ಮಳೆ..ಮಳೆ..ಮಳೆ ಕಾವೇರಿಗೆ ಜೀವಕಳೆ! KRS ಹರಿದು ಬರುತ್ತಿದೆ ಭಾರೀ ಪ್ರಮಾಣದ ಒಳಹರಿವು!

author-image
AS Harshith
Updated On
ಇಂದು KRS ಡ್ಯಾಂ ನೀರಿನ ಮಟ್ಟ ಎಷ್ಟಿದೆ? ಉಕ್ಕಿ ಹರಿಯುವ ರಭಸಕ್ಕೆ ಬೃಂದಾವನ ಬೋಟಿಂಗ್ ಪಾಯಿಂಟ್ ಜಲಾವೃತ!
Advertisment
  • ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯಾರ್ಭಟ
  • ಮಳೆಯಿಂದಾಗಿ 24 ಗಂಟೆಯಲ್ಲೇ 2 ಟಿಎಂಸಿ ನೀರು ಸಂಗ್ರಹ
  • ನಿನ್ನೆ ಬೆಳಿಗ್ಗೆ 10,121 ಕ್ಯೂಸೆಕ್ ನೀರು ಹರಿದು ಬಂದಿದೆ.. ಇಂದು ಎಷ್ಟಿದೆ?

ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ಜೀವನದಿ ಕಾವೇರಿಗೆ ಜೀವಕಳೆ ಬಂದಿದೆ.

ಮಳೆಯಿಂದಾಗಿ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ KRS ಡ್ಯಾಂಗೆ ಭಾರೀ ಪ್ರಮಾಣದ ಒಳಹರಿವು ಹರಿದು ಬರುತ್ತಿದೆ. ಪ್ರತಿ ಗಂಟೆ ಗಂಟೆಗೂ KRS ಒಳ ಹರಿವು ಏರಿಕೆಯಾಗುತ್ತಿದೆ.

ಇದನ್ನೂ ಓದಿ: ಶೆಡ್​ನಲ್ಲಿ ಮಲಗಿದ್ದ ವೇಳೆ ಬೆಂಕಿ ಹಚ್ಚಿದ್ದ ದುಷ್ಕರ್ಮಿಗಳು.. ಇಬ್ಬರು ಸಜೀವ ದಹನ, ಮೂವರು ಬಚಾವ್

ಒಳ ಹರಿವಿನ ಪ್ರಮಾಣದಲ್ಲಿ ಏರಿಕೆ

25 ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರು ಡ್ಯಾಂಗೆ ಹರಿದು ಬರುತ್ತಿದೆ. ನಿನ್ನೆ ಬೆಳಿಗ್ಗೆ 10,121 ಕ್ಯೂಸೆಕ್ ನೀರು ಹರಿದು ಬಂದಿದೆ. ನಿನ್ನೆ ಸಂಜೆ ವೇಳೆಗೆ 19,202 ಕ್ಯೂಸೆಕ್ ಏರಿಕೆಯಾಗಿತ್ತು. ಆದರೆ ಇಂದು ಒಳ ಹರಿವಿನ ಪ್ರಮಾಣ 25,933 ಕ್ಯೂಸೆಕ್​ಗೆ ಏರಿಕೆಯಾಗಿದೆ. ಸಂಜೆಗೆ 30 ಸಾವಿರ ಕ್ಯೂಸೆಕ್​ಗೆ ಏರಿಕೆಯಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: VIDEO: ರಸ್ತೆ ಪಕ್ಕದ ಕಲ್ಲಿಗೆ ಕಾರು ಗುದ್ದಿ ಮೂವರು ಸಾವು.. ಅಪಘಾತದ ಭಯಾನಕ ದೃಶ್ಯ ಮೊಬೈಲ್​ ಕ್ಯಾಮೆರಾದಲ್ಲಿ ಸೆರೆ

ರೈತರಿಗೆ ಖುಷಿಯೋ ಖುಷಿ

24 ಗಂಟೆಯಲ್ಲೇ 2 ಟಿಎಂಸಿ ನೀರು ಸಂಗ್ರಹವಾಗಿದೆ. ನಿನ್ನೆ  ಕೆಆರ್​ಎಸ್​ ಡ್ಯಾಂ 105.40 ಅಡಿಯಿತ್ತು. ಆದರೆ ಇಂದು ಕನ್ನಂಬಾಡಿ ಅಣೆಕಟ್ಟೆ 107.60 ಅಡಿ ಭರ್ತಿಯಾಗಿದೆ. ಡ್ಯಾಂ ನೀರಿನ ಮಟ್ಟ ಏರಿಕೆಯಿಂದ ರೈತರಲ್ಲಿ ಸಂತಸ ಮನೆಮಾಡಿದೆ. ಒಳ ಹರಿವು ಇದೇ ರೀತಿ ಬಂದರೆ ಕೆಲವೇ ದಿನದಲ್ಲಿ ಡ್ಯಾಂ ಭರ್ತಿಯಾಗಲಿದೆ.

ಇದನ್ನೂ ಓದಿ: ಕೇದಾರನಾಥ ದೇವಸ್ಥಾನದಲ್ಲಿ 228kg ಚಿನ್ನ ನಾಪತ್ತೆ! ಈ ಗಂಭೀರ ಆರೋಪ ಮಾಡಿದ್ಯಾರು ಗೊತ್ತಾ?

ಮತ್ತೊಂದೆಡೆ ಕಾವೇರಿಗಾಗಿ ತಮಿಳುನಾಡು ಕ್ಯಾತೆಯಲ್ಲಿದ್ದ ಕರುನಾಡಿಗೆ ನಿರಾಳವಾಗಿದೆ. ಮಳೆ ಆರ್ಭಟ ಮುಂದುವರೆದರೆ ತಮಿಳುನಾಡಿಗೂ ನೀರು ಹರಿಸಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment