Advertisment

KPTCL ಹುದ್ದೆಗಳಿಗೆ ಯಾವ್ಯಾವ ಸ್ಪರ್ಧೆ ಇವೆ.. ಎಷ್ಟು ಮೀಟರ್ ಎತ್ತರದ ಕರೆಂಟ್ ಕಂಬ ಏರಬೇಕು?

author-image
Bheemappa
Updated On
Bharti Rallyಯಲ್ಲಿ ನೇರ ನೇಮಕಾತಿ, 2 ಸಾವಿರಕ್ಕೂ ಅಧಿಕ ಹುದ್ದೆಗಳು.. 8th, SSLC, PUC ಆದವ್ರಿಗೆ ಚಾನ್ಸ್
Advertisment
  • ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಲ್ಲಿ ಆಯ್ಕೆ ವಿಧಾನ ಹೇಗೆ?
  • 40 ವರ್ಷದ ಒಳಗಿನ ಅಭ್ಯರ್ಥಿಗಳು ಇದಕ್ಕೆ ಅಪ್ಲೇ ಮಾಡಬಹುದು
  • 3 ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಪಾಸ್ ಆಗಲೇಬೇಕಾ, ಇಲ್ವಾ..?

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್​) ಇಲಾಖೆ ಖಾಲಿ ಇರುವಂತ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಖಾಲಿ ಇರುವಂತ ಕಿರಿಯ ಸ್ಟೇಷನ್‌ ಪರಿಚಾರಕ, ಕಿರಿಯ ಪವರ್‌ಮ್ಯಾನ್‌ ಸೇರಿ ಒಟ್ಟು 2975 ಹುದ್ದೆಗಳನ್ನ ನೇಮಕ ಮಾಡಲು ಪ್ರಕಟಣೆ ಹೊರಡಿಸಿದೆ. 10ನೇ ತರಗತಿ ಪಾಸ್ ಆದಂತಹ 40 ವರ್ಷದ ಒಳಗಿನ ಅಭ್ಯರ್ಥಿಗಳು ಇದಕ್ಕೆ ಆನ್​​ಲೈನ್ ಮೂಲಕ ಅಪ್ಲೇ ಮಾಡಬಹುದು.

Advertisment

ಇವುಗಳ ಜೊತೆಗೆ ಬ್ಯಾಕ್​​ಲಾಗ್ ಹುದ್ದೆಗಳನ್ನೂ ಕಾಲ್​​ಫಾರ್ಮ್ ಮಾಡಲಾಗಿದೆ. ಈ ಹುದ್ದೆಗೆ ಸಂಬಂಧಿಸಿದ ಪಿಸಿಕಲ್​ನಲ್ಲಿ ಯಾವ ರೀತಿ ಇರುತ್ತದೆ ಹಾಗೂ ಆಯ್ಕೆ ವಿಧಾನವನ್ನು ಹೇಗೆ ಮಾಡಲಾಗುತ್ತದೆ ಎಂಬುದರ ಮಾಹಿತಿ ಇಲ್ಲಿ ನೀಡಲಾಗಿದೆ. ಇದಕ್ಕೆ ಸಂಬಂಧಿಸಿದ ಪ್ರಮುಖ ದಿನಾಂಕಗಳ ಮಾಹಿತಿ ಇಲ್ಲಿ ನೀಡಲಾಗಿದೆ.

ಸಹನ ಶಕ್ತಿ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಈ ಕೆಳಗಿನ ಸ್ಪರ್ಧೆಗಳಲ್ಲಿ ಕನಿಷ್ಠ 3 ಅನ್ನು ಆದರೂ ಪಾಸ್ ಮಾಡಲೇಬೇಕು. ಮೂರರಲ್ಲಿ ಪಾಸ್ ಆಗಿದ್ದರೇ ಮುಂದಿನ ಹಂತದ ಆಯ್ಕೆಗೆ ಪರಿಗಣಿಸುತ್ತಾರೆ. ಅಲ್ಲದೇ ಎಸ್​ಎಸ್​ಎಲ್​​ಸಿ ಅಲ್ಲಿ ಪಡೆದಂತ ಅಂಕಗಳನ್ನು ಬಹುಮುಖ್ಯವಾಗಿ ಇಲ್ಲಿ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. 10ನೇ ತರಗತಿಯಲ್ಲಿ ಗರಿಷ್ಠ ಅಂಕಗಳನ್ನು ಪಡೆದು ಈ ಕೆಳಗಿನ 3 ಟೆಸ್ಟ್​ನಲ್ಲಿ ಉತ್ತಮ ಮಟ್ಟದಲ್ಲಿ ಪಾಸ್ ಆಗಿದ್ದರೆ ಆ ಅಭ್ಯರ್ಥಿಗೆ ಉದ್ಯೋಗದ ಹಾದಿ ಸುಲಭ. ಒಂದು ವೇಳೆ ಎಸ್​ಎಸ್​ಎಲ್​​ಸಿ ಅಲ್ಲಿ ಕಡಿಮೆ ಅಂಕ ಪಡೆದರು ಈ ಸ್ಪರ್ಧೆಗಳಲ್ಲಿ ವೇಗವಾಗಿ ಹೆಚ್ಚು ಸಾಧನೆಯನ್ನ ಮಾಡಿದರೆ ಉದ್ಯೋಗದ ಭರವಸೆ ಇಡಬಹುದು.

ಇದನ್ನೂ ಓದಿ: ಕರ್ನಾಟಕ ವಿದ್ಯುತ್ ಇಲಾಖೆಯಿಂದ ಕಾಲ್​ಫಾರ್ಮ್​.. 500, ಸಾವಿರ ಅಲ್ಲ 2 ಸಾವಿರಕ್ಕೂ ಹೆಚ್ಚು ಹುದ್ದೆಗಳು

Advertisment

publive-image

ಯಾವ್ಯಾವ ಸ್ಪರ್ಧೆ ಇವೆ (ಸಹನ ಶಕ್ತಿ ಪರೀಕ್ಷೆ)?

  • ಕರೆಂಟ್ ಕಂಬ ಹತ್ತುವುದು= 8 ಮೀಟರ್ ಎತ್ತರ ಕಡ್ಡಾಯ
  • 100 ಮೀಟರ್ ರನ್ನಿಂಗ್= 14 ಸೆಕೆಂಡ್ಸ್
  • ಸ್ಕಿಪ್ಪಿಂಗ್= 1 ನಿಮಿಷಕ್ಕೆ 50 ಬಾರಿ
  • ಶಾಟ್​​ಪುಟ್​(12 ಪೌಂಡ್​ಗಳು)= 8 ಮೀಟರ್ ಎಸೆತ
  • 800 ಮೀಟರ್ ಓಟ= 3 ನಿಮಿಷ

ಆಯ್ಕೆ ವಿಧಾನ-
ಸಹನ ಶಕ್ತಿ ಪರೀಕ್ಷೆಯ ಕನಿಷ್ಠ ಮೂರು ಸ್ಪರ್ಧೆಗಳಲ್ಲಿ ಅಭ್ಯರ್ಥಿಗಳು ಅರ್ಹತೆ ಪಡೆಯಲೇಬೇಕು. ಇಲ್ಲಿ ಅರ್ಹತೆ ಪಡೆದ ಆಧಾರದ ಮೇಲೆ ಅಂಕಗಳನ್ನು ನಿರ್ಧರಿಸಲಾಗುತ್ತದೆ. ಇಲ್ಲಿ ಪಡೆದ ಅಂಕಗಳು ಹಾಗೂ ಎಸ್​ಎಸ್​ಎಲ್​ಸಿಯಲ್ಲಿ ಪಡೆದ ಅಂಕಗಳನ್ನು ಪರಿಗಣಿಸಲಾಗುತ್ತದೆ. ಇವೆರಡರ ಶೇಕಡವಾರು ಅಂಕಗಳ ಜೇಷ್ಠತಾ ಆಧಾರದ ಮೇಲೆ ಸರ್ಕಾರದಲ್ಲಿ ಚಾಲ್ತಿಯಲ್ಲಿ ಇರುವ ಮೀಸಲಾತಿ ನಿಯಮಗಳನ್ನು ಪಾಲಿಸಿ ಉದ್ಯೋಗಕ್ಕೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಹುದ್ದೆಗೆ ಸಂಬಂಧಿಸಿದ ದಿನಾಂಕಗಳು

  • ಅರ್ಜಿ ಸಲ್ಲಿಕೆ ಮಾಡಲು ಆರಂಭದ ದಿನಾಂಕ- 21-10-2024
  • ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನಾಂಕ- 20-11-2024
  • ಅರ್ಜಿ ಶುಲ್ಕ ಪಾವತಿ ಮಾಡಲು ಕೊನೆ ದಿನಾಂಕ- 25-11-2024
  • ಅರ್ಜಿ ಸಲ್ಲಿಕೆ ಮಾಡಲು ಲಿಂಕ್- https://kptcl.karnataka.gov.in
Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment