/newsfirstlive-kannada/media/post_attachments/wp-content/uploads/2025/06/KRS_CM_SIDDARAMAIAH.jpg)
ಮಂಡ್ಯ: ಇಂದು ಸಿಎಂ ಸಿದ್ದರಾಮಯ್ಯ ಅವರು ಕಾವೇರಿ ಮಾತೆಗೆ ಬಾಗಿನ ಅರ್ಪಣೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ಕೆಆರ್‌ಎಸ್ ಜಲಾಶಯ ಶೃಂಗಾರಗೊಂಡಿದೆ. ಕನ್ನಂಬಾಡಿ ಕಟ್ಟೆ ಹಸಿರು ತಳಿರು-ತೋರಣ ಹೂಗಳಿಂದ ಹಾಗೂ ಕನ್ನಡ ಬಾವುಟಗಳಿಂದ ಕಂಗೊಳಿಸುತ್ತಿದ್ದು ನೋಡುಗರನ್ನು ಸೆಳೆಯುವಂತ್ತಿದೆ.
ಕೆಆರ್‌ಎಸ್ ಜಲಾಶಯ ಜೂನ್ ತಿಂಗಳಲ್ಲಿ ಸಂಪೂರ್ಣವಾಗಿ ಭರ್ತಿ ಆಗುವ ಮೂಲಕ 93 ವರ್ಷಗಳ ಇತಿಹಾಸದಲ್ಲಿ ಐತಿಹಾಸಕ ದಾಖಲೆ ಬರೆದಿದೆ. ಡ್ಯಾಂ ನಿರ್ಮಾಣ ಆದಾಗಿನಿಂದ ಜೂನ್ ತಿಂಗಳಲ್ಲಿ ಇದುವರೆಗೂ ತುಂಬಿರಲಿಲ್ಲ. ಆದರೆ 93 ವರ್ಷಗಳ ನಂತರ ಮೊಟ್ಟ ಮೊದಲ ಬಾರಿಗೆ ಈಗ ಕೆಆರ್‌ಎಸ್ ಭರ್ತಿಯಾಗಿದೆ. 124.80 ಅಡಿಗಳ ಗರಿಷ್ಠ ಮಟ್ಟ ಸಂಪೂರ್ಣ ಭರ್ತಿ ಆಗಿದ್ದು ಹೊಸ ಮೈಲಿಗಲ್ಲು ಸೃಷ್ಟಿಯಾಗಿದೆ.
ಈ ಹಿನ್ನೆಲೆಯಲ್ಲಿ ಇಂದು 11.30ಕ್ಕೆ ಅಭಿಜಿತ್ ಶುಭ ಮುಹೂರ್ತದಲ್ಲಿ ಕಾವೇರಿ ಮಾತೆಗೆ ಸಿಎಂ ಸಿದ್ದರಾಮಯ್ಯ ಅವರು ಬಾಗಿನ ಅರ್ಪಣೆ ಮಾಡಲಿದ್ದಾರೆ. ವೈದಿಕ ಭಾನುಪ್ರಕಾಶ್ ಶರ್ಮ ನೇತೃತ್ವದಲ್ಲಿ ಬಾಗಿನ ಪೂಜಾ ಕೈಂಕರ್ಯ ನಡೆಯಲಿದೆ. ಸಿದ್ದರಾಮಯ್ಯಗೆ ನಾಲ್ಕನೇ ಬಾರಿಗೆ ಬಾಗಿನ ಅರ್ಪಿಸುವ ಸೌಭಾಗ್ಯ ದೊರಕಿದೆ. ಇದಾದ ಬಳಿಕ ಕಾವೇರಿ ಮಾತೆಗೆ ವಿಶೇಷ ಪೂಜೆ ಸಲ್ಲಿಕೆ ಮಾಡಲಿದ್ದಾರೆ. ನಂತರ ವೇದಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್, ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಸೇರಿದಂತೆ ಹಲವು ಸಚಿವರು, ಶಾಸಕರು ಬಾಗಿಯಾಗಲಿದ್ದಾರೆ.
ಹೊಸ ದಾಖಲೆ ಬರೆಯಲಿರುವ ಸಿಎಂ ಸಿದ್ದರಾಮಯ್ಯ
ಕೆಆರ್‌ಎಸ್ ಜಲಾಶಯ ಇತಿಹಾಸದಲ್ಲೇ ಇದೇ ಮೊಟ್ಟ ಮೊದಲ ಬಾರಿಗೆ ಜೂನ್ನಲ್ಲಿ ಸಂಪೂರ್ಣವಾಗಿ ಭರ್ತಿಯಾಗಿದೆ. ಜೂನ್ ತಿಂಗಳಲ್ಲೇ ಕೆಆರ್ಎಸ್ಗೆ ಬಾಗಿನ ಅರ್ಪಿಸುತ್ತಿರುವ ಕರ್ನಾಟಕದ ಮೊಟ್ಟ ಮೊದಲ ಮುಖ್ಯಮಂತ್ರಿ ಆಗಲಿದ್ದಾರೆ. 1979 ರಂದು ಡಿ ದೇವರಾಜ ಅರಸು ಅವರ ಕಾಲದಲ್ಲಿ ಬಾಗಿನ ಕಾರ್ಯಕ್ರಮ ಆರಂಭವಾಗಿತ್ತು. ಅಂದಿನಿಂದ ಇಂದಿನವರೆಗೂ ಜೂನ್ನಲ್ಲಿ ಯಾರು ಬಾಗಿನ ಸಲ್ಲಿಸಿರಲಿಲ್ಲ. ಹೀಗಾಗಿ ಸಿಎಂ ಸಿದ್ದರಾಮಯ್ಯ ಅವರು ನೂತನ ದಾಖಲೆ ಬರೆಯಲಿದ್ದಾರೆ.
ಇದನ್ನೂ ಓದಿ:ಮದುವೆಯಾದ ಕೆಲವೇ ಕೆಲವು ಗಂಟೆಗಳಲ್ಲಿ ಗಂಡನ ಜೀವ ತೆಗೆದ ಹೆಂಡತಿ.. ಕಾರಣ ಏನು ಗೊತ್ತಾ?
ಸಂಪೂರ್ಣ ಭರ್ತಿಯಾದ ಕೆಆರ್‌ಎಸ್
- 124.80 ಅಡಿ ಗರಿಷ್ಠ ಮಟ್ಟದ ಕೆಆರ್‌ಎಸ್ ಡ್ಯಾಂ ಸಂಪೂರ್ಣ ಭರ್ತಿ
- ಕನ್ನಂಬಾಡಿ ಕಟ್ಟೆಗೆ 28,938 ಕ್ಯೂಸೆಕ್ ಒಳಹರಿವು
- ಡ್ಯಾಂನಿಂದ 28,681 ಕ್ಯೂಸೆಕ್ ಹೊರಹರಿವು
- 49.452 ಟಿಎಂಸಿ ಗರಿಷ್ಠ ಸಾಮರ್ಥ್ಯದಷ್ಟು ನೀರು ಸಂಗ್ರಹ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ