿಂಕ್ಗಳನ್ನು ‘ಇದನ್ನೂ ಓದಿ’ನಲ್ಲಿ ನೀಡಲಾಗಿದೆ. ಲಿಂಕ್ ಅನ್ನು ಕ್ಲಿಕ್ ಮಾಡಿ ಅಭ್ಯರ್ಥಿಗಳು ಸಂಪೂರ್ಣ ಮಾಹಿತಿ ತಿಳಿದುಕೊಳ್ಳಬಹುದು. ಕೊನೆ ದಿನಾಂಕದ ಒಳಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಬೇಕು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us