Advertisment

PWD; ಲೋಕೋಪಯೋಗಿ ಇಲಾಖೆಯ ಹುದ್ದೆಗಳ ಆಹ್ವಾನ.. ಇನ್ನೊಂದಿನ ಮಾತ್ರ ಅರ್ಜಿ ಸಲ್ಲಿಕೆಗೆ ಅವಕಾಶ

author-image
Bheemappa
Updated On
ESIC ಆಸ್ಪತ್ರೆಯಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಪರೀಕ್ಷೆ ಇಲ್ಲ.. ಸ್ಯಾಲರಿ ಮಾತ್ರ ಲಕ್ಷ ಲಕ್ಷ ರೂಪಾಯಿ
Advertisment
  • ಇಲಾಖೆಯು ಎಷ್ಟು ಉದ್ಯೋಗಗಳನ್ನು ಆಹ್ವಾನ ಮಾಡಿದೆ?
  • ಅರ್ಜಿಗಳನ್ನು ಆಹ್ವಾನ ಮಾಡಿರುವ ಲೋಕ ಸೇವಾ ಯೋಗ
  • ಅಂತಿಮ ದಿನಾಂಕದ ಒಳಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕು

ಕರ್ನಾಟಕ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ (ಗ್ರೇಡ್‌-1) ಗ್ರೂಪ್‌- ಎ ಹುದ್ದೆಗಳಿಗೆ ಕೆಪಿಎಸ್​ಸಿ ಮತ್ತೆ ಅರ್ಜಿ ಆಹ್ವಾನ ಮಾಡಿತ್ತು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡುವ ದಿನಗಳು ಮುಗಿಯುತ್ತ ಬರುತ್ತಿದ್ದು ನಾಳೆ ಅಂದರೆ ಫೆಬ್ರುವರಿ 03 ರಂದು ಕೊನೆ ದಿನವಾಗಿದೆ. ಹೀಗಾಗಿ ಈ ಅರ್ಜಿ ಸಲ್ಲಿಕೆ ಮಾಡದೇ ಇರುವವರು ನಾಳೆಯ ಒಳಗಾಗಿ ಅಪ್ಲೇ ಮಾಡಬಹುದು.

Advertisment

2024ರ ಸೆಪ್ಟೆಂಬರ್​ 18 ರಂದು ಅಧಿಸೂಚನೆ ಹೊರಡಿಸಿ ಅರ್ಜಿ ಸ್ವೀಕಾರ ಮಾಡಿತ್ತು. ಮತ್ತೆ ಇದೇ ಉದ್ಯೋಗಗಳಿಗೆ ಕರ್ನಾಟಕ ಲೋಕಸೇವಾ ಆಯೋಗ ಅರ್ಜಿ ಆಹ್ವಾನಿಸಿತ್ತು. ಇದರ ದಿನಾಂಕ ಅಂತಿಮಗೊಳ್ಳುತ್ತಿದೆ. ಗ್ರೂಪ್‌- ಎ 30 ಹುದ್ದೆಗಳಿವೆ. ಇದರಲ್ಲಿ 29 ಹುದ್ದೆಗಳು ಮುಕ್ತ ಸ್ಪರ್ಧೆ ಅಭ್ಯರ್ಥಿಗಳನ್ನು ಹಾಗೂ 01 ಕೆಲಸಕ್ಕೆ ಸೇವಾನಿರತ (ಈಗಾಗಲೇ ಕೆಲಸದಲ್ಲಿ ಇರುವವರು) ಸ್ಪರ್ಧೆ ಅಭ್ಯರ್ಥಿಯನ್ನು ಭರ್ತಿ ಮಾಡಲಾಗುತ್ತಿದೆ.

ಈ ಹುದ್ದೆಗಳ ಜೊತೆ ಹೈದ್ರಾಬಾದ್-ಕರ್ನಾಟಕ ವೃಂದದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ (ಗ್ರೇಡ್-1) ಗ್ರೂಪ್- ಎ ವೃಂದದ 12 ಹುದ್ದೆಗಳನ್ನು ನೇಮಕಾತಿ ಮಾಡಲಾಗುತ್ತಿದೆ. 11 ಉದ್ಯೋಗಗಳಿಗೆ ಮುಕ್ತ ಸ್ಪರ್ಧೆ ಅಭ್ಯರ್ಥಿಗಳು ಹಾಗೂ 01 ಹುದ್ದೆಗೆ ಸೇವಾನಿರತ (ಈಗಾಗಲೇ ಕೆಲಸದಲ್ಲಿರುವ) ಅಭ್ಯರ್ಥಿಯನ್ನ ಭರ್ತಿ ಮಾಡಲಾಗುತ್ತದೆ. ಹುದ್ದೆಗಳ ವರ್ಗೀಕರಣ ಹೈದ್ರಾಬಾದ್-ಕರ್ನಾಟಕಕ್ಕೆ ಪ್ರತ್ಯೇಕವಾಗಿದೆ.

ಇದನ್ನೂ ಓದಿ: ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಮಹತ್ವದ ಉದ್ಯೋಗ.. ಯಾರ್ ಯಾರಿಗೆ ಅವಕಾಶ ಇದೆ?

Advertisment

publive-image

ಮಾಸಿಕ ವೇತನ ಶ್ರೇಣಿ- 83,700 ದಿಂದ 1,55,200 ರೂಪಾಯಿಗಳು

ಹುದ್ದೆಗಳ ವರ್ಗೀಕರಣ ಹೀಗಿದೆ

  • ಸಾಮಾನ್ಯ ವರ್ಗ- 13
  • ಪರಿಶಿಷ್ಟ ಜಾತಿ- 05
  • ಪರಿಶಿಷ್ಟ ಪಂಗಡ- 02
  • ಪ್ರವರ್ಗ1- 01
  • ಪ್ರವರ್ಗ-2ಎ- 05
  • ಪ್ರವರ್ಗ-2ಬಿ- 01
  • ಪ್ರವರ್ಗ-3ಎ- 01
  • ಪ್ರವರ್ಗ-3ಬಿ- 01
  • ಸೇವಾನಿರತ (ಎಸ್​ಸಿ)- 01
  • ಹೈದ್ರಾಬಾದ್-ಕರ್ನಾಟಕ- 12

ಒಟ್ಟು- ಉದ್ಯೋಗಗಳು- 42

ಶೈಕ್ಷಣಿಕ ಅರ್ಹತೆ
ಇಂಜಿನಿಯರಿಂಗ್ ಪದವಿ- ಸಿವಿಲ್ ಇಂಜಿನಿಯರ್, ಕನ್​ಸ್ಟ್ರಕ್ಷನ್ ಟೆಕ್ನಲಾಜಿ, ಬಿಲ್ಡಿಂಗ್ ಅಂಡ್ ಕಂಸ್ಟ್ರಕ್ಷನ್ ಟೆಕ್ನಾಲಜಿ, ಸಿವಿಲ್ ಟೆಕ್ನಾಲಜಿ ಕಂಸ್ಟ್ರಕ್ಷನ್ ಟೆಕ್ನಾಲಜಿ, ಕಂಸ್ಟ್ರಕ್ಷನ್ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್, ಜಿಯೋಮೆಕಾನಿಕ್ಸ್‌ ಮತ್ತು ಸ್ಟ್ರಕ್ಚರ್ಸ್‌, ಸ್ಟ್ರಕ್ಚರಲ್ ಅಂಡ್ ಫೌಂಡೇಷನ್ ಇಂಜಿನಿಯರಿಂಗ್, ಸ್ಟ್ರಕ್ಚರಲ್ ಇಂಜಿನಿಯರಿಂಗ್ ಮತ್ತು ಕಂಸ್ಟ್ರಕ್ಷನ್ ಪದವಿ. ಇವುಗಳಲ್ಲಿ ಯಾವುದಾದರು ಒಂದನ್ನು ಪೂರ್ಣಗೊಳಿಸಿರಬೇಕು.

ಇತರೆ ಅರ್ಹತೆ
ಸೇವಾನಿರತ ಹುದ್ದೆ; ಸೇವಾನಿರತ ಹುದ್ದೆ ಸ್ಪರ್ಧೆಯ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ (ಗ್ರೇಡ್-1) ಅಥವಾ ಸಹಾಯಕ ಇಂಜಿನಿಯರ್ (ಗ್ರೇಡ್‌-2) ಅಥವಾ ಕಿರಿಯ ಇಂಜಿನಿಯರ್ ಆಗಿರಬೇಕು. ಯಾವುದೇ ಕೇಡರ್‌ನಲ್ಲಿ ಕನಿಷ್ಠ 5 ವರ್ಷ ಕೆಲಸ ಮಾಡಿರಬೇಕು. ಇಲಾಖೆ ವಯಸ್ಸು ನಿಗದಿ ಪಡಿಸಿಲ್ಲ. ಸೇವಾನಿರತ ಅಭ್ಯರ್ಥಿ, ಸಹ ಮುಕ್ತ ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಇರುತ್ತದೆ.

Advertisment

ಅರ್ಜಿ ಶುಲ್ಕ ಹೇಗಿದೆ?
ಸಾಮಾನ್ಯ ಅರ್ಹತೆ ಅಭ್ಯರ್ಥಿಗಳು- 600 ರೂಪಾಯಿ
ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳು- 300 ರೂಪಾಯಿ
ಎಸ್​ಸಿ, ಎಸ್​ಟಿ, ಪ್ರ-01, ಮಾಜಿ ಸೈನಿಕ, ವಿಶೇಷ ಚೇತನ ಶುಲ್ಕ ಇರಲ್ಲ

ಅರ್ಜಿ ಸಲ್ಲಿಕೆ ಮಾಡಲು ದಿನಾಂಕ
ಅರ್ಜಿ ಸಲ್ಲಿಕೆ ಮಾಡಲು ಕೊನೆ ದಿನಾಂಕ- 03 ಫೆಬ್ರುವರಿ 2025

ಮಾಹಿತಿಗಾಗಿ ಲಿಂಕ್ -
https://www.kpsc.kar.nic.in/Corrigendum%20Notification%20RPC.pdf

Advertisment

https://www.kpsc.kar.nic.in/Corrigendum%20Notification%20HK.pdf

ಅರ್ಜಿ ಸಲ್ಲಿಕೆಗೆ- https://kpsconline.karnataka.gov.in/HomePage/index.html

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment