Advertisment

ಕೃಷ್ಣಾ ನದಿಗೆ ಭಾರೀ ಪ್ರಮಾಣದ ನೀರು ಬಿಡುಗಡೆ.. 700ಕ್ಕೂ ಹೆಚ್ಚು ಮನೆಗಳು ಜಲಾವೃತ, 8 ಗ್ರಾಮಗಳಲ್ಲಿ ಆತಂಕ

author-image
Bheemappa
Updated On
ಕೃಷ್ಣಾ ನದಿಗೆ ಭಾರೀ ಪ್ರಮಾಣದ ನೀರು ಬಿಡುಗಡೆ.. 700ಕ್ಕೂ ಹೆಚ್ಚು ಮನೆಗಳು ಜಲಾವೃತ, 8 ಗ್ರಾಮಗಳಲ್ಲಿ ಆತಂಕ
Advertisment
  • ಒಟ್ಟು 481 ಜಾನುವಾರುಗಳ ರಕ್ಷಣೆ ಮಾಡಿರುವ ಜಿಲ್ಲಾಡಳಿತ
  • ಮಳೆಯಾರ್ಭಟ ಕುಸಿದು ತುಂತುರು ಮಳೆ, ನಿರಂತರ ಸಮಸ್ಯೆ
  • ಮನೆಗಳಿಗೆ ನೀರು ನುಗ್ಗಿದೆ.. ಜನ ಶಾಶ್ವತ ಪರಿಹಾರಕ್ಕೆ ಆಗ್ರಹ

ರಾಜ್ಯಾದ್ಯಂತ ಆರ್ಭಟ ನಿಲ್ಲಿಸಿದ ವರುಣದೇವ, ಮಳೆ ಸಿಂಚನದ ಸೊಬಗು ನೀಡ್ತಿದ್ದಾನೆ. ಬೆಂಗಳೂರಿನಲ್ಲಿ ನಿನ್ನೆ ಸಂಜೆ ಧಾರಾಕಾರ ಮಳೆ ಬಿದ್ದಿದೆ. ಇತ್ತ ಬಯಲುಸೀಮೆ ಕೋಲಾರಕ್ಕೆ ಮುಂಗಾರಿನ ದರ್ಶನ ಆಗಿದೆ.. ಉತ್ತರದ ಬೆಳಗಾವಿ ಮಾತ್ರ ಮಹಾರಾಷ್ಟ್ರ ಘಟ್ಟದ ಮಳೆ ಘಟದಂತೆ ಕಾಡ್ತಿದೆ.

Advertisment

ಇದನ್ನೂ ಓದಿ:ಬೆಳಗಾವಿ ಸೇಲೋ ಟೇಪ್ ಕಾರ್ಖಾನೆಯಲ್ಲಿ ಭಯಾನಕ ಸ್ಫೋಟ.. ಕ್ಷಣಾರ್ಧದಲ್ಲಿ ಇಡೀ ಫ್ಯಾಕ್ಟರಿಗೆ ಬೆಂಕಿ, ಓರ್ವ ಮಿಸ್

ಮಲೆನಾಡು ಮತ್ತು ಕರಾವಳಿಯಲ್ಲಿ ಮಳೆ ಆರ್ಭಟ ಕುಸಿದಿದೆ.. ಆದ್ರೆ ತುಂತುರು ಮಳೆಯಿಂದ ನಿರಂತರ ಸಮಸ್ಯೆ ಸೃಷ್ಟಿ ಆಗ್ತಿದೆ.. ಬಯಲು ಸೀಮೆ ಕೋಲಾರಕ್ಕೆ ಮುಂಗಾರಿನ ದರ್ಶನವಾಗಿದೆ.

ಇದನ್ನೂ ಓದಿ: ನೋ ಬಾಲ್‌ಗೆ ಮಕ್ಕಳ ಗಲಾಟೆ.. ಬ್ಯಾಟ್​ನಿಂದ ಹೊಡೆದು ಬಾಲಕನ ಹತ್ಯೆ; ಆದರೂ ಮಾನವೀಯತೆ ಮೆರೆದ ತಾಯಿ!

Advertisment

publive-image

ಚಿನ್ನದ ನಾಡಿನಲ್ಲಿ ಹೊಳೆ ಉಕ್ಕಿಸಿದ ಮಳೆ

ಕೋಲಾರದಲ್ಲಿ ಮೊದಲ ಬಾರಿಗೆ ಮುಂಗಾರು ಅಬ್ಬರಿಸಿದೆ. ಮಳೆಯಿಂದಾಗಿ ರೈಲ್ವೇ ಅಂಡರ್​ಪಾಸ್ ಸಂಪೂರ್ಣವಾಗಿ ತುಂಬಿ ಹರಿದಿದ್ದು, ಸಾರಿಗೆ ಬಸ್, ಕಾರು ಸೇರಿ ಹಲವು ವಾಹನಗಳು ನೀರಿನಲ್ಲಿ ಸಿಲುಕಿ ಪರದಾಡಿದ್ವು. ಕೋಲಾರದ ತಾಲ್ಲೂಕು ಕಚೇರಿಯ ರೆಕಾರ್ಡ್​​ ರೂಮ್​​, ಸಬ್ ರಿಜಿಸ್ಟ್ರಾರ್​ಗೂ ನೀರು ನುಗ್ಗಿದೆ. ನೀರು ಹೊರ ಹಾಕಲು ರಾತ್ರಿಯಿಡಿ ಸಿಬ್ಬಂದಿ ಹರಸಾಹಸ ಪಟ್ರು..

ಬಾದಾಮಿ ತಾಲೂಕಿನ ಹಲವು ಗ್ರಾಮಗಳಲ್ಲಿ ನೆರೆ

ಮಲಪ್ರಭಾ ನದಿ ತೀರದ ಬದಾಮಿ ತಾಲೂಕಿನ ಹಲವು ಹಳ್ಳಿಗಳಲ್ಲಿ ನೆರೆ ಸೃಷ್ಟಿ ಆಗಿದೆ. ನದಿಗೆ 12,000 ಸಾವಿರ ಕ್ಯೂಸೆಕ್ ನೀರು ಹರಿಬಿಟ್ಟಿದ್ದು, ಜಮೀನುಗಳಿಗೆ ನೀರು ನುಗ್ಗಿದೆ. ಪ್ರವಾಹ ಪೀಡಿತ ಸ್ಥಳಗಳಿಗೆ ಬಾದಾಮಿ ಕ್ಷೇತ್ರದ ಶಾಸಕ ಚಿಮ್ಮನಕಟ್ಟಿ ಭೇಟಿ ನೀಡಿ, ಪರಿಹಾರದ ಭರವಸೆ ನೀಡಿದ್ರು.

ಮಳೆ ನಿಂತರು ಕಡಿಮೆಯಾಗದ ಪ್ರವಾಹ ಭೀತಿ

ಮಹಾರಾಷ್ಟ್ರದ ಪಶ್ಚಿಮಘಟ್ಟದಲ್ಲಿ ಕಳೆದ ಎರಡು ದಿನಗಳಿಂದ ಮಳೆ ಅಬ್ಬರ ತುಸು ತಗ್ಗಿದೆ. ಸಂಕೇಶ್ವರ ಪಟ್ಟಣದ ಮಠ ಗಲ್ಲಿ, ನದಿ ಗಲ್ಲಿ, ಜನತಾ ಪ್ಲಾಟ್‌ಗೆ ಹಿರಣ್ಯಕೇಶಿ ನದಿ ನೀರು ನುಗ್ಗಿದೆ.

Advertisment

ಇದನ್ನೂ ಓದಿ: ₹200 ಕೋಟಿಗೂ ಅಧಿಕ ಮೊತ್ತದ ದೇಣಿಗೆ ನೀಡಿದ ಹಳೆ ವಿದ್ಯಾರ್ಥಿ.. ಭಾರತದ ಇತಿಹಾಸದಲ್ಲೇ ಹೊಸ ದಾಖಲೆ!

publive-image

‘ಜಲ’ಗಾವಿ ಸ್ಥಿತಿಗತಿ

  • ಮಹಾರಾಷ್ಟ್ರ ಅಣೆಕಟ್ಟೆಗಳಿಂದ ಕೃಷ್ಣಾ ನದಿಗೆ ನಿರಂತರ ನೀರು
  • ನೀರಿನಲ್ಲಿ ಮುಳುಗಿರುವ ಬೆಳಗಾವಿ ಜಿಲ್ಲೆಯ 41 ಸೇತುವೆಗಳು
  • ಸರಿ ಸುಮಾರು 700ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿವೆ
  • ಚಿಕ್ಕೋಡಿ ಉಪ ವಿಭಾಗದಲ್ಲಿ 18 ಕಾಳಜಿ ಕೇಂದ್ರಗಳು ಓಪನ್​​​
  • ಕೃಷ್ಣಾ - 2.2 ಲಕ್ಷ ಕ್ಯೂಸೆಕ್, ದೂಧಗಂಗಾ -44 ಸಾವಿರ ಕ್ಯೂಸೆಕ್
  • ಕಲ್ಲೋಳ–ಯಡೂರ ಬ್ಯಾರೇಜ್ ಬಳಿ 2.7 ಲಕ್ಷ ಕ್ಯೂಸೆಕ್ ನೀರು
  • ಪ್ರವಾಹ ಪೀಡಿತ 8 ಗ್ರಾಮಗಳ 339 ಕುಟುಂಬಗಳನ್ನು ರಕ್ಷಣೆ
  • ಒಟ್ಟು 481 ಜಾನುವಾರುಗಳ ರಕ್ಷಣೆ ಮಾಡಿರುವ ಜಿಲ್ಲಾಡಳಿತ
  • ನಿಪ್ಪಾಣಿ ತಾಲೂಕಿನ 220 ಕುಟುಂಬಗಳ 427 ಜನ ಸ್ಥಳಾಂತರ

ಲಖಮಾಪುರ ಗ್ರಾಮದ ಸುತ್ತುವರಿದ ಮಲಪ್ರಭೆ

ನವಿಲುತೀರ್ಥ ಜಲಾಶಯದಿಂದ ಮಲಪ್ರಭಾ ನದಿಗೆ ಅಪಾರ ಪ್ರಾಮಾಣದ ನೀರು ಬಿಡುಗಡೆ ಮಾಡಿದ ಹಿನ್ನೆಲೆ ಗದಗದಲ್ಲೂ ಮಲಪ್ರಭಾ ದಾಂಗುಡಿ ಶುರುವಾಗಿದೆ. ನರಗುಂದ ತಾಲೂಕಿನ ಲಖಮಾಪುರ ಗ್ರಾಮದ ಸುತ್ತಲೂ ಮಲಪ್ರಭೆ ತುಂಬಿ ಹರಿಯುತ್ತಿದ್ದು, ಬೆಳೆಗಳು ಜಲಾವೃತವಾಗಿದ್ರೆ, ಮನೆಗಳಿಗೆ ನೀರು ನುಗ್ಗಿದೆ.. ಜನ ಶಾಶ್ವತ ಪರಿಹಾರಕ್ಕೆ ಆಗ್ರಹಿಸಿದ್ದಾರೆ..

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment