/newsfirstlive-kannada/media/post_attachments/wp-content/uploads/2024/10/JOBS_KPTCL_1.jpg)
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) 2024ರ ಅಕ್ಟೋಬರ್ನಲ್ಲಿ 2,975 ಉದ್ಯೋಗಗಳಿಗೆ ಅರ್ಜಿಗಳನ್ನು ಇಲಾಖೆ ಕರೆದಿತ್ತು. ಸದ್ಯ ಈ ಉದ್ಯೋಗಗಳನ್ನು ಏಪ್ರಿಲ್ನ ಒಳಗೆ ನೇಮಕ ಮಾಡಲಾಗುತ್ತದೆ ಎಂದು ಇಂಧನ ಸಚಿವ ಕೆ.ಜೆ ಜಾರ್ಜ್ ಅವರು ಹೇಳಿದ್ದಾರೆ.
ವಿದ್ಯುತ್ ಪ್ರಸರಣ ನಿಗಮ ನಿಯಮಿತದಲ್ಲಿ ಉದ್ಯೋಗ ಭರ್ತಿ ಕುರಿತು ಮಾತನಾಡಿದ ಇಂಧನ ಸಚಿವ ಕೆ.ಜೆ ಜಾರ್ಜ್ ಅವರು, ಈಗಾಗಲೇ ಅರ್ಜಿ ಕರೆಯಲಾದ ಉದ್ಯೋಗಗಳನ್ನು ಶೀಘ್ರದಲ್ಲೇ ಅಂದರೆ ಏಪ್ರಿಲ್ನ ಒಳಗೆ ಭರ್ತಿ ಮಾಡಲಾಗುತ್ತದೆ. ಇಲಾಖೆಯಲ್ಲಿ ಖಾಲಿ ಇರುವಂತ ಕೆಲಸಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ಆರಂಭವಾಗಿದೆ. ಇಡೀ ರಾಜ್ಯದಲ್ಲಿ ಒಂದೇ ದಿನದಲ್ಲಿ ದೈಹಿಕ ಪರೀಕ್ಷೆ ನಡೆಸಲು ಅಧಿಕಾರಿಗಳ ಜೊತೆ ಚರ್ಚಿಸಿ ನಿರ್ಧರಿಸಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ:KPSC ಇಂದ ಅಧಿಸೂಚನೆ.. ಕರ್ನಾಟಕ ಲೋಕೋಪಯೋಗಿ ಇಲಾಖೆಯ ಹುದ್ದೆಗಳಿಗೆ ಅರ್ಜಿ ಆಹ್ವಾನ
ಈ ಹುದ್ದೆಗಳು ಆದ ಮೇಲೆ ಎಇಇ, ಜೆಇ ಸೇರಿದಂತೆ ಇತರೆ ಹುದ್ದೆಗಳನ್ನು ಹಂತ ಹಂತವಾಗಿ ತುಂಬುವ ಯೋಜನೆ ಇದೆ. ಇವಷ್ಟೇ ಅಲ್ಲದೇ ಇನ್ನಷ್ಟು ಉದ್ಯೋಗಗಳಿಗೆ ಅರ್ಜಿ ಆಹ್ವಾನ ಮಾಡುವ ಸಾಧ್ಯತೆ ಇದೆ. ಆ ಬಗ್ಗೆ ಈಗಲೇ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಸಚಿವರು ಹೇಳಿದ್ದಾರೆ.
ಸದ್ಯ ಸಚಿವರು ಮಾತನಾಡಿರುವ ಉದ್ಯೋಗಗಳನ್ನು ಈ ಹಿಂದೆ ಅಂದರೆ 2024ರ ಅಕ್ಟೋಬರ್ 21 ರಂದು ಅರ್ಜಿ ಆರಂಭಿಸಿ, ನವೆಂಬರ್ 20ಕ್ಕೆ ಅರ್ಜಿ ಕೊನೆಗೊಂಡಿದ್ದವು. ಕಿರಿಯ ಸ್ಟೇಷನ್ ಪರಿಚಾರಕ ಹುದ್ದೆ 433, ಕಿರಿಯ ಪವರ್ಮ್ಯಾನ್ ಉದ್ಯೋಗಗಳು 2542 ಸೇರಿ ಒಟ್ಟು 2975 ಉದ್ಯೋಗಗಳಿಗೆ ಅರ್ಜಿ ಪ್ರಕ್ರಿಯೆ ಈಗಾಗಲೇ ಮುಗಿದಿದೆ.
ಹುದ್ದೆಯ ಬಗ್ಗೆ ಪೂರ್ಣ ಮಾಹಿತಿ-https://newsfirstlive.com/kptcl-department-has-invited-applications-for-2975-vacancies/
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ