/newsfirstlive-kannada/media/post_attachments/wp-content/uploads/2024/06/KRS.jpg)
ಮಂಡ್ಯ: ಕೆಆರ್ಎಸ್ (ಕೃಷ್ಣಾ ರಾಜ ಸಾಗರ) ಜಲಾಶಯದಿಂದ 1 ಲಕ್ಷದ 30 ಸಾವಿರ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ಕಾವೇರಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಕಾವೇರಿ ತುಂಬಿ ಹರಿಯುತ್ತಿರುವುದರಿಂದ ರಾಮಕೃಷ್ಣ ವಿವೇಕಾನಂದ ಆಶ್ರಮ ಜಲಾವೃತವಾಗಿದೆ.
ಇದನ್ನೂ ಓದಿ:‘ಕ್ಯಾಪ್ಟನ್ ಅಲ್ಲ, ಲೀಡರ್ನಂತೆ ಕಾಣಿಸಿದ್ದಾರೆ’.. ರೋಹಿತ್ ಶರ್ಮಾ ಬಗ್ಗೆ ಸೂರ್ಯಕುಮಾರ್ ಅಚ್ಚರಿ ಹೇಳಿಕೆ!
ಕೆಆರ್ಎಸ್ ಜಲಾಶಯದಿಂದ 1 ಲಕ್ಷದ 30 ಸಾವಿರ ಕ್ಯೂಸೆಕ್ ನೀರನ್ನು ಕಾವೇರಿ ನದಿಗೆ ಹರಿಬಿಡಲಾಗಿದೆ. ಹೀಗಾಗಿ ಶ್ರೀರಂಗಪಟ್ಟಣದ ನದಿ ಪಾತ್ರದಲ್ಲಿರುವ ರಾಮಕೃಷ್ಣ ವಿವೇಕಾನಂದರ ಆಶ್ರಮ ಸಂಪೂರ್ಣ ಜಲಾವೃತವಾಗಿದೆ. ಮುಂಜಾಗ್ರತ ಕ್ರಮವಾಗಿ ಆಶ್ರಮದ ಸ್ವಾಮೀಜಿಯನ್ನ ಸ್ಥಳಾಂತರ ಮಾಡಲಾಗಿತ್ತು. ಹೀಗಾಗಿ ಯಾವುದೇ ಹಾನಿ ಸಂಭವಿಸಿಲ್ಲ. ಆಶ್ರಮದ ಮುಂಭಾಗದ ರಸ್ತೆಯಲ್ಲೂ ನೀರು ಹರಿಯುತ್ತಿರುವುದರಿಂದ ಸಂಚಾರವನ್ನ ಸ್ಥಗಿತ ಮಾಡಲಾಗಿದೆ. ಸದ್ಯ ಜಲಾಶಯದಿಂದ ಭಾರೀ ಪ್ರಮಾಣದ ನೀರು ಹೊರಬಿಟ್ಟಿದ್ದರಿಂದ ಕಾವೇರಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ