ಇಂದು ಕೃಷಿದೇವೋಭವ.. ರೈತರಿಗಾಗಿ ನ್ಯೂಸ್ ​ಫಸ್ಟ್​​ ಕನ್ನಡ ವಾಹಿನಿ ವಿಶೇಷ ಕಾರ್ಯಕ್ರಮ

author-image
admin
Updated On
ಕೃಷಿದೇವೋಭವ.. ನಾಳೆ ರೈತರಿಗಾಗಿ ನ್ಯೂಸ್ ​ಫಸ್ಟ್​​ ಕನ್ನಡ ವಾಹಿನಿಯಿಂದ ವಿಶೇಷ ಕಾರ್ಯಕ್ರಮ
Advertisment
  • ನ್ಯೂಸ್ ​ಫಸ್ಟ್​​ ಕನ್ನಡ ವಾಹಿನಿಯಿಂದ ವಿಶೇಷ ಕಾರ್ಯಕ್ರಮ
  • ರಾಜ್ಯ ಕೃಷಿ ಇಲಾಖೆ ಸಹಯೋಗದ ಕೃಷಿದೇವೋಭವ..
  • ರಾಜ್ಯದ 10 ಪ್ರಗತಿಪರ ರೈತರಿಗೆ ಭೂತಪಸ್ವಿ ಪ್ರಶಸ್ತಿ ನೀಡಿ ಗೌರವ

ಬೆಂಗಳೂರು: ಕೃಷಿದೇವೋಭವ.. ಇದು ನ್ಯೂಸ್ ​ಫಸ್ಟ್​​ ಕನ್ನಡ ವಾಹಿನಿ, ರಾಜ್ಯ ಕೃಷಿ ಇಲಾಖೆ ಸಹಯೋಗದೊಂದಿಗೆ ಆಯೋಜಿಸುತ್ತಿರುವ ವಿಶೇಷ ಕಾರ್ಯಕ್ರಮ. ಇಂದು ಅಂದ್ರೆ ಮೇ 24, 2025ರ ಶನಿವಾರದಂದು ಬೆಂಗಳೂರಿನ ರಾಜಭವನ ರಸ್ತೆಯ ದಿ ಕ್ಯಾಪಿಟಲ್ ಹೋಟೆಲ್‌ನಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಬೆಳಗ್ಗೆ 10.30ಕ್ಕೆ ಕೃಷಿದೇವೋಭವ ಕಾರ್ಯಕ್ರಮದ ಉದ್ಘಾಟನೆ ನೆರವೇರಲಿದೆ. ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ, ಕೃಷಿ ಇಲಾಖೆ ಆಯುಕ್ತರಾದ ವೈ.ಎಸ್. ಪಾಟೀಲ್ ಹಾಗೂ ನ್ಯೂಸ್‌ ಫಸ್ಟ್ ಎಂಡಿ ಮತ್ತು ಸಿಇಒ, ಎಸ್‌.ರವಿಕುಮಾರ್‌ ಅವರು ಕಾರ್ಯಕ್ರಮವನ್ನ ಉದ್ದೇಶಿಸಿ ಮಾತನಾಡಲಿದ್ದಾರೆ.

publive-image

ಇದನ್ನೂ ಓದಿ: ಹೆಸರೆ ಇಲ್ಲದವರು.. ಧ್ವನಿ ಕಳೆದುಕೊಂಡವರ ಧ್ವನಿಯಾಗಿ ಜೀವ ತುಂಬುವ ರಂಗಪಯಣದ ಹೊಸ ನಾಟಕ 

ಕೃಷಿದೇವೋಭವ ಕಾರ್ಯಕ್ರಮದಲ್ಲಿ ರೈತರ ಸಮಸ್ಯೆ, ಸವಾಲು, ಪರಿಹಾರ ಕುರಿತ ವಿಚಾರ ಸಂಕೀರ್ಣ ನಡೆಯುತ್ತಿದೆ. ಸ್ವಾಶ್‌ ಬಯೋಟ್ನೆಕಾಲಜಿ ಕಂಪನಿ ಸಂಸ್ಥಾಪಕ ಮತ್ತು ಎಂಡಿ, ಬಿ.ಎಸ್‌. ಶಶಿ ಕುಮಾರ್‌ ಅವರು ಭಾಷಣ ಮಾಡಲಿದ್ದಾರೆ. ರಾಜ್ಯದ 10 ಪ್ರಗತಿಪರ ರೈತರಿಗೆ ಭೂತಪಸ್ವಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ಇದಾದ ಬಳಿಕ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಜಾರಿಗೊಳಿಸಿರುವ ಯೋಜನೆಗಳು ಮತ್ತು ಸೌಕರ್ಯಗಳ ಕುರಿತು ರೈತರಿಗೆ ಸಂಪೂರ್ಣ ಮಾಹಿತಿ ನೀಡಲಾಗುತ್ತದೆ.

ಕಾರ್ಯಕ್ರಮದ ಸಂಪೂರ್ಣ ವಿವರ!
ಸಮಯ: ಬೆಳಗ್ಗೆ 10.30 AM TO 11.00 AM
ಉದ್ಘಾಟನಾ ಕಾರ್ಯಕ್ರಮ

1. ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ ಅವರಿಂದ ಭಾಷಣ
2. ಕೃಷಿ ಇಲಾಖೆ ಆಯುಕ್ತರಾದ ವೈ.ಎಸ್. ಪಾಟೀಲ್ ಅವರಿಂದ ಭಾಷಣ
3. ನ್ಯೂಸ್‌ಫಸ್ಟ್ ಎಂಡಿ ಮತ್ತು ಸಿಇಒ, ಎಸ್‌. ರವಿಕುಮಾರ್‌ ಅವರಿಂದ ಭಾಷಣ
4. ಸ್ವಾಶ್‌ ಬಯೋಟ್ನೆಕಾಲಜಿ ಕಂಪನಿ ಸಂಸ್ಥಾಪಕ ಮತ್ತು ಎಂಡಿ, ಬಿ.ಎಸ್‌.ಶಶಿ ಕುಮಾರ್‌ರಿಂದ ಭಾಷಣ

‘ಕೃಷಿ ದೇವೋ ಭವ’ ಟಿವಿ ಸರಣಿ ಕಾರ್ಯಕ್ರಮದ ಟೀಸರ್ ಬಿಡುಗಡೆ
‘ರೈತನೊಂದಿಗೆ ನಾವು’ ಅಭಿಯಾನದ ಟೀಸರ್ ಬಿಡುಗಡೆ

ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಜಾರಿಗೊಳಿಸಿರುವ ಯೋಜನೆಗಳು ಮತ್ತು ಸೌಕರ್ಯಗಳ ಕುರಿತು ರೈತರಿಗೆ ಸಂಪೂರ್ಣ ಮಾಹಿತಿ.
ಸಮಯ: 11AM TO 11.15AM

1. Dr. ಜಿ.ಟಿ.ಪುತ್ರ, ನಿರ್ದೇಶಕರು, ಕೃಷಿ ಇಲಾಖೆ
ಸಮಯ: 11.15AM TO 11.30 AM
2. ಕೆ.ಬಿ.ದುಂಡಿ, ಅಪರ ನಿರ್ದೇಶಕರು, ತೋಟಗಾರಿಕೆ ಇಲಾಖೆ, ಲಾಲ್‌ಬಾಗ್‌, ಬೆಂಗಳೂರು
ಸಮಯ: 11.30 AM TO 11.45 AM
3. ಡಾ. ಪಿ. ಶ್ರೀನಿವಾಸ್‌, ಹೆಚ್ಚುವರಿ ನಿರ್ದೇಶಕರು
ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ

ಸಮಯ: 12pm-12.45pm
ವಿಚಾರ ಸಂಕೀರ್ಣ: 1
ಸಮಗ್ರ ಕೃಷಿ ಪದ್ಧತಿಯನ್ನು ಉತ್ತೇಜಿಸುವುದು ಹೇಗೆ?

1. ಡಾ. ಜಿ.ಎನ್‌.ನಾಗರಾಜ್‌, ನಿವೃತ್ತ ಡೀನ್‌, ಕೃಷಿ ವಿಶ್ವವಿದ್ಯಾಲಯ, ಜಿಕೆವಿಕೆ, ಬೆಂಗಳೂರು
2. ಡಾ. ಎನ್‌.ದೇವಕುಮಾರ್‌, ನಿವೃತ್ತ ವಿಸ್ತರಣಾ ನಿರ್ದೇಶಕರು, ಕೃಷಿ ವಿಶ್ವವಿದ್ಯಾಲಯ, ಜಿಕೆವಿಕೆ, ಬೆಂಗಳೂರು
3. ಡಾ. ಯೋಗೇಶ್‌, ಉಪ ನಿರ್ದೇಶಕರು, ಕೃಷಿ ಇಲಾಖೆ, ಬೆಂಗಳೂರು
4. ಧಾರೆಪ್ಪ ಕಿತ್ತೂರು, ಪ್ರಗತಿಪರ ರೈತರು, ಬಾಗಲಕೋಟೆ

ಸಮಯ: 1.00pm- 1.45pm
ವಿಚಾರ ಸಂಕೀರ್ಣ: 2
ಮನುಷ್ಯನ ಆರೋಗ್ಯ ಸೂತ್ರದಂತೆ ಮಣ್ಣಿಗೂ ಆರೋಗ್ಯ ಸೂತ್ರವಿದೆಯೇ? ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳುವುದು ಹೇಗೆ?

1. ಡಾ.ಚನ್ನಕೇಶವ. ಎಸ್‌ , ಪ್ರೊಫೆಸರ್‌, ಸಾಯಿಲ್ ಸೈನ್ಸ್‌ ಮತ್ತು ಅಗ್ರಿಕಲ್ಚರ್‌ ಕೆಮಿಸ್ಟ್ರಿ ಕೃಷಿ ವಿಶ್ವವಿದ್ಯಾಲಯ, ಜಿಕೆವಿಕೆ
2. ಚನ್ನಪ್ಪ ಅಂಗಡಿ, ಸಹಾಯಕ ನಿರ್ದೇಶಕರು, ಕೃಷಿ ಇಲಾಖೆ, ಧಾರವಾಡ
3. ಪಿ.ಶ್ರೀನಿವಾಸ್‌, ಮುಖ್ಯಸ್ಥರು, ಸಾಯಿಲ್‌ ಟ್ರಸ್ಟ್‌, ಬೆಂಗಳೂರು

ಸಮಯ: 2.30pm- 3.15pm
ವಿಚಾರ ಸಂಕೀರ್ಣ: 3
ಕೃಷಿಯಲ್ಲಿ ಹೊಸ ತಂತ್ರಜ್ಞಾನ ಅಳವಡಿಕೊಳ್ಳುವುದು ಹೇಗೆ? ಸಾಮಾನ್ಯ ರೈತ ಏನೇನು ಮಾಡಬಹುದು?

1. ಡಾ. ತಿಮ್ಮೇಗೌಡ, ಎಂ.ಎನ್, ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಕೃಷಿ ಹವಾಮಾನ ವಿಭಾಗ, ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು
2. ಸುರೇಶ್‌ ಚೆಕ್ಕೂರಿ, ಪ್ರಗತಿಪರ ರೈತರು
3. ರಾಜೇಶ್‌ ಕೆ.ವಿ. ಪ್ರಗತಿಪರ ರೈತರು
4. ಚಲಪತಿ ರೆಡ್ಡಿ, ಬ್ರೀಡಿಂಗ್ ಸೈಂಟಿಸ್ಟ್‌, BAYER CROP SCIENCE
5. ಇ. ಪ್ರಭು, ಟ್ರ್ಯಾಕ್ಟರ್‌ ಸೇಲ್ಸ್ ಹೆಡ್‌, VST Tillers Tractors Ltd

ವಿಚಾರ ಸಂಕೀರ್ಣ: 4 
ಕೃಷಿ ಉತ್ಪನ್ನಗಳಿಗೆ ದೇಶ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆ ಸೃಷ್ಟಿಸಲು ಇರುವ ಸವಾಲುಗಳೇನು?

1. ವೆಂಕಟರೆಡ್ಡಿ, ನಿವೃತ್ತ ಪ್ರೊಫೆಸರ್‌, ಕೃಷಿ ವಿಶ್ವವಿದ್ಯಾಲಯ, ಜಿಕೆವಿಕೆ, ಬೆಂಗಳೂರು
2. ಡಾ. ರಮೇಶ್ ಬಾಬು ರೆಡ್ಡಿ, ಚೀಫ್ ಎಕಾನಾಮಿಸ್ಟ್‌, ಕಾಫಿ ಬೋರ್ಡ್‌, ಬೆಂಗಳೂರು
3. ರಘುನಂದನ್‌, ಸಿಇಒ, ಭೂಮಿ ಡಿಜಿಟಲ್‌ ಅಗ್ರಿ ಪ್ಲಾಟ್‌ಫಾಮ್‌
4. ಪ್ರಭು ರೆಡ್ಡಿ, ಉಪ ನಿರ್ದೇಶಕರು, ಬಿಗ್‌ ಬ್ಯಾಸ್ಕೆಟ್‌

ಸಮಯ: 5 PM TO 6 PM
"ಭೂ ತಪಸ್ವಿ" ಪ್ರಶಸ್ತಿ ಪ್ರದಾನ ಸಮಾರಂಭ

1. ಮಹಾಲಿಂಗಪ್ಪ ಇಟ್ನಾಳ್‌, ಪ್ರಗತಿಪರ ರೈತರು, ಬಾಗಲಕೋಟೆ
2. ಸುಜಾತಾ & ರೂಪಾ, ರೈತ ಸಹೋದರಿಯರು, ಬೆಳಗಾವಿ
3. ಸುರೇಶ್, ದೃಷ್ಟಿವಿಕಲಚೇತನ ರೈತ, ಮಂಡ್ಯ
4. ಡಾ. ಶಂಕರ ಹನುಮಂತ ಲಂಗಟಿ, ಪ್ರಗತಿಪರ ರೈತ, ಬೆಳಗಾವಿ
5. ಡಾ. ಶೌಕತ್ ಅಲಿ ಲಂಬುನ್ನನವರ, ಧಾರವಾಡ
6. ಬೀರಪ್ಪ ವಗ್ಗಿ, ವಿಜಯಪುರ
7. ಕಲ್ಲಪ್ಪ ಪಂಡಿತಪ್ಪ ನೇಗಿನಹಾಳ, ಪ್ರಗತಿಪರ ರೈತ, ಬೆಳಗಾವಿ
8. ಶಶಿಕಲಾ ಮೂರ್ತಿ, ಪ್ರಗತಿಪರ ರೈತ ಮಹಿಳೆ, ದಾವಣಗೆರೆ
9. ಸೋಮೇಂಗಡ ಗಣೇಶ್‌ ತಿಮ್ಮಯ್ಯ, ಕೊಡಗು
10. ಚಿದಾನಂದ ಪರಸಪ್ಪ ಪವಾರ, ಪ್ರಗತಿಪರ ರೈತ, ಬೆಳಗಾವಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment