ಕೃಷಿದೇವೋಭವ.. ನಾಳೆ ರೈತರಿಗಾಗಿ ನ್ಯೂಸ್ ​ಫಸ್ಟ್​​ ಕನ್ನಡ ವಾಹಿನಿಯಿಂದ ವಿಶೇಷ ಕಾರ್ಯಕ್ರಮ

author-image
admin
Updated On
ಕೃಷಿದೇವೋಭವ.. ನಾಳೆ ರೈತರಿಗಾಗಿ ನ್ಯೂಸ್ ​ಫಸ್ಟ್​​ ಕನ್ನಡ ವಾಹಿನಿಯಿಂದ ವಿಶೇಷ ಕಾರ್ಯಕ್ರಮ
Advertisment
  • ನ್ಯೂಸ್ ​ಫಸ್ಟ್​​ ಕನ್ನಡ ವಾಹಿನಿ, ರಾಜ್ಯ ಕೃಷಿ ಇಲಾಖೆಯ ಕಾರ್ಯಕ್ರಮ
  • ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ ಅವರಿಂದ ಉದ್ಘಾಟನೆ
  • ಸರ್ಕಾರದ ಯೋಜನೆ ಮತ್ತು ಸೌಕರ್ಯಗಳ ಕುರಿತು ರೈತರಿಗೆ ಸಂಪೂರ್ಣ ಮಾಹಿತಿ

ಕೃಷಿದೇವೋಭವ. ನ್ಯೂಸ್ ​ಫಸ್ಟ್​​ ಕನ್ನಡ ವಾಹಿನಿ, ರಾಜ್ಯ ಕೃಷಿ ಇಲಾಖೆ ಸಹಯೋಗದೊಂದಿಗೆ ಆಯೋಜಿಸುತ್ತಿರುವ ವಿಶೇಷ ಕಾರ್ಯಕ್ರಮ. ನಾಳೆಯೇ ಅಂದ್ರೆ ಮೇ 24, 2025ರ ಶನಿವಾರದಂದು ಬೆಂಗಳೂರಿನ ರಾಜಭವನ ರಸ್ತೆಯ ದಿ ಕ್ಯಾಪಿಟಲ್ ಹೋಟೆಲ್‌ನಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಬೆಳಗ್ಗೆ 10.30ಕ್ಕೆ ಕೃಷಿದೇವೋಭವ ಕಾರ್ಯಕ್ರಮದ ಉದ್ಘಾಟನೆ ನೆರವೇರಲಿದೆ. ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ, ಕೃಷಿ ಇಲಾಖೆ ಆಯುಕ್ತರಾದ ವೈ.ಎಸ್. ಪಾಟೀಲ್ ಹಾಗೂ ನ್ಯೂಸ್‌ ಫಸ್ಟ್ ಎಂಡಿ ಮತ್ತು ಸಿಇಒ, ಎಸ್‌.ರವಿಕುಮಾರ್‌ ಅವರು ಕಾರ್ಯಕ್ರಮವನ್ನ ಉದ್ದೇಶಿಸಿ ಮಾತನಾಡಲಿದ್ದಾರೆ.

publive-image

ಕೃಷಿದೇವೋಭವ ಕಾರ್ಯಕ್ರಮದಲ್ಲಿ ರೈತರ ಸಮಸ್ಯೆ, ಸವಾಲು, ಪರಿಹಾರ ಕುರಿತ ವಿಚಾರ ಸಂಕಿರಣ ನಡೆಯುತ್ತಿದೆ. ಸ್ವಾಶ್‌ ಬಯೋಟ್ನೆಕಾಲಜಿ ಕಂಪನಿ ಸಂಸ್ಥಾಪಕ ಮತ್ತು ಎಂಡಿ, ಬಿ.ಎಸ್‌. ಶಶಿ ಕುಮಾರ್‌ ಅವರು ಭಾಷಣ ಮಾಡಲಿದ್ದಾರೆ.  ರಾಜ್ಯದ 10 ಪ್ರಗತಿಪರ ರೈತರಿಗೆ ಭೂತಪಸ್ವಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ಇದನ್ನೂ ಓದಿ: ದರ್ಶನ್ ಫೋನ್ ನಂಬರ್‌ ಸಿಕ್ಕ ಮೇಲೆ ಪವಿತ್ರಾ ಗೌಡ ಹೊಸ ವರಸೆ.. ಕುತೂಹಲ ಮೂಡಿಸಿದ ಪೋಸ್ಟ್‌; ಏನದು? 

ಇದಾದ ಬಳಿಕ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಜಾರಿಗೊಳಿಸಿರುವ ಯೋಜನೆಗಳು ಮತ್ತು ಸೌಕರ್ಯಗಳ ಕುರಿತು ರೈತರಿಗೆ ಸಂಪೂರ್ಣ ಮಾಹಿತಿ ನೀಡಲಾಗುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment