newsfirstkannada.com

ಅಖಿಲ ಭಾರತ ಶಾಸ್ತ್ರೀಯ ಭಾಷಣ ಸ್ಪರ್ಧೆ; ಮೈಸೂರಿನ ಪ್ರತಿಭೆಗೆ ರಾಷ್ಟ್ರೀಯ ಗೌರವ, ಚಿನ್ನದ ಪದಕ

Share :

Published March 27, 2024 at 9:10pm

Update March 27, 2024 at 9:42pm

    ಅಯೋಧ್ಯೆಯಲ್ಲಿ ಕೇಂದ್ರೀಯ ಸಂಸ್ಕೃತ ವಿವಿಯಿಂದ ಆಯೋಜನೆ

    ಪಂಡಿತ ಬಾದರಾಯಣಾಚಾರ್ಯರ ಮಗನಾದ ಕೃಷ್ಣಗೆ ಚಿನ್ನದ ಪದಕ

    ಪ್ರಶಂಸಾ ಪತ್ರದೊಂದಿಗೆ 12,000 ನಗದು ಬಹುಮಾನ ನೀಡಿ ಗೌರವ

ಮೈಸೂರು: ನವದೆಹಲಿಯ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯವು ಅಯೋಧ್ಯೆಯಲ್ಲಿ ಆಯೋಜಿಸಿದ್ದ 61ನೇ ಅಖಿಲ ಭಾರತ ಶಾಸ್ತ್ರೀಯ ಭಾಷಣ ಸ್ಪರ್ಧೆಯ ಭಾರತೀಯ ವಿಜ್ಞಾನ ಭಾಷಣ ವಿಭಾಗದಲ್ಲಿ ಮೈಸೂರಿನ ಅಗ್ರಹಾರದ ಕೃಷ್ಣ ಪಿ. ಬಾದರಾಯಣ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.

ಕೃಷ್ಣ ಪಿ. ಬಾದರಾಯಣ ಅವರು ಭಾರತೀಯ ವಿಜ್ಞಾನ ಭಾಷಣ ಸ್ಪರ್ಧೆ (ಪ್ರಾಚೀನ ವಿಜ್ಞಾನದಲ್ಲಿ ಪ್ರಬಂಧನ ವಿಧಿ- ವಿಷಯ)ಯಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದಿದ್ದಾರೆ. ವಿಜೇತ ವಿದ್ಯಾರ್ಥಿಗೆ ಪ್ರಶಂಸಾ ಪತ್ರದೊಂದಿಗೆ ₹12,000 ನಗದು ಬಹುಮಾನ ನೀಡಿ ಗೌರವಿಸಲಾಯಿತು.

ಮೈಸೂರಿನ ಉತ್ತರಾದಿ ಮಠದ ಹಿರಿಯ ವಿದ್ವಾಂಸ ಬಾದರಾಯಣಾಚಾರ್ಯ ಮತ್ತು ಭಾಗ್ಯಶ್ರೀ ಅವರ ಪುತ್ರನಾದ ಈತ ತಂದೆಯ ಬಳಿ ಸಂಸ್ಕೃತ ವೇದ, ಶಾಸ್ತ್ರ ಅಧ್ಯಯನ ಮಾಡುತ್ತಿದ್ದಾರೆ. ಸದ್ಯ ಇದೀಗ ಸ್ಪರ್ಧೆಯಲ್ಲಿ ಗೆಲ್ಲುವ ಮೂಲಕ ಮೈಸೂರಿಗೆ ಕೀರ್ತಿ ತಂದಿದ್ದಾನೆ. ಸ್ಪರ್ಧೆಯಲ್ಲಿ ದೇಶದ ವಿವಿಧ ಭಾಗದ 30ಕ್ಕೂ ಹೆಚ್ಚು ಸಂಸ್ಕೃತ ಪಾಠಶಾಲೆ, ಗುರುಕುಲಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಇದನ್ನೂ ಓದಿ: 2ನೇ ಮದುವೆಯಾದ ತಮಿಳಿನ ಖ್ಯಾತ ನಟ; ಸಿದ್ಧಾರ್ಥ್- ಅದಿತಿ ರಾವ್ ಸೀಕ್ರೆಟ್ ಮ್ಯಾರೇಜ್‌ ಯಾಕೆ?

ಸಮಾರಂಭದಲ್ಲಿ ಅಯೋಧ್ಯೆಯ ಶ್ರೀರಾಮನ ಪ್ರಧಾನ ಅರ್ಚಕ ಸತ್ಯೇಂದ್ರ ದಾಸ ಜೀ, ಶ್ರೀ ರಾಮಜನ್ಮಭೂಮಿ ನ್ಯಾಸದ ಅಧ್ಯಕ್ಷ ನೃತ್ಯ ಗೋಪಾಲದಾಸ ಸ್ವಾಮೀಜಿ, ರಾಮ ಜನ್ಮಭೂಮಿ ನ್ಯಾಸ ಕ್ಷೇತ್ರದ ಮಹಾಸಚಿವ ಚಂಪತ್ ರಾಯ, ಕೇಂದ್ರೀಯ ಸಂಸ್ಕೃತ ವಿವಿ ಕುಲಪತಿ ಶ್ರೀನಿವಾಸ ವರಖೇಡಿ (ಮಾ. 22ರಂದು) ಬಹುಮಾನ ವಿತರಿಸಿದರು. ದೇಶದ ವಿವಿಧ ಭಾಗದ ಹಿರಿಯ ವಿದ್ವಾಂಸರು ತೀರ್ಪುಗಾರರಾಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು.

ಕೃಷ್ಣ ಬಾದರಾಯಣ ಬೆಂಗಳೂರಿನ ಸಂಸ್ಕೃತ ವಿವಿಯಲ್ಲಿ ನಡೆದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಪ್ರಾಚೀನ ಭಾರತೀಯ ರಾಸಾಯನಶಾಸ್ತ್ರ ವಿಷಯದ ಬಗ್ಗೆ ಭಾಷಣ ಮಾಡಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆ ಆಗಿದ್ದನು. ಕರ್ನಾಟಕವನ್ನು ಪ್ರತಿನಿಧಿಸಿದ ಕೃಷ್ಣನಿಗೆ ರಾಷ್ಟ್ರಮಟ್ಟದಲ್ಲಿ ಮಾನ್ಯತೆ ದೊರಕಿರುವುದು ಹೆಮ್ಮೆಯ ಸಂಗತಿಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಖಿಲ ಭಾರತ ಶಾಸ್ತ್ರೀಯ ಭಾಷಣ ಸ್ಪರ್ಧೆ; ಮೈಸೂರಿನ ಪ್ರತಿಭೆಗೆ ರಾಷ್ಟ್ರೀಯ ಗೌರವ, ಚಿನ್ನದ ಪದಕ

https://newsfirstlive.com/wp-content/uploads/2024/03/KRISHAN.jpg

Load More