Advertisment

ಭರ್ತಿಯಾಗುವ ಹಂತದಲ್ಲಿ KRS​ ಡ್ಯಾಂ! ಇನ್ನೆಷ್ಟು ನೀರು ಸಂಗ್ರಹವಾಗಲು ಬಾಕಿ ಇದೆ?

author-image
AS Harshith
Updated On
ಮಂಡ್ಯ ರೈತರಿಗೆ ಬಂಪರ್‌ ಸುದ್ದಿ.. ನಾಳೆಯೇ KRS ಡ್ಯಾಂ ಸಂಪೂರ್ಣ ಭರ್ತಿ; ಇನ್ನೆಷ್ಟು ಅಡಿ ಬಾಕಿ?
Advertisment
  • ಮಳೆಯಿಂದಾಗಿ ಒಡಲು ತುಂಬಿಸಿಕೊಳ್ಳುತ್ತಿದ್ದಾಳೆ ಕಾವೇರಿ
  • ಕ್ಷಣ ಕ್ಷಣಕ್ಕೂ ಕೆಆರ್‌ಎಸ್ ಡ್ಯಾಂನ ನೀರಿನ ಮಟ್ಟ ಏರಿಕೆ
  • 24 ಗಂಟೆಯಲ್ಲಿ ಡ್ಯಾಂನಲ್ಲಿ ಹೆಚ್ಚಳವಾಯ್ತು 3 ಅಡಿ ನೀರು

ಮಂಡ್ಯ: ರಾಜ್ಯದಲ್ಲಿ ಮಳೆಯಾರ್ಭಟ ಮುಂದುವರೆದಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ನಿರಂತವಾಗಿ ಸುರಿಯುತ್ತಿದೆ. ಪರಿಣಾಮ ಕಾವೇರಿ ಒಡಲು ತುಂಬಿಸಿಕೊಳ್ಳುತ್ತಿದ್ದಾಳೆ.

Advertisment

ಮಳೆಯಿಂದಾಗಿ ಕೆಆರ್‌ಎಸ್ ಡ್ಯಾಂ‌ಗೆ 36,674 ಕ್ಯೂಸೆಕ್ ಒಳಹರಿವು ಹರಿದುಬಂದಿದೆ. ಕ್ಷಣ ಕ್ಷಣಕ್ಕೂ ಕೆಆರ್‌ಎಸ್ ಡ್ಯಾಂನ ನೀರಿನ ಮಟ್ಟ ಹೆಚ್ಚಾಗುತ್ತಿದೆ. ಸದ್ಯ 110.60 ಅಡಿಗೆ ಕೆಆರ್‌ಎಸ್ ಡ್ಯಾಂನ ನೀರಿನ ಮಟ್ಟ ತಲುಪಿದೆ.

ಇದನ್ನೂ ಓದಿ: ಬಸ್ ಭೀಕರ​ ಅಪಘಾತ.. 26 ಮಂದಿ ಸಾವು

24 ಗಂಟೆಯಲ್ಲಿ 3 ಅಡಿ ನೀರು ಹೆಚ್ಚಳವಾಗಿದೆ. ನಿನ್ನೆ 107.60 ಅಡಿ ಇದ್ದ ಕೆಆರ್‌ಎಸ್ ನೀರಿನ ಮಟ್ಟ, ಇಂದು 110.60 ಅಡಿಗೆ ತಲುಪಿದೆ.

ಕೆಆರ್‌ಎಸ್ ಡ್ಯಾಂನ ನೀರಿನ ಸಂಗ್ರಹದಲ್ಲಿ ಭಾರೀ ಏರಿಕೆ ಕಂಡಿದ್ದು, 24 ಗಂಟೆಯಲ್ಲಿ 3 ಟಿಎಂಸಿ ನೀರು ಕೆಆರ್‌ಎಸ್​ಗೆ ಹರಿದು‌ ಬಂದಿದೆ.

Advertisment

publive-image

ಇದನ್ನೂ ಓದಿ: ಸ್ಕೂಟರ್​​​ ಮತ್ತು ಟಿಪ್ಪರ್​ ನಡುವೆ ಭೀಕರ ಅಪಘಾತ.. ಇಬ್ಬರು ಯುವಕರು ಸಾವು

ನಿನ್ನೆ ಕೆಆರ್‌ಎಸ್‌ನಲ್ಲಿ 29.378 ಟಿಎಂಸಿ ನೀರು ಸಂಗ್ರವಾಗಿತ್ತು. ಇಂದು 32.330 ಟಿಎಂಸಿ ನೀರು ಸಂಗ್ರಹವಾಗಿದೆ. ಸದ್ಯ ಕೆಆರ್‌ಎಸ್ ಡ್ಯಾಂ ಭರ್ತಿಯಾಗುವ ಹಂತದಲ್ಲಿದೆ. ಸದ್ಯ ಈ ವಿಚಾರವಂತೂ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.

ಇಂದಿನ ಕೆಆರ್‌ಎಸ್ ನೀರಿನ ಮಟ್ಟ

ಗರಿಷ್ಠ ಮಟ್ಟ - 124.80 ಅಡಿ.
ಇಂದಿನ ಮಟ್ಟ - 110.60 ಅಡಿ.
ಗರಿಷ್ಠ ಸಾಮರ್ಥ್ಯ - 49.452 ಟಿಎಂಸಿ
ಇಂದಿನ ಸಾಮರ್ಥ್ಯ - 32.330 ಟಿಎಂಸಿ
ಒಳ ಹರಿವು - 36,674 ಕ್ಯೂಸೆಕ್
ಹೊರ ಹರಿವು - 2,361 ಕ್ಯೂಸೆಕ್

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment