ಸುರಿಯುತ್ತಿದೆ ಮಳೆ, ಹೆಚ್ಚುತ್ತಿದೆ ನೀರು.. KRS ಡ್ಯಾಂ ಭರ್ತಿಯಾಗಲು 11 ಅಡಿಯಷ್ಟೇ ಬಾಕಿ!

author-image
AS Harshith
Updated On
ಇಂದು KRS ಡ್ಯಾಂ ನೀರಿನ ಮಟ್ಟ ಎಷ್ಟಿದೆ? ಉಕ್ಕಿ ಹರಿಯುವ ರಭಸಕ್ಕೆ ಬೃಂದಾವನ ಬೋಟಿಂಗ್ ಪಾಯಿಂಟ್ ಜಲಾವೃತ!
Advertisment
  • ಕೆಆರ್‌ಎಸ್ ಡ್ಯಾಂಗೆ ಜೀವಕಳೆ ತುಂಬಿದ ಕಾವೇರಿ
  • ಕೆಆರ್‌ಎಸ್‌ಗೆ ಹರಿದು ಬರುತ್ತಿರೋ ಒಳಹರಿವು ಎಷ್ಟಿದೆ?
  • ಇಂದು ಕೆಆರ್​​​ಎಸ್​​ ಡ್ಯಾಂನಲ್ಲಿ ಶೇಖರಣೆಯಾದ ನೀರೆಷ್ಟು?.

ಮಂಡ್ಯ: ರಾಜ್ಯದ ಹಲವೆಡೆ ವರುಣಾರ್ಭಟ ಮುಂದುವರೆದಿದೆ. ಮಳೆಯಿಂದಾಗಿ ನೆರೆ, ಮಣ್ಣು ಕುಸಿತದ ಜೊತೆಗೆ ಸಾವು ನೋವು ಸಂಭವಿಸಿದೆ. ಇತ್ತ ಕಾವೇರಿ ಜಲಾನಯನ ಪ್ರದೇಶದಲ್ಲೂ ಮಳೆ ಮುಂದುವರೆದಿದ್ದು, ಕೆಆರ್‌ಎಸ್ ಡ್ಯಾಂಗೆ ಜೀವಕಳೆ ತುಂಬಿದೆ.

ಇಂದು ಕೆಆರ್‌ಎಸ್‌ಗೆ 36,772 ಕ್ಯೂಸೆಕ್ ಒಳಹರಿವು ಹರಿದುಬಂದಿದೆ. ಮಳೆಯಿಂದಾಗಿ ಕೆಆರ್‌ಎಸ್ ನೀರಿನ‌ ಮಟ್ಟ ದಿನೇದಿನೇ ಹೆಚ್ಚಾಗುತ್ತಿದೆ. ಈಗಾಗಲೇ 113.40 ಅಡಿಗೆ ನೀರಿ‌ನ ಮಟ್ಟ ತಲುಪಿದೆ.

ಇದನ್ನೂ ಓದಿ: ಮಳೆಯ ರಣಾರ್ಭಟ.. ಇಂದು ಈ 5 ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ

ಒಂದು ವಾರದಲ್ಲಿ ಕೆಆರ್‌ಎಸ್ ಡ್ಯಾಂನ ನೀರಿನ ಮಟ್ಟ 11 ಅಡಿಯಷ್ಟು ಭರ್ತಿಯಾಗಿದೆ. ಕಳೆದ ವಾರ ಕೆಆರ್‌ಎಸ್‌ನಲ್ಲಿ 104.30 ಅಡಿ ನೀರಿತ್ತು. ಆದರೀಗ ಮಳೆಯಿಂದಾಗಿ ಡ್ಯಾಂನ ನೀರಿನ ಮಟ್ಟ ಏರಿಕೆಯಾಗುತ್ತಿದೆ.

ಇದನ್ನೂ ಓದಿ: ಬಸವಸಾಗರ ಜಲಾಶಯ ಬಹುತೇಕ ಭರ್ತಿ! ಕೃಷ್ಣಾ ನದಿ ಪಾತ್ರದ 72 ಗ್ರಾಮಗಳಿಗೆ ಹೈ ಅಲರ್ಟ್! 

ಇನ್ನು ಕೆಆರ್‌ಎಸ್ ಭರ್ತಿಗೆ 11 ಅಡಿ ಮಾತ್ರ ಬಾಕಿ ಇದೆ. ನೀರಿನ ಸಾಮರ್ಥ್ಯದಲ್ಲೂ ಸಹ ಗಣನೀಯ ಏರಿಕೆ ಕಂಡಿದ್ದು, ಒಂದು ವಾರದಲ್ಲಿ 9 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ವಾರ 26.372 ಟಿಎಂಸಿಯಷ್ಟು ಶೇಖರಣೆಯಾಗಿತ್ತು. ಇಂದು 35.282 ಟಿಎಂಸಿ ನೀರು ಶೇಖರಣೆಯಾಗಿದೆ.

ಇಂದಿನ ಕೆಆರ್‌ಎಸ್ ನೀರಿನ ಮಟ್ಟ

ಗರಿಷ್ಠ ಮಟ್ಟ - 124.80 ಅಡಿ.
ಇಂದಿನ ಮಟ್ಟ - 113.40 ಅಡಿ.
ಗರಿಷ್ಠ ಸಾಮರ್ಥ್ಯ - 49.452 ಟಿಎಂಸಿ.
ಇಂದಿನ ಸಾಮರ್ಥ್ಯ - 35.282 ಟಿಎಂಸಿ
ಒಳ ಹರಿವು - 36,772 ಕ್ಯೂಸೆಕ್
ಹೊರ ಹರಿವು - 2,448 ಕ್ಯೂಸೆಕ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment